ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಮೆಸ್ಟ್ರೋ ಎಲೆಕ್ಟ್ರಿಕ್ ಪ್ರೊಟೊ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಹೀರೋ ಇಮೆಸ್ಟ್ರೋ ಸ್ಕೂಟರಿನ ಚಿತ್ರವನ್ನು 91ವ್ಹೀಲ್ಸ್ ಬಹಿರಂಗಪಡಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಈ ಹೊಸ ಎಲೆಕ್ಟ್ರಿಕ್ ಮೆಸ್ಟ್ರೋ ಸ್ಕೂಟರ್ ಅನ್ನು ಈ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೀರೋ ಇಮೆಸ್ಟ್ರೋ ಸ್ಕೂಟರ್ ಸಾಮಾನ್ಯ ಮಾದರಿಯಾದ ಮೆಸ್ಟ್ರೋ 125 ಅನ್ನು ಆಧರಿಸಿದೆ. ಈ ಇಮೆಸ್ಟ್ರೋ ಸ್ಕೂಟರ್ ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗೆ ಮಾಸ್ಕ್- ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿರುತ್ತದೆ.

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ಗಳನ್ನು ಸಹ ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಾಮಾನ್ಯ ಮಾದರಿಗೆ ಹೋಲಿಸಿದರೆ ಕೆಲವು ಇತರ ಫೀಚರ್ ಗಳನ್ನು ಹೊಂದಿರುತ್ತದೆ. ಹೀರೋ ಇಮೆಸ್ಟ್ರೋ ಸ್ಕೂಟರ್ ಬಗ್ಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

MOST READ: ಹೀರೋ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ಭರ್ಜರಿ ರಿಯಾಯಿತಿ

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಬಹಿರಂಗವಾದ ಚಿತ್ರಗಳ ಮಾಹಿತಿಯ ಪ್ರಕಾರ ಎಲೆಕ್ಟ್ರಿಕ್ ಸ್ಕೂಟರ್ ಫುಟ್‌ಬೋರ್ಡ್ ಅಡಿಯಲ್ಲಿ ಇರಿಸಲಾಗಿರುವ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕ್ ನೊಂದಿಗೆ ಶಾಶ್ವತ ಮ್ಯಾಗ್ನೆಟ್ ಹಬ್-ಮೌಂಟೆಡ್ ಮೋಟರ್ ಅನ್ನು ಹೊಂದಿರುತ್ತದೆ.

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಮೆಸ್ಟ್ರೋ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹ್ಯಾಡಲ್ ಬಾರ್ ಅನ್ನು ಹೊಂದಿದೆ, ರೋಟರಿ ಸ್ವಿಚ್ ಬಳಸಿ ಟಾಗಲ್ ಮಾಡಬಹುದಾದ ಮಲ್ಟಿಪಲ್ ರೈಡಿಂಗ್ ಮೋಡ್ ಗಳಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ. ಈ ಸ್ಕೂಟರ್‌ನ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ ಸಿಸ್ಟಂ ಅನ್ನು ಹೊಂದಿರುತ್ತದೆ.

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಸಾಮಾನ್ಯ ಮೆಸ್ಟ್ರೋ ಸ್ಕೂಟರ್ ನಲ್ಲಿ 125 ಸಿಸಿಯ ಬಿ‍ಎಸ್ 6 ಎಂಜಿನ್ ಹೊಂದಿವೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.4 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‌ಟಿಆರ್ ಬೈಕುಗಳು

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಇದರೊಂದಿಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಎಇ -47 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಕರೋನ ವೈರಸ್ ಭೀತಿಯಿಂದ ಎಇ -47 ಎಲೆಕ್ಟ್ರಿಕ್ ಬೈಕ್ ಬಿಡುಗಡೆಯನ್ನು ಮುಂದೂಡಲಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಕರೋನಾ ವೈರಸ್ ನಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಪರಿಣಾಮ ಬೀರಿದೆ. ಆದರೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂದು ಹೇಳಿದೆ.

Most Read Articles

Kannada
English summary
Hero MotoCorp To Enter EV Segment: Electric Maestro Scooter Spotted Ahead Of Launch. Read in Kananda.
Story first published: Wednesday, May 6, 2020, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X