ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಜನಪ್ರಿಯ ಮಾದರಿಯಾದ ಪ್ಯಾಶನ್ ಪ್ರೊ ಬೈಕ್ ಅನ್ನು ಬಿಎಸ್-6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಪ್ಯಾಶನ್ ಪ್ರೊ ಬೈಕಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.64,990ಗಳಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಹೀರೋ ಪ್ಯಾಶನ್ ಪ್ರೊ ಬೈಕನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ವಿನ್ಯಾಸ ಮತ್ತು ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ. ಹೀರೋ ಮೋಟೊಕಾರ್ಪ್ ಬಿಎಸ್-6 ಪ್ಯಾಶನ್ ಪ್ರೊ ಬೈಕ್ ಡ್ರಮ್ ಬ್ರೇಕ್ ಮತ್ತು ಫ್ರಂಟ್ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.64,990ಗಳಾಗಿದೆ. ಇನ್ನು ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.67,190 ಗಳಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಹೊಸ ಹೀರೋ ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ನವೀಕರಿಸಿದ ಹೆಡ್‍‍ಲ್ಯಾಂಪ್‍ ಮತ್ತು ಟೇಲ್‍‍‍ಲೈ‍‍ಟ್‍‍ಗಳನ್ನು ಹೊಂದಿದೆ. ಈ ಹೊಸ ಪ್ಯಾಶನ್ ಪ್ರೊ ಬೈಕಿನಲ್ಲಿ ಟೇಲ್ ವಿಭಾಗವು ಹಿಂದಿನ ಮಾದರಿಗಿಂತ ಹೆಚ್ಚು ನಯವಾಗಿದೆ ಮತ್ತು ಬಾಡಿ ಪ್ಯಾನೆಲ್‍ಗಳು ಆಕರ್ಷಕವಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಪ್ಯಾಶನ್ ಪ್ರೊ ಬೈಕಿನಲ್ಲಿರುವ ಮಸ್ಕ್ಲರ್ ಫ್ಯೂಯಲ್ ಟ್ಯಾಂಕ್‍ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿದೆ. ಬಿಎಸ್-6 ಪ್ಯಾಶನ್ ಪ್ರೊ ಬೈಕ್ 6 ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಆರು ಬಣ್ಣಗಳು ಕಪ್ಪು, ಬೂದು, ಹಳದಿ ಮತ್ತು ಕೆಂಪು ಬಣ್ಣವನ್ನು ಒಳಗೊಂಡಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಬಿಎಸ್-6 ಪ್ಯಾಶನ್ ಪ್ರೊ ಬೈಕ್‍‍ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಹೀರೋ ಪ್ಯಾಶನ್ ಬೈಕಿ‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದೆ. ಹೊಸ ಕ್ಲಸ್ಟರ್ ಮೈಲೇಜ್ ಮತ್ತ್ ಇಂಧನ ದಕ್ಷತೆಯ ಅಂಕಿ ಅಂಶಗಳನ್ನು ಒಳಗೊಂಡಂತೆ ಹಲವಾರು ಇತರ ಮಾಹಿತಿಗಳನ್ನು ಒದಗಿಸುತ್ತದೆ. ಬಿಎಸ್-6 ಹೀರೋ ಪ್ಯಾಶನ್ ಬೈಕಿನಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಫ್ರಂಟ್ ಸಸ್ಪೆಂಷನ್ ಅನ್ನು 15 ಎಂಎಂ ಅಷ್ಟು ಹೆಚ್ಚಿಸಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಹೊಸ ಹೀರೋ ಪ್ಯಾಶನ್ ಪ್ರೊ ಬೈಕಿನಲ್ಲಿ ಹೊಸ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿದ್ದ ಕಾರ್ಬ್ಯುರೇಟರ್ ಅನ್ನು ಬದಲಾಯಿಸಿದೆ. ಹೊಸ ಪ್ಯಾಶನ್ ಪ್ರೊ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ಶೇ.5ರಷ್ಟು ಇಂಧನ ಸಾಮರ್ಥ್ಯ ಹೆಚ್ಚಿದೆ. ಈ ಹೊಸ ಬೈಕಿನಲ್ಲಿ ಆಟೋ ಸೈಲ್ ಪಂಕ್ಷನ್ ಅನ್ನು ಹೊಂದಿದೆ. ಇದು ಟ್ರಾಫಿಕ್‍‍ನಲ್ಲಿ ಸುಲಭವಾಗಿ ಸವಾರಿ ಮಾಡಲು ಸಹಕಾರಿಯಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಪ್ಯಾಶನ್ ಪ್ರೊ ಬೈಕಿನಲ್ಲಿ ಬಿಎಸ್-6, 110 ಸಿಸಿ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡ ಬಿಎಸ್-6 ಹೀರೋ ಪ್ಯಾಶನ್ ಪ್ರೊ ಬೈಕ್

ಹೀರೋ ಪ್ಯಾಶನ್ ಪ್ರೊ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದೆ. ಹೀರೋ ಪ್ಯಾಶನ್ ಪ್ರೊ ಬೈಕ್ ಹೊಸ ವಿನ್ಯಾಸ ಮತ್ತು ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಯಾಗಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Hero Passion Pro BS6 Launched In India. Read in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X