Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಮುದಾಯ ಆರೋಗ್ಯ ಕೇಂದ್ರಗಳಿಗೆ ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೊ ಮೊಟೋಕಾರ್ಪ್
ಕರೋನಾ ವೈರಸ್‌ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮನವಿ ಸ್ಪಂದಿಸಿರುವ ಹಲವು ಆಟೋ ಕಂಪನಿಗಳು ಭಾರೀ ಪ್ರಮಾಣದ ಆರ್ಥಿಕ ಸಹಕಾರ ನೀಡಿರುವುದಲ್ಲದೆ ಗ್ರಾಮೀಣ ಭಾಗದ ಆರೋಗ್ಯ ಅಭಿವೃದ್ದಿ ಯೋಜನೆಗಳಿಗೂ ಚಾಲನೆ ನೀಡಿವೆ.

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ ಅಡಿ ಗ್ರಾಮೀಣ ಭಾಗದ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಆಟೋ ಕಂಪನಿಗಳು ವಿವಿಧ ಮಾದರಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಹೀರೋ ಮೋಟೊಕಾರ್ಪ್ ಕೂಡಾ ಈಗಾಗಲೇ 60ಕ್ಕೂ ಹೆಚ್ಚು ಬೈಕ್ ಆ್ಯಂಬುಲೆನ್ಸ್‌ಗಳನ್ನು ದೇಶದ ವಿವಿಧಡೆ ಹಂಚಿಕೆ ಮಾಡಿದೆ. ಇದೀಗ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ವಿಶೇಷ ಸೌಲಭ್ಯವುಳ್ಳ 2 ಬೈಕ್ ಆ್ಯಂಬುಲೆನ್ಸ್‌ಗಳನ್ನು ದೇಣಿಗೆ ನೀಡಿದೆ.

ಗ್ರಾಮಿಣ ಭಾಗದಲ್ಲಿ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಲು ಸಹಕಾರಿಯಾಗುವಂತೆ ವಿಶೇಷ ಸೌಲಭ್ಯವುಳ್ಳ ಬೈಕ್ ಆ್ಯಂಬುಲೆನ್ಸ್‌ಗಳನ್ನು ಸಿದ್ದಪಡಿಸುತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಿದೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿನ ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೈಕ್ ಆ್ಯಂಬುಲೆನ್ಸ್ ಹಸ್ತಾಂತರ ಮಾಡಿರುವ ಹೀರೊ ಮೋಟೊಕಾರ್ಪ್ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾದರಿಯ ಬೈಕ್ ಆ್ಯಂಬುಲೆನ್ಸ್‌ಗಳನ್ನು ಸಿದ್ದಪಡಿಸುವುದಾಗಿ ಭರವಸೆ ನೀಡಿದೆ.

200ಸಿಸಿ ಸಾಮಾರ್ಥ್ಯದ ಎಕ್ಸ್‌ಟ್ರಿಮ್ 200ಆರ ಬೈಕ್ ಮಾದರಿಗಳಲ್ಲಿ ಮೊಬೈಲ್ ಆ್ಯಂಬುಲೆನ್ಸ್ ಸೌಲಭ್ಯವನ್ನು ಅಳವಡಿಕೆ ಮಾಡಿರುವ ಹೀರೋ ಕಂಪನಿಯು ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ತುರ್ತು ಉಪಕರಣಗಳನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಿದ್ದು, ಇದರಲ್ಲಿ ರೋಗಿಯು ಮಲಗಿಕೊಳ್ಳಲು ಸಣ್ಣದಾದ ಬೆಡ್, ಆ್ಯಕ್ಸಿಜನ್ ಸಿಲಿಂಡರ್, ಅಗ್ನಿಶಾಮಕ ಮತ್ತು ಸೈರನ್ ಸೇರಿಸಿದೆ.

ಇನ್ನು ಕೋವಿಡ್ 19 ವೈರಸ್ ವಿರುದ್ಧ ಹೋರಾಟಕ್ಕಾಗಿ ಹೀರೋ ಸಮೂಹ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತುರ್ತು ಪರಿಹಾರ ನಿಧಿಗಾಗಿ ಬರೋಬ್ಬರಿ ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಉಪಕರಣಗಳನ್ನು ಸಹ ದೇಣಿಗೆಯಾಗಿ ನೀಡುತ್ತಿದೆ.

ಹೀರೋ ಸಂಸ್ಥೆಯು ಘೋಷಣೆ ಮಾಡಿರುವ ಒಟ್ಟು ರೂ.100 ಕೋಟಿ ದೇಣಿಗೆ ಹಣದಲ್ಲಿ ರೂ.50 ಕೋಟಿ ಹಣವನ್ನು ಈಗಾಗಲೇ ಪ್ರಧಾನಮಂತ್ರಿಗಳ ತುರ್ತು ಪರಿಹಾರ ನಿಧಿಗೆ ವರ್ಗಾವಣೆ ಮಾಡಲಾಗಿದ್ದು, ಇನ್ನುಳಿದ ರೂ.50 ಕೋಟಿ ಹಣದಲ್ಲಿ ತುರ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮತ್ತು ಖರೀದಿ ಮಾಡಿ ಅಗತ್ಯ ಆರೋಗ್ಯ ಕೇಂದ್ರಗಳಲ್ಲಿ ಹಸ್ತಾಂತರ ಮಾಡುವುದಾಗಿ ಒಪ್ಪಿಗೆ ಸೂಚಿಸಿದೆ.

ಇದೀಗ ಹಂತ-ಹಂತವಾಗಿ ಬೈಕ್‌ಗಳಲ್ಲೇ ಜೋಡಣೆ ಮಾಡಿರುವ ಮೊಬೈಲ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ರಾಜ್ಯಗಳಲ್ಲಿ ಹಂಚಿಕೆ ಮಾಡಲಿದೆ.

ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಹೀರೋ ಕಂಪನಿಯು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ಇನ್ನುಳಿದ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ.