ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಗುರುಗ್ರಾಮ್‌ದಲ್ಲಿರುವ ಆಸ್ಪತ್ರೆಗೆ ಎರಡು ಪ್ರಥಮ ಪ್ರತಿಕ್ರಿಯೆ ವಾಹನಗಳನ್ನು (ಎಫ್‌ಆರ್‌ವಿ) ದಾನ ಮಾಡಿರುವುದಾಗಿ ಹೀರೋ ಮೋಟೊಕಾರ್ಪ್ ಕಂಪನಿ ಹೇಳಿದೆ. ಭಾರತದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಈ ಎರಡೂ ಎಫ್‌ಆರ್‌ವಿಗಳನ್ನು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಯೋಜನೆಯಡಿ ದಾನ ಮಾಡಿದೆ.

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಈ ವಾಹನಗಳನ್ನು ಬಳಸಲಾಗುತ್ತದೆ. ಈ ಎಫ್‌ಆರ್‌ವಿ ವಾಹನಗಳನ್ನು ಆಸ್ಪತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಬಳಸಲಿದ್ದು, ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುತ್ತದೆ.

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಈ ಎಫ್‌ಆರ್‌ವಿಗಳನ್ನು ತಯಾರಿಸಲು ಕಂಪನಿಯು ತನ್ನ ಹೀರೋ ಎಕ್ಸ್‌ಟ್ರೀಮ್ 200 ಆರ್ ಬೈಕ್ ಅನ್ನು ಕಸ್ಟಮೈಸ್ ಮಾಡಿದೆ. ಕಂಪನಿಯು ಈ ಎಫ್‌ಆರ್‌ವಿಗಳಲ್ಲಿ ಪೂರ್ಣ ಪ್ರಮಾಣದ ಸ್ಟ್ರೆಚರ್ ಹಾಗೂ ಫೋಲ್ಡ್ ಮಾಡಬಹುದಾದ ಹುಡ್ ಗಳನ್ನು ಅಳವಡಿಸಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಈ ಎಫ್‌ಆರ್‌ವಿಗಳಲ್ಲಿ ಫಸ್ಟ್ ಏಡ್ ಕಿಟ್, ಆಕ್ಸಿಜನ್ ಸಿಲಿಂಡರ್‌, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಇನ್ನಿತರ ಸುರಕ್ಷತಾ ಫೀಚರ್ ಗಳಾದ ಎಲ್ಇಡಿ ಫ್ಲ್ಯಾಷ್ ಲೈಟ್, ಫೋಲ್ಡಬಲ್ ಬೀಕನ್ ಲೈಟ್, ಎಮರ್ಜೆನ್ಸಿ ವೈರ್ ಲೆಸ್ ಅನೌನ್ಸ್ ಸಿಸ್ಟಂ ಹಾಗೂ ಸೈರನ್ ಗಳನ್ನು ಸಹ ಅಳವಡಿಸಲಾಗಿದೆ.

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೀರೋ ಮೋಟೊಕಾರ್ಪ್ ತನ್ನದೇ ಆದ ರೀತಿಯಲ್ಲಿ ಕೈಜೋಡಿಸಿದೆ ಎಂದು ಕಂಪನಿಯ ಮುಖ್ಯ ಮಾಹಿತಿ ಅಧಿಕಾರಿ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವಿಜಯ್ ಸೇಥಿ ಹೇಳಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಈ ಯೋಜನೆಯಡಿಯಲ್ಲಿ ಹೀರೋ ಮೋಟೊಕಾರ್ಪ್ ಎಫ್‌ಆರ್‌ವಿಗಳನ್ನು ದಾನ ಮಾಡುತ್ತಿದೆ. ಈ ಎಫ್‌ಆರ್‌ವಿಗಳ ನೆರವಿನಿಂದ ಆರೋಗ್ಯ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶಗಳ ರೋಗಿಗಳಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ. ಈ ಎಫ್‌ಆರ್‌ವಿ ವಾಹನಗಳನ್ನು ಹೀರೋಸ್ ಸೆಂಟರ್ ಆಫ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ವಿನ್ಯಾಸಗೊಳಿಸಿದೆ.

ಎಫ್‌ಆರ್‌ವಿಗಳನ್ನು ದಾನ ಮಾಡಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ಕರೋನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ 1.4 ಮಿಲಿಯನ್ ಫುಡ್ ಪ್ಯಾಕೆಟ್‌, 37,000 ಲೀಟರ್ ಸ್ಯಾನಿಟೈಜರ್‌, 3 ಮಿಲಿಯನ್ ಫೇಸ್ ಮಾಸ್ಕ್ ಹಾಗೂ 15,000 ಪಿಪಿಇ ಕಿಟ್‌ಗಳನ್ನು ಸರ್ಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ ಹಾಗೂ ಇತರ ಏಜೆನ್ಸಿಗಳಿಗೆ ವಿತರಿಸಿದೆ.

Most Read Articles

Kannada
English summary
Hero motocorp donates first responder vehicles to hospital in Gurugram. Read in Kannada.
Story first published: Sunday, August 9, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X