ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೀರೊ ಪ್ಲೆಷರ್ ಪ್ಲಸ್ 110 ಎಫ್‍ಐ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಸ್ಕೂಟರಿನ ಬೆಲೆ ರೂ.54,800ರಿಂದ ರೂ.56,800ಗಳಾಗಿರಲಿದೆ. ಹೊಸ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಈ ಸ್ಕೂಟರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಿದ್ದು, ಕಂಪನಿಯು ವಿತರಣೆಯನ್ನು ಸಹ ಆರಂಭಿಸಿದೆ. ಹೀರೊ ಮೋಟೊ‍‍ಕಾರ್ಪ್‍‍ನ ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್ ಮುಖ್ಯಸ್ಥರಾದ ಮಾಲೊ ಲೆ ಮಸ್ಸಾನ್‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ನಮ್ಮ ಕಂಪನಿಯ ವಾಹನಗಳನ್ನು ಬಿ‍ಎಸ್ 6 ನಿಯಮಕ್ಕೆ ತಕ್ಕಂತೆ ಬದಲಿಸಲಾಗುತ್ತಿದೆ. ಹೆ‍ಎಫ್ ಡೀಲಕ್ಸ್, ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಬೈಕ್‍‍ಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದ ನಂತರ ಪ್ಲೆಷರ್ ಪ್ಲಸ್ 110 ಸ್ಕೂಟರ್ ಅನ್ನು ಸಹ ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಹೇಳಿದರು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಹೀರೊ ಮೋಟೊಕಾರ್ಪ್ ಹೊಂದಿರುವ ಗ್ರಾಹಕರನ್ನು ಗಮನಿಸಿದರೆ, ಹೊಸ ಪ್ಲೆಷರ್ ಪ್ಲಸ್ ಸಹ ಯುವಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ. ಮುಂಬರುವ ದಿನಗಳಲ್ಲಿ ಬಿ‍ಎಸ್ 6 ಎಂಜಿನ್ ಹೊಂದಿರುವ ಮತ್ತಷ್ಟು ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಹೊಸ ಪ್ಲೆಷರ್ ಪ್ಲಸ್ 110 ಸ್ಕೂಟರ್ ಹಲವಾರು ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ಹೊಂದಿದೆ. ಇವುಗಳಲ್ಲಿ ಹೆಡ್‍‍ಲೈಟ್ ಸುತ್ತಲೂ ಕ್ರೋಮ್, ಹೊಸ ಅಲಾಯ್ ವ್ಹೀಲ್‍‍ಗಳು, ಸೈಡ್‍‍ನಲ್ಲಿ ಹೈಲೈಟ್ ಹಾಗೂ ಮೂರು ಡೈಮಂಷನ್‍‍ಗಳ ಹೊಸ ಕ್ರೋಮ್ ಬ್ಯಾಡ್ಜ್ ಗಳು ಸೇರಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಹೊಸ ಸ್ಕೂಟರ್ 100 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಹೀರೊ ಕಂಪನಿಯ ಎಕ್ಸ್ ಸೆನ್ಸ್ ಟೆಕ್ನಾಲಜಿಯ ಜೊತೆಗೆ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ 8 ಬಿ‍‍ಹೆಚ್‍‍ಪಿ ಪವರ್ ಹಾಗೂ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಎಂಜಿನ್ ಹೊಂದಿರುವ ಸ್ಕೂಟರ್‍‍ಗಳಿಗೆ ಹೋಲಿಸಿದರೆ ಬಿ‍ಎಸ್ 6 ಎಂಜಿನ್‍‍ನ ಹೊಸ ಸ್ಕೂಟರ್ 10% ಹೆಚ್ಚು ಫ್ಯೂಯಲ್ ಎಫಿಶಿಯನ್ಸಿಯನ್ನು ಹೊಂದುವುದರ ಜೊತೆಗೆ 10% ಹೆಚ್ಚು ಆಕ್ಸೆಲರೇಷನ್ ನೀಡುತ್ತದೆ ಎಂದು ಹೀರೊ ಕಂಪನಿ ಹೇಳಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಪ್ಲೆಷರ್ ಪ್ಲಸ್ 110 ಸ್ಕೂಟರ್ ಅನ್ನು ರಾಜಸ್ತಾನದ ಜೈಪುರದಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯ ರಿಸರ್ಚ್ ಅಂಡ್ ಡೆವಲಪ್‍‍ಮೆಂಟ್ ಘಟಕದ ಇನ್ನೊವೇಶನ್ ಹಾಗೂ ಟೆಕ್ನಾಲಜಿ ಕೇಂದ್ರದಲ್ಲಿ ತಯಾರಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಈ ಹೊಸ ಸ್ಕೂಟರ್ ಅನ್ನು ಸ್ಟೀಲ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜೊತೆಗೆ ಈ ಸ್ಕೂಟರ್ ಅನ್ನು ಗ್ಲಾಸಿ ಬ್ಲಾಕ್, ಗ್ಲಾಸಿ ಬ್ಲೂ, ಗ್ಲಾಸ್ ರೆಡ್, ಗ್ಲಾಸಿ ವೈಟ್, ಮ್ಯಾಟ್ ಆಕ್ಸಿಸ್ ಗ್ರೇ, ಮ್ಯಾಟ್ ಗ್ರೀನ್ ಹಾಗೂ ಮ್ಯಾಟ್ ರೆಡ್ ಎಂಬ ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಹೀರೋ ಮೋಟೊಕಾರ್ಪ್ ಕಳೆದ ವರ್ಷವೇ ತನ್ನ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 4ನಿಂದ ಬಿ‍ಎಸ್ 6 ಎಂಜಿನ್‍‍ಗೆ ಬದಲಿಸಲು ಆರಂಭಿಸಿತ್ತು. ಈಗಾಗಲೇ ಹೀರೋ ಮೋಟೊಕಾರ್ಪ್ ಕಂಪನಿಯು ಸ್ಪ್ಲೆಂಡರ್ ಐ‍‍ಸ್ಮಾರ್ಟ್ ಹಾಗೂ ಹೆಚ್‍ಎಫ್ ಡೀಲಕ್ಸ್ ಬೈಕ್‍‍ಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಹೀರೊ ಪ್ಲೆಷರ್ ಪ್ಲಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಬಿ‍ಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಇದಕ್ಕೂ ಮುನ್ನವೇ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುತ್ತಿವೆ. ಏಪ್ರಿಲ್ 1ರೊಳಗೆ ಮತ್ತಷ್ಟು ಬಿ‍ಎಸ್ 6 ವಾಹನಗಳು ಬಿಡುಗಡೆಯಾಗಲಿವೆ.

Most Read Articles

Kannada
English summary
Hero Pleasure+ 110 BS6 Models Launched In India Starting At Rs 54,800. Read in Kannada.
Story first published: Thursday, January 30, 2020, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X