ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಹೋಂಡಾ ಕಂಪನಿಯು ಮಾರುಕಟ್ಟೆಯಲ್ಲಿರುವ ಸಿಟಿ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಹೋಂಡಾ ಸಿಟಿ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಕಂಪನಿಯು ಬಿಎಸ್ 4 ಹೋಂಡಾ ಸಿಟಿ ಡೀಸೆಲ್ ರೂಪಾಂತರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯ ವಾಹನಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸಿವೆ. ಅಪ್ ಗ್ರೇಡ್ ಮಾಡಲಾಗದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಭಾರತದ ನಂ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಸಹ ಇದೇ ಹಾದಿಯನ್ನು ತುಳಿದಿದೆ. ಹೀರೋ ಮೋಟೊಕಾರ್ಪ್ ಭಾರತದಲ್ಲಿ ತನ್ನ ಸರಣಿಯ ಏಳು ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಮಾದರಿಗಳನ್ನು ಕಂಪನಿಯು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಬಿಎಸ್ 6 ನಿಯಮ ಜಾರಿಯಾದ ನಂತರ ಈ ಕ್ರಮ ಕೈಗೊಂಡಿದೆ. ಹೀರೋ ಮೋಟೊಕಾರ್ಪ್ ಸ್ಪ್ಲೆಂಡರ್ ಐ 3 ಎಸ್, ಪ್ಯಾಶನ್ ಪ್ರೊ ಐ 3 ಎಸ್, ಪ್ಯಾಶನ್ ಎಕ್ಸ್‌ಪ್ರೊ, ಗ್ಲಾಮರ್, ಗ್ಲಾಮರ್ ಎಫ್‌ಐ ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಇವುಗಳ ಜೊತೆಗೆ ಹೀರೋ ಮೋಟೊಕಾರ್ಪ್ 110 ಸಿಸಿಯ ಮೆಸ್ಟ್ರೋ ಎಡ್ಜ್ ಹಾಗೂ ಡ್ಯುಯೆಟ್ ಸ್ಕೂಟರ್ ಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಿದೆ. ಇವುಗಳ ಬದಲಿಗೆ ಮೆಸ್ಟ್ರೋ ಎಡ್ಜ್ 125 ಹಾಗೂ ಡೆಸ್ಟಿನಿ 125 ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಈ ವಾಹನಗಳಲ್ಲದೇ 200 ಸಿಸಿ ಎಕ್ಸ್‌ಟ್ರೀಮ್ 200 ಅನ್ನು ಸಹ ಕಂಪನಿಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಈ ಬೈಕಿನ ಬದಲಿಗೆ ಹೀರೋ ಎಕ್ಸ್‌ಟ್ರೀಮ್ 160 ಆರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದ್ದು, ಲಾಕ್‌ಡೌನ್ ಮುಗಿದ ನಂತರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಇತ್ತೀಚೆಗಷ್ಟೇ ಹೀರೋ ಎಕ್ಸ್‌ಟ್ರೀಮ್ 160 ಆರ್ ಬೈಕ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ. ಹೀರೋ ಎಕ್ಸ್‌ಟ್ರೀಮ್ 160 ಆರ್ ಬೈಕಿನ ಟೆಸ್ಟ್ ಡ್ರೈವ್ ಗೆ ರಿಜಿಸ್ಟ್ರೇಷನ್ ಆರಂಭಿಸಲಾಗಿದೆ. ಈ ಬೈಕ್ ಅನ್ನು ಕಳೆದ ತಿಂಗಳು ಬಿಡುಗಡೆಗೊಳಿಸಬೇಕಿತ್ತು. ಕರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗಿದೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಬಿಎಸ್ 6 ನಿಯಮಗಳನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಆದರೆ ಹೀರೋ ಮೋಟೊಕಾರ್ಪ್ ಇನ್ನೂ ಮಾರಾಟವಾಗದ ಸುಮಾರು ರೂ.600 ಕೋಟಿಗೂ ಹೆಚ್ಚು ಮೌಲ್ಯದ 1.5 ಲಕ್ಷಕ್ಕೂ ಹೆಚ್ಕಿನ ಬಿಎಸ್ 4 ವಾಹನಗಳನ್ನು ಹೊಂದಿದೆ. ಈ ವಾಹನಗಳ ಮಾರಾಟದ ಮೇಲೆ ಹೀರೋ ಮೋಟೊಕಾರ್ಪ್ ಭಾರಿ ಪ್ರಮಾಣದ ರಿಯಾಯಿತಿ ನೀಡುವ ಸಾಧ್ಯತೆಗಳಿವೆ.

ಹಲವು ಮಾದರಿಗಳ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೋಟೋಕಾರ್ಪ್

ಹೀರೋ ಮೋಟೊಕಾರ್ಪ್ ಇತ್ತೀಚೆಗಷ್ಟೇ ಮಾರ್ಚ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿತ್ತು. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯ ಮಾರಾಟವು 42%ನಷ್ಟು ಕುಸಿದಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಕಳೆದ ತಿಂಗಳು 3,34,647 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

Most Read Articles

Kannada
English summary
Hero Motocorp to discontinue many models in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X