ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಬಿ‍ಎಸ್-6 ಎಂಜಿನ್ ಹೊಂದಿರುವ ಹೀರೊ ಪ್ಲೆಷರ್ ಪ್ಲಸ್ 110 ಸ್ಕೂಟರ್ ಅನ್ನು ಈ ವರ್ಷದ ಜನವರಿ ತಿಂಗಳಲ್ಲಿ ಹೀರೊ ಮೋಟೊಕಾರ್ಪ್ ಕಂಪನಿಯು ಬಿಡುಗಡೆಗೊಳಿಸಿತ್ತು. ಇದೀಗ ಮೊದಲ ಬಾರಿಗೆ ಹೀರೊ ಪ್ಲೆಷರ್ ಪ್ಲಸ್ 110 ಸ್ಕೂಟರ್ ಬೆಲೆಯನ್ನು ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯು ಪ್ಲೆಷರ್ ಪ್ಲಸ್ ಸ್ಕೂಟರಿನ ಎರಡು ರೂಪಾಂತರಗಳ ಬೆಲೆಯನ್ನು ಹೆಚ್ಚಿಸಿದೆ. ಪ್ಲೆಷರ್ ಪ್ಲಸ್ ಸ್ಕೂಟರಿನ ಸ್ಟೀಲ್ ವ್ಹೀಲ್ ರೂಪಾಂತರವನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.54,800 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು, ಇದೀಗ ಈ ರೂಪಾಂತರದ ಬೆಲೆಯನ್ನು ರೂ.800 ರವರೆಗೆ ಹೆಚ್ಚಿಸಿದೆ. ಇನ್ನು ಅಲಾಯ್ ವ್ಹೀಲ್ ರೂಪಾಂತರದ ಬೆಲೆಯನ್ನು ರೂ.800 ರವರೆಗೆ ಏರಿಕೆ ಮಾಡಲಾಗಿದೆ.

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಈ ಪ್ಲೆಷರ್ ಪ್ಲಸ್ ಸ್ಕೂಟರ್ ಯುವಜನತೆಯನ್ನು ತನ್ನತ್ತ ಸೆಳೆಯುವ ರೀತಿಯಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಹೊಸ ಪ್ಲೆಷರ್ ಪ್ಲಸ್ 110 ಸ್ಕೂಟರ್ ಹಲವಾರು ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ನಡೆಸಿ ಬಿಡುಗಡೆಗೊಳಿಸಿದ್ದರು.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಪಲ್ಸರ್ 125 ನಿಯೊನ್ ಬೈಕ್

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ 110 ಸ್ಕೂಟರ್ ಹೆಡ್‍‍ಲೈಟ್ ಸುತ್ತಲೂ ಕ್ರೋಮ್, ಹೊಸ ಅಲಾಯ್ ವ್ಹೀಲ್‍‍ಗಳು, ಸೈಡ್‍‍ನಲ್ಲಿ ಹೈಲೈಟ್ ಹಾಗೂ ಮೂರು ಡೈಮಂಷನ್‍‍ಗಳ ಹೊಸ ಕ್ರೋಮ್ ಬ್ಯಾಡ್ಜ್ ಗಳನ್ನು ಹೊಂದಿದೆ.

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಬಿ‍ಎಸ್-6 ಸ್ಕೂಟರ್ 100 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಹೀರೊ ಕಂಪನಿಯ ಎಕ್ಸ್ ಸೆನ್ಸ್ ಟೆಕ್ನಾಲಜಿಯ ಜೊತೆಗೆ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಹಿಂದಿನ ಬಿ‍ಎಸ್ 4 ಎಂಜಿನ್ ಹೊಂದಿರುವ ಸ್ಕೂಟರ್‍‍ಗಳಿಗೆ ಹೋಲಿಸಿದರೆ ಬಿ‍ಎಸ್ 6 ಎಂಜಿನ್‍‍ನ ಹೊಸ ಸ್ಕೂಟರ್ 10% ಹೆಚ್ಚು ಫ್ಯೂಯಲ್ ಎಫಿಶಿಯನ್ಸಿಯನ್ನು ಹೊಂದುವುದರ ಜೊತೆಗೆ 10% ಹೆಚ್ಚು ಆಕ್ಸೆಲರೇಷನ್ ನೀಡುತ್ತದೆ.

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಈ ಹೊಸ ಸ್ಕೂಟರ್ ಅನ್ನು ಸ್ಟೀಲ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿವೆ. ಈ ಸ್ಕೂಟರ್ ಗ್ಲಾಸಿ ಬ್ಲಾಕ್, ಗ್ಲಾಸಿ ಬ್ಲೂ, ಗ್ಲಾಸ್ ರೆಡ್, ಗ್ಲಾಸಿ ವೈಟ್, ಮ್ಯಾಟ್ ಆಕ್ಸಿಸ್ ಗ್ರೇ, ಮ್ಯಾಟ್ ಗ್ರೀನ್ ಹಾಗೂ ಮ್ಯಾಟ್ ರೆಡ್ ಎಂಬ ಏಳು ಬಣ್ಣಗಳಲ್ಲಿ ಲಭ್ಯವಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಹೀರೋ ಮೋಟೊಕಾರ್ಪ್ ಹೆಚ್‌ಎಫ್ ಡೀಲಕ್ಸ್ ಕಿಕ್ ಸ್ಟಾರ್ಟ್‌ನ ಬಿಎಸ್-6 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೀರೋ ಹೆಚ್‌ಎಫ್ ಡೀಲಕ್ಸ್ ಕಿಕ್ ಸ್ಟಾರ್ಟ್ ಬಿಎಸ್ 6 ಬೆಲೆ ಎಕ್ಸ್ ಶೋರೂಂ ದರದಂತೆ ರೂ.46,800ಗಳಾಗಿದೆ.

ದುಬಾರಿಯಾಯ್ತು ಬಿ‍ಎಸ್-6 ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೀರೊ ಪ್ಲೆಷರ್ ಪ್ಲಸ್ 110 ಸ್ಕೂಟರ್‌ನ ಎರಡು ರೂಪಾಂತರಗಳಿಗೂ ರೂ.800 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆ ಮಾಡಿರುವುದರಿಂದ ಹೀರೊ ಪ್ಲೆಷರ್ ಪ್ಲಸ್ ಸ್ಕೂಟರ್‌ನ ಮಾರಾಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
BS6 Hero Pleasure+ receives a marginal price hike. Read In Kannada.
Story first published: Friday, June 5, 2020, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X