ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೆಚ್ಎಫ್ ಡಿಲಕ್ಸ್ ಬೈಕಿನ ಬಿಎಸ್-6 ಆವೃತ್ತಿಯನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದರು. ಇದೀಗ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಹೀರೋ ಮೋಟೊಕಾರ್ಪ್ ತನ್ನ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕಿನ ಸ್ಟಾಕ್ ಅನ್ನು ಖಾಲಿ ಮಾಡಲು ರೂ.10 ಸಾವಿರದವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ರೀಯಾಯಿಯು ಆಯ್ದ ಡೀಲರ್ ಗಳ ಬಳಿ ಮಾತ್ರ ಲಭ್ಯವಿದೆ ಎಂದು ನಿರೀಕ್ಷಿಸುತ್ತೇವೆ. ಪ್ರಸ್ತುತ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39,900 ಗಳಾಗಿದೆ.

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಹೊಸ ರಿಯಾಯಿತಿಯ ನಂತರ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29,900 ಗಳಾಗಿರಲಿದೆ. ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-6 ನಿಯಮವನ್ನು ಜಾರಿಗೊಳಿಸಿದ್ದಾರೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಈ ಹೊಸ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಿರುವುದರಿಂದ ಹಿಂದಿನ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕಿನ ಸ್ಟಾಕ್ ಅನ್ನು ಖಾಲಿ ಮಾಡುವ ಉದ್ದೇಶದಿಂದ ಹೀರೋ ಮೋಟಾಕಾರ್ಪ್ ಈ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದಾರೆ.

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಹೊಸ ಬಿಎಸ್-6 ಹೆಚ್ಎಫ್ ಡಿಲಕ್ಸ್ ಬೈಕ್ ಮಾದರಿಯು ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ, ಬಿಎಸ್-6 ಹೆಚ್ಎಫ್ ಡಿಲಕ್ಸ್ ಬೇಸ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.55,925 ಮತ್ತು ಹೈ ಎಂಡ್ ವೆರಿಯೆಂಟ್ ರೂ.57,250 ಗಳಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ವೆಸ್ಪಾ ಸ್ಕೂಟರ್‌ಗಳು

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಹೆಚ್ಎಫ್ ಡಿಲಕ್ಸ್ ಹೈಎಂಡ್ ಮಾದರಿಯಲ್ಲಿ ಹೀರೋ ಸಂಸ್ಥೆಯು ಐ3ಎಸ್ ತಂತ್ರಜ್ಞಾನ ಜೋಡಣೆ ಹೊಂದಿದ್ದು, ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಬೈಕಿನಲ್ಲಿ ಹಳೆಯ ಆವೃತ್ತಿಗಿಂತಲೂ ಹೆಚ್ಚು ಮೈಲೇಜ್ ಮತ್ತು ಪರ್ಫಾಮೆನ್ಸ್ ಹೊಂದಿದೆ.

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಎಂಜಿನ್‌ನಿಂದಾಗಿ ಶೇ.9ರಷ್ಟು ಹೆಚ್ಚು ಮೈಲೇಜ್ ಮತ್ತು ಶೇ.6 ರಷ್ಟು ಹೆಚ್ಚು ಪರ್ಫಾಮೆನ್ಸ್ (ವೇಗದ ಆಕ್ಸಿಲೇಟರ್) ಸುಧಾರಣೆಯಾಗಿದೆ. ಇದು ಎಂಟ್ರಿ ಲೆವಲ್ ಬೈಕಿನ ಬೇಡಿಕೆಯನ್ನು ಹೆಚ್ಚಿಸುತ್ತದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಹೆಚ್ಎಫ್ ಡಿಲಕ್ಸ್ ಬೈಕಿನಲ್ಲಿ 100 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್. ಈ ಎಂಜಿನ್ 7.9-ಬಿಹೆಚ್‍ಪಿ ಪವರ್ ಮತ್ತು 8-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-4 ಹೀರೋ ಹೆಚ್ಎಫ್ ಡಿಲಕ್ಸ್ ಬೈಕಿಗೆ ಭರ್ಜರಿ ರೂ.10 ಸಾವಿರದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಈ ಹೊಸ ರಿಯಾಯಿತಿಯ ನಂತರ ಬಿಎಸ್-4 ಹೆಚ್ಎಫ್ ಡಿಲಕ್ಸ್ ಬೈಕನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29,900 ಬೆಲೆಗೆ ಖರೀದಿಸಬಹುದಾಗಿದೆ.

Most Read Articles

Kannada
English summary
BS4 offers: INR 10,000 discount available on Hero HF Deluxe BS4. Read in Kannada.
Story first published: Thursday, May 7, 2020, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X