ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಅಮೆರಿಕ ಜನಪ್ರಿಯ ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ಸ್ವತಂತ್ರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮೂಲಕ ಹೀರೋ ಮೋಟೊಕಾರ್ಪ್ ಜೊತೆಗೆ ಪಾಲುದಾರಿಕೆ ಘೋಷಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯು ಮುಂದಿನ ತಿಂಗಳಿನಿಂದ ಹೊಸ ಉದ್ಯಮ ವ್ಯವಹಾರಕ್ಕೆ ಅಧಿಕೃತವಾಗಿ ಚಾಲನೆ ನೀಡುತ್ತಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಮಾರಾಟ ಪಾಲುದಾರರ ವಿರೋಧ ನಡುವೆಯೂ ಹೀರೋ ಮೋಟೊಕಾರ್ಪ್ ಜೊತೆಗೂಡಿ ಭಾರತದಲ್ಲಿ ಬೈಕ್ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೀರೋ ಮೋಟೊಕಾರ್ಪ್ ಕಂನಪನಿಯು ಹೊಸ ಯೋಜನೆಯ ಭಾಗವಾಗಿ ಹಾರ್ಲೆ ಕಂಪನಿಯ ಬೈಕ್ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್ ಆರಂಭಿಸುತ್ತಿದೆ. ಆದರೆ ಹಾರ್ಲೆ ಮತ್ತು ಹೀರೋ ನಡುವಿನ ಪಾಲುದಾರಿಕೆಗೆ ಹಾರ್ಲೆ ಬೈಕ್ ಮಾರಾಟ ಪಾಲುದಾರರಿಂದ ಸಾಕಷ್ಟು ವಿರೋಧ ಕೇಳಿಬಂದಿದ್ದು, ಡೀಲರ್ಸ್ ಅಸೋಶಿಯೆಷನ್‌ನಲ್ಲೂ ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಆದರೆ ವ್ಯಾಪಾರ ವಹಿವಾಟಿನ ಲಾಭದ ಆಧಾರ ಮೇಲೆ ಕಾನೂನಾತ್ಮಕವಾಗಿ ಸ್ವತಂತ್ರ ಬೈಕ್ ಮಾರಾಟಕ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿ ಹೀರೋ ಕಂಪನಿಗೆ ವಹಿಸಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಗ್ರಾಹಕರ ಸೇವೆಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಆದರೂ ಹೀರೋ ಜೊತೆಗೂಡಿದ ವಿಚಾರವಾಗಿ ಹಾರ್ಲೆ ವಿತರಕ ಪಾಲುದಾರರು ಕಂಪನಿಯ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದು, ಪ್ರತಿಭಟನೆಯ ನಡುವೆ ಪ್ರಮುಖ ಹಾರ್ಲೆ ಡೇವಿಡ್ಸನ್ ವಿತರಕ ಪಾಲುದಾರರು ಹೀರೋ ಮೋಟೊಕಾರ್ಪ್ ಹೊಸ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ದೇಶಾದ್ಯಂತ ಪ್ರಮುಖ ನಗರಗಳಲ್ಲಿ 33 ಹಾರ್ಲೆ ಡೇವಿಡ್ಸನ್ ವಿತರಕ ಪಾಲುದಾರರು ಕಾರ್ಯನಿರ್ವಹಿಸಿತ್ತಿದ್ದು, ಪ್ರತಿಭಟನೆಯ ನಡುವೆ ಇದೀಗ ಪ್ರಮುಖ 10 ಡೀಲರ್ಸ್ ಪಾಲುದಾರರು ಹೀರೋ ಕಂಪನಿಯೊಂದಿಗೆ ವಿಲೀನವಾಗಲು ಒಪ್ಪಿಗೆ ಸೂಚಿಸಿದ್ದಾರೆ. ಹೊಸ ಮಳಿಗೆಗಳ ಮೇಲೆ ಈಗಾಗಲೇ ಭಾರೀ ಹೂಡಿಕೆ ಮಾಡಿರುವ ಡೀಲರ್ಸ್‌ಗಳು ಅನಿವಾರ್ಯವಾಗಿ ಮುಂದಿನ ಯೋಜನೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಆದರೆ ಇನ್ನು ಕೆಲವು ಪ್ರಮುಖ ಹಾರ್ಲೆ ಡೇವಿಡ್ಸನ್ ಮಾರಾಟ ಪಾಲುದಾರರು ಕಂಪನಿಯಿಂದ ಸೂಕ್ತ ಪರಿಹಾರ ಒದಗಿಸುವ ತನಕ ಹೊಸ ಪಾಲುದಾರಿಕೆ ಕಂಪನಿಯೊಂದಿಗೆ ಸೇರ್ಪಡೆಯಾಗುವುದಿಲ್ಲವೆಂದು ಪಟ್ಟುಹಿಡಿದ್ದು, ಇತ್ತ ಡೀಲರ್ಸ್ ಪ್ರತಿಭಟನೆಗೆ ಹಾರ್ಲೆ ಕಂಪನಿಯು ಯಾವುದೇ ಪ್ರಕ್ರಿಯೆ ನೀಡುತ್ತಿಲ್ಲ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಹಾರ್ಲೆ ಕಂಪನಿಯು ಮಾರಾಟ ಪಾಲುದಾರರ ಮಳಿಗೆಗಳಿಗಾಗಿ ಈಗಾಗಲೇ ಪ್ರತಿ ಚದರ ಅಡಿಗೆ ಕೇವಲ ರೂ. 1,500 ಪರಿಹಾರ ಘೋಷಣೆ ಮಾಡಿದ್ದು, ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಡೀಲರ್ಸ್‌ಗಳಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯ ನಿರ್ಧಾರಗಳನ್ನು ಸ್ವಾಗತಿಸಿರುವ ಹೀರೋ ಮೋಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟ ಪಾಲುದಾರಿಕೆ ಕಂಪನಿಗಳಿಗೆ ಸೂಕ್ತ ಮಾರಾಟ ಸೌಲಭ್ಯ ಒದಗಿಸುವ ಮತ್ತು ರೈಡರ್ಸ್‌ಗಳಿಗೆ ಈ ಹಿಂದಿನಂತೆಯೇ ಗುಣಮಟ್ಟದ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಭಾರತದಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗೀತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಸ್ವತಂತ್ರ ಬೈಕ್ ಮಾರಾಟ ಮಳಿಗೆಗಳಿಂದಾಗುತ್ತಿರುವ ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಂಡಿರುವ ಹಾರ್ಲೆ ಕಂಪನಿಯು ಆಯ್ದ ನಗರಗಳಲ್ಲಿನ ಪ್ರಮುಖ ಹೀರೋ ಮೋಟೊಕಾರ್ಪ್ ಡೀಲರ್ಸ್‌ಗಳಲ್ಲಿ ಪ್ರತ್ಯೇಕ ವ್ಯವಹಾರ ಸೌಲಭ್ಯಗಳನ್ನು ತೆರೆಯಲಿದೆ.

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಇದರಿಂದ ಡೀಲರ್ಸ್‌ಗಳ ನಿರ್ವಹಣೆಯು ಗಣನೀಯವಾಗಿ ಇಳಿಕೆಯಾಗಲಿದ್ದು, 2021ರ ಜನವರಿಯಿಂದಲೇ ಹಾರ್ಲೆ ಡೇವಿಡ್ಸನ್ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಣೆ ಮಾಡುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್

ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗೀತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಳೆದ ವರ್ಷದಿಂದಲೇ ಸಹಭಾಗೀತ್ವ ಯೋಜನೆ ಕುರಿತು ಮಾತುಕತೆ ನಡೆಸಿದ್ದ ಹಾರ್ಲೆ ಮತ್ತು ಹೀರೋ ಕಂಪನಿಗಳು ಇದೀಗ ಅಂತಿಮವಾಗಿ ಹೊಸ ಯೋಜನೆಗೆ ಚಾಲನೆ ನೀಡಿವೆ.

Most Read Articles

Kannada
English summary
10 Harley-Davidson dealers have decided to join Hero MotoCorp's retail network in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X