ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಜನಪ್ರಿಯ ಸ್ಪ್ಲೆಂಡರ್ ಪ್ಲಸ್ ಬೈಕಿನ ಬ್ಲ್ಯಾಕ್ ಅಂಡ್ ಅಸೆಂಟ್ ಎಂಬ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲ್ಯಾಕ್ ಅಂಡ್ ಅಸೆಂಟ್ ವಿಶೇಷ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.64,470ಗಳಾಗಿದೆ. ಈ ಬೈಕಿನಲ್ಲಿರುವ ಟಯರ್, ಚೈನ್ ಕವರ್ ಹಾಗೂ ಎಂಜಿನ್ ಗಳನ್ನು ಪೂರ್ತಿಯಾಗಿ ಕಪ್ಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಬೈಕಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು 3 ಡಿ ಗುಣಮಟ್ಟದ ಆಕ್ಸೆಸರಿಸ್ ಗಳನ್ನು ನೀಡಿದೆ. ಗ್ರಾಹಕರು ಕಂಪನಿಯ ಕಸ್ಟಮೈಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ಆಕ್ಸೆಸರಿಸ್ ಗಳನ್ನು ಪಡೆಯಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲ್ಯಾಕ್ ಅಂಡ್ ಅಸೆಂಟ್ ಸ್ಪೆಷಲ್ ಎಡಿಷನ್ ಬೈಕ್, ಈ ಸೆಗ್ ಮೆಂಟಿನಲ್ಲಿ ಈ ಯೋಜನೆಯನ್ನು ನೀಡುತ್ತಿರುವ ಮೊದಲ ಬೈಕ್ ಆಗಿದೆ. ಗ್ರಾಹಕರು ಬೀಟಲ್ ರೆಡ್, ಫೇರ್ಲಿ ಗೋಲ್ಡನ್ ಹಾಗೂ ಬಂಬಲ್ ಬೀ ಯೆಲ್ಲೋ ಬಣ್ಣಗಳ ಪೈಕಿ ತಮ್ಮಿಷ್ಟದ ಥೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಗ್ರಾಫಿಕ್ ಥೀಮ್‌ಗಳಿಗಾಗಿ ರೂ.899 ಪಾವತಿಸಬೇಕಾಗುತ್ತದೆ. ಗ್ರಾಹಕರು ಗ್ರಾಫಿಕ್ಸ್, 3 ಡಿ ಹೀರೋ ಲೋಗೊ ಹಾಗೂ ರಿಮ್ ಟೇಪ್ ಒಳಗೊಂಡಿರುವ ಸಂಪೂರ್ಣ ಕಿಟ್ ಅನ್ನು ರೂ.1,399ಗಳಿಗೆ ಖರೀದಿಸಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ನೀಡಲಾಗುತ್ತಿರುವ ಈ ಥೀಮ್‌ಗಳನ್ನು ಹೀರೋ ಮೋಟೊಕಾರ್ಪ್ ಕಂಪನಿಯ ಹೀರೋ ಕೊಲ್ಯಾಪ್ಸ್ ಸ್ಪರ್ಧೆಯ ಮೂಲಕ ಆಯ್ದು ಕೊಳ್ಳಲಾಗಿದೆ. 10000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಟಾಪ್ 3 ಥೀಮ್ ವಿನ್ಯಾಸಗಳನ್ನು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನೊಂದಿಗೆ ನೀಡಲಾಗುತ್ತಿದೆ.

ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಗ್ರಾಹಕರು ಯಾವುದೇ ವಿಶೇಷ ಗ್ರಾಫಿಕ್ಸ್ ಇಲ್ಲದ ಈ ವಿಶೇಷ ಆವೃತ್ತಿಯ ಬೈಕುಗಳನ್ನು ಖರೀದಿಸಬಹುದು. ಇದರ ಹೊರತಾಗಿ ಈ ಬೈಕಿನಲ್ಲಿರುವ ಎಂಜಿನ್ ಕಾನ್ಫಿಗರೇಶನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಬೈಕಿನಲ್ಲಿರುವ ಎಂಜಿನ್ 9.5 ಬಿಹೆಚ್‌ಪಿ ಪವರ್ ಹಾಗೂ 8.05 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗ್ರಾಹಕರೇ ಕಸ್ಟಮೈಸ್ ಮಾಡಿಕೊಳ್ಳುವ ಬೈಕ್ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಎಂಜಿನ್ ನೊಂದಿಗೆ 4-ಸ್ಪೀಡಿನ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೀರೋ ಮೋಟೊಕಾರ್ಪ್ ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಬಯಸಿದೆ. ಇದರ ಅಂಗವಾಗಿ ಸ್ಪ್ಲೆಂಡರ್ ಪ್ಲಸ್ ವಿಶೇಷ ಆವೃತ್ತಿಯ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
Hero Motocorp launches Splendor Plus Black edition with customization option. Read in Kannada.
Story first published: Tuesday, October 20, 2020, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X