ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಹೀರೋ ಮೋಟೊಕಾರ್ಪ್ ಅಂತಿಮವಾಗಿ ತನ್ನ ಜನಪ್ರಿಯ ಕರಿಜ್ಮಾ ಬೈಕ್ ಅನ್ನು ಸ್ಥಗಿತಗೊಳಿಸಿದೆ. ಒಂದು ಕಾಲದಲ್ಲಿ ಯುವಕರ ಕನಸಿನ ಬೈಕ್ ಆಗಿದ್ದ ಕರಿಜ್ಮಾ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಜನಪ್ರಿಯ ಕರಿಜ್ಮಾ ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ. ಹೀರೋ ಮೋಟೊಕಾರ್ಪ್ ತನ್ನ ಅಧಿಕೃತ ವೈಬ್‍‍ಸೈಟ್‍ನಿಂದ ಕರಿಜ್ಮಾ ಬೈಕಿನ ಹೆಸರನ್ನು ತೆಗೆದುಹಾಕಲಾಗಿದೆ. ಈ ಮೂಲಕ ಕರಿಜ್ಮಾ ಬೈಕ್ ಸ್ಥಗಿತವಾಗಿರುವುದು ಖಚಿತವಾಗಿದೆ. ಹೀರೋ ಕರಿಜ್ಮಾ ಬೈಕ್ ಅನ್ನು ಕಾಲಕ್ಕೆ ತಕ್ಕಂತೆ ಅದನ್ನು ಅಪ್‍‍ಡೇಟ್ ಮಾಡಲಾಗಿಲ್ಲ. ಹಳೆಯ ಅದೇ ವಿನ್ಯಾಸದಲ್ಲೇ ಈ ಬೈಕ್ ಅನ್ನು ಮಾರಾಟ ಮಾಡಲಾಗುತ್ತಿತ್ತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಫೇರ್ಡ್ ವಿಭಾಗದಲ್ಲಿ ಈ ಬೈಕ್ ಒಂದು ಕಾಲದಲ್ಲಿ ಭಾರತೀಯ ಬೈಕ್ ಪ್ರಿಯರ ಮಚ್ಚಿನ ಬೈಕ್ ಆಗಿತ್ತು. ನಂತರದಲ್ಲಿ ಈ ಸೆಗ್‍‍ಮೆಂಟ್‍‍ನಲ್ಲಿ ಇತರ ಬೈಕ್‍‍ಗಳ ಆಗಮನದಿಂದ ಕರಿಜ್ಮಾ ಬೈಕಿನ ಬೇಡಿಕೆಯು ಕಡಿಮೆಯಾಯ್ತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಹೀರೋ ಮೋಟೊಕಾರ್ಪ್, ತನ್ನ ಮೊದಲ ತಲೆಮಾರಿನ ಕರಿಜ್ಮಾ ಬೈಕ್ ಅನ್ನು 2003ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಮೊದಲ ತಲೆಮಾರಿನ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ ಭಾರೀ ಜನಪ್ರಿಯತೆಯನ್ನು ಪಡೆದಿತ್ತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ನಂತರದ ವರ್ಷಗಳಲ್ಲಿ ಹೀರೋ ಮೋಟೊಕಾರ್ಪ್ ಈ ಬೈಕಿನಲ್ಲಿ ಹಲವಾರು ಅಪ್‍‍ಡೇಟ್‍‍ಗಳನ್ನು ಮಾಡಿತು. ಆದರೆ ಈ ಅಪ್‍‍ಡೇಟ್‍‍ಗಳಿಂದಾಗಿ ಮೊದಲಿನ ವೇಗವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಕಳೆದ ಕೆಲವು ತಿಂಗಳುಗಳಿಂದ, ಹೀರೋ ಕಂಪನಿಯ ದೇಶಿಯ ದ್ವಿಚಕ್ರ ವಾಹನದ ಸೆಗ್‍‍ಮೆಂಟಿನಲ್ಲಿ ಕರಿಜ್ಮಾದ ಯಾವುದೇ ಬೈಕುಗಳ ಮಾರಾಟವಾಗಿಲ್ಲ. ಮಾರಾಟದ ಅಂಕಿ ಅಂಶಗಳ ಪ್ರಕಾರ ಫೆಬ್ರವರಿ 2019ರಿಂದ ಈ ಬೈಕಿನ ಒಂದೇ ಒಂದು ಬೈಕು ಸಹ ಮಾರಾಟವಾಗಿಲ್ಲ.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಆದರೆ ಹೀರೋ ಕಂಪನಿಯು ಈ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳುವ ತನ್ನ ನಿರ್ಧಾರದಲ್ಲಿ ಅಚಲವಾಗಿ ಉಳಿದಿತ್ತು. ಈ ಬೈಕ್‍‍ನ ಉತ್ಪಾದನೆಯು ಸ್ಥಗಿತಗೊಳ್ಳುವುದಿಲ್ಲವೆಂದು ಹಾಗೂ ಭಾರತದಲ್ಲಿ ಈ ಬೈಕ್ ತನ್ನ ಉತ್ಪನ್ನ ಶ್ರೇಣಿಯ ಒಂದು ಭಾಗವಾಗಿ ಉಳಿಯಲಿದೆ ಎಂದು ಹೀರೋ ಮೋಟೊಕಾರ್ಪ್ ಹೇಳಿದ್ದರು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಆದರೆ ಬಿ‍ಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದು ಅನಿವಾರ್ಯವಾಗಿತ್ತು. ಇದು ದುಬಾರಿಯಾಗಲಿದೆ ಮತ್ತು ಈ ಬೈಕ್ ಮಾರಾಟವಾಗದೇ ಇರುವುದರಿಂದ ಸ್ಥಗಿತಗೊಳಿಸುವುದು ಅನಿವಾರ್ಯವಾಗಿತ್ತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಹೀರೋ ಕರಿಜ್ಮಾ ಬೈಕಿನಲ್ಲಿ 223 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 19.2 ಬಿ‍‍ಹೆಚ್‍‍ಪಿ ಪವರ್ ಹಾಗೂ 19.35 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಕರಿಜ್ಮಾ ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿ ಬಿಡುಗಡೆ ಮಾಡಿದ ಮೊದಲ ಪ್ರೀಮಿಯಂ ಬೈಕುಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು.

ಇತಿಹಾಸದ ಪುಟ ಸೇರಿದ ಜನಪ್ರಿಯ ಕರಿಜ್ಮಾ ಬೈಕ್

ಆದರೆ ಹೊಸ ಅಪ್‍‍ಡೇಟ್‍‍ಗಳನ್ನು ಪಡೆದ ನಂತರ ಬೈಕ್ ಮೊದಲಿನ ವೇಗವನ್ನು ಹೊಂದಲು ವಿಫಲವಾಯಿತು. ಹೀರೋ ಕರಿಜ್ಮಾ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 220ಎಫ್ ಹಾಗೂ ಕೆಟಿಎಂ ಡ್ಯೂಕ್ 200 ಬೈಕುಗಳಿಗೆ, ಆ ಬೈಕುಗಳ ಆರಂಭಿಕ ದಿನಗಳಲ್ಲಿ ಪೈಪೋಟಿ ನೀಡುತ್ತಿತ್ತು.

Most Read Articles

Kannada
English summary
Hero Karizma BS6 ruled out. Read in Kannada.
Story first published: Saturday, February 15, 2020, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X