ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನ್ವಯ ತಮ್ಮ ವಾಹನಗಳನ್ನು ಉನ್ನತೀಕರಿಸುತ್ತಿವೆ. ಹೀರೋ ಸಂಸ್ಥೆಯು ಕೂಡಾ ಬಿಎಸ್-6 ವಾಹನಗಳ ಬಿಡುಗಡೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲಿ ಹೆಚ್‌ಎಫ್ ಡಿಲಕ್ಸ್ ರಸ್ತೆಗಿಳಿದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-6 ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಹೊಸ ವಾಹನಗಳ ಮಾರಾಟ ಮಹತ್ವದ ಬದಲಾವಣೆ ತರುತ್ತಿದ್ದು, ಈಗಾಗಲೇ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮದಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿವೆ. ಹೀರೋ ಮೋಟೊಕಾರ್ಪ್ ಕೂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆ ತಂದಿದ್ದು, ಬಿಎಸ್-6 ಎಂಜಿನ್ ಪ್ರೇರಿತ ಹೆಚ್ಎಫ್ ಡಿಲಕ್ಸ್ ಇದೀಗ ಖರೀದಿಗೆ ಲಭ್ಯವಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಬಿಎಸ್-6 ಹೆಚ್ಎಫ್ ಡಿಲಕ್ಸ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ವೆರಿಯೆಂಟ್ ರೂ.55,925 ಮತ್ತು ಹೈ ಎಂಡ್ ವೆರಿಯೆಂಟ್ ರೂ.57,250 ಬೆಲೆ ಹೊಂದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಹೆಚ್ಎಫ್ ಡಿಲಕ್ಸ್ ಹೈಎಂಡ್ ಮಾದರಿಯಲ್ಲಿ ಹೀರೋ ಸಂಸ್ಥೆಯು ಐ3ಎಸ್ ತಂತ್ರಜ್ಞಾನ ಜೋಡಣೆ ಹೊಂದಿದ್ದು, ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಬೈಕಿನಲ್ಲಿ ಹಳೆಯ ಆವೃತ್ತಿಗಿಂತಲೂ ಹೆಚ್ಚು ಮೈಲೇಜ್ ಮತ್ತು ಪರ್ಫಾಮೆನ್ಸ್ ಖಚಿತವಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಬಿಎಸ್-6 ಎಂಜಿನ್‌ನಿಂದಾಗಿ ಶೇ.9ರಷ್ಟು ಹೆಚ್ಚು ಮೈಲೇಜ್ ಮತ್ತು ಶೇ.6 ರಷ್ಟು ಹೆಚ್ಚು ಪರ್ಫಾಮೆನ್ಸ್ (ವೇಗದ ಆಕ್ಸಿಲೇಟರ್) ಸುಧಾರಣೆಯಾಗಿದ್ದು, ಇದು ಎಂಟ್ರಿ ಲೆವಲ್ ಬೈಕ್ ಮಾದರಿಗಳಲ್ಲಿ ಖರೀದಿ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ 100ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಅಗ್ರಸ್ಠಾನದಲ್ಲಿರುವ ಹೆಚ್ಎಫ್ ಡೀಲಕ್ಸ್ ಮಾದರಿಯು ಸದ್ಯದಲ್ಲೇ 20 ಲಕ್ಷ ಯುನಿಟ್ ಮಾರಾಟದ ಗುರಿತಲುಪುವ ನೀರಿಕ್ಷೆಯಲ್ಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಎಂಜಿನ್ ಸಾಮಾರ್ಥ್ಯ

ಹೆಚ್ಎಫ್ ಡಿಲಕ್ಸ್ ಹೊಸ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 100 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 7.9-ಬಿಎಚ್‌ಪಿ ಮತ್ತು 8-ಎನ್ಎಂ ಟಾರ್ಕ್‌ನೊಂದಿಗೆ ಗರಿಷ್ಠ ಮಟ್ಟದ ಮೈಲೇಜ್ ಹಿಂದಿರುಗಿಸುತ್ತದೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಹೀರೋ ಸಂಸ್ಥೆಯು ಹೊಸ ಹೆಚ್ಎಫ್ ಡೀಲಕ್ಸ್ ಬೈಕಿನಲ್ಲಿ ಹೊಸದಾಗಿ ಟೆಕ್ನೊ ಬ್ಲೂ ಮತ್ತು ಹೆವಿ ಗ್ರಿನ್/ಗ್ರೇ ಬಣ್ಣದ ಆಯ್ಕೆ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಬಣ್ಣಗಳಾದ ಬ್ಲ್ಯಾಕ್/ರೆಡ್, ಬ್ಲ್ಯಾಕ್/ಪರ್ಪಲ್ ಮತ್ತು ಬ್ಲ್ಯಾಕ್/ಗ್ರೇ ಬಣ್ಣಗಳು ಕೂಡಾ ಖರೀದಿಗೆ ಲಭ್ಯವಿವೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಇನ್ನು ಹೊಸ ಬೈಕ್ ಬಿಡುಗಡೆ ಕುರಿತಂತೆ ಮಾತನಾಡಿರುವ ಹೀರೋ ಮೋಟೊಕಾರ್ಪ್‍ನ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮ್ ಕಸ್‍ಬೆಕರ್ ಅವರು, ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ಇನ್ನುಳಿದ ಎಲ್ಲಾ ಬೈಕ್ ಮಾದರಿಗಳು ಉನ್ನತೀಕರಣಗೊಳ್ಳಲಿದ್ದು, ಹೊಸ ಹೆಚ್ಎಫ್ ಡೀಲಕ್ಸ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ವಿನ್ಯಾಸವನ್ನು ಜೋಡಣೆ ಮಾಡಲಾಗಿದೆ ಎಂದಿದ್ದಾರೆ.

ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಹೆಚ್‌ಎಫ್ ಡಿಲಕ್ಸ್ ಬಿಡುಗಡೆ

ಜೊತೆಗೆ ಹೆಚ್ಎಫ್ ಡೀಲಕ್ಸ್ ಮಾದರಿಗಳಲ್ಲಿ ಶೀಘ್ರದಲ್ಲೇ ಏರ್ ಕೂಲ್ಡ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆ ಮಾಡುವುದಾಗಿ ಹೇಳಿದ್ದು, ಇದು ಬೈಕ್ ಪರ್ಫಾಮೆನ್ಸ್ ಹೆಚ್ಚಿಸುವುದಲ್ಲದೇ ಎಂಜಿನ್ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

Most Read Articles

Kannada
English summary
Hero HF Deluxe BS6 Launched In India. Read in Kannada.
Story first published: Wednesday, January 1, 2020, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X