Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಮಾರ್ಟ್‌ಫೋನ್ ಕನೆಕ್ಟೆಡ್ ಫೀಚರ್ ಪಡೆಯಲಿದೆ ಹೀರೋ ಸ್ಕೂಟರ್‌ಗಳು
ಕೆಲವು ವರ್ಷಗಳ ಹಿಂದೆ ಕೇವಲ ಐಷಾರಾಮಿ ಬೈಕುಗಳಲ್ಲಿ ಮಾತ್ರ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ಫೀಚರ್ ಗಳನ್ನು ಹೊಂದಿತ್ತು. ನಂತರದಲ್ಲಿ ದುಬಾರಿ ಸ್ಕೂಟರ್‌ಗಳಿಗೂ ಕೂಡ ಕನೆಕ್ಟಿವಿಟಿ ಹೊಂದಿರುವ ಫೀಚರ್ ಗಳನ್ನು ನೀಡಿದರು.

ಹೀರೋ ಸ್ಕೂಟರ್ ಗಳು ಕೂಡ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಪೀಚರ್ ಅನ್ನು ಪಡೆಯಲಿದೆ. ಮೀಸಲಾದ ಅಪ್ಲಿಕೇಶನ್‌ನ ಸಹಾಯದಿಂದ, ಹೀರೋ ಕನೆಕ್ಟ್ ವಿವಿಧ ಸುರಕ್ಷತಾ ಫಿಚರ್ ಗಳ ಜೊತೆಗೆ ಸ್ಪೀಡ್ ಅಲರ್ಟ್ ಅನ್ನು ಒಳಗೊಂಡಿದ್ದು, ಇದರೊಂದಿಗೆ ಟ್ರಿಪ್ ಮಾಹಿತಿಯನ್ನು ನೀಡುತ್ತದೆ. ಇದು ಡ್ರೈವಿಂಗ್ ಸ್ಕೋರ್ ಎಂಬ ಆಸಕ್ತಿದಾಯಕ ಫೀಚರ್ ಹೊಂದಿದೆ. ಇದು ನಿಮ್ಮ ರೈಡಿಂಗ್ ಗುಣಮಟ್ಟವನ್ನು ಆಧರಿಸಿ ಸ್ಕೂರ್ ನೀಡುತ್ತದೆ.

ಇದರಿಂದ ರೈಡರ್ ನೀವು ಸ್ಕೂಟರ್ ಎಷ್ಟು ಉತ್ತಮವಾಗಿ ಚಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ಫೀಚರ್ ಕುತೂಹಲಕಾರಿ ಮತ್ತು ಆಸಕ್ತಿದಾಯಕರವಾಗಿದೆ. ಇನ್ನು ಇದರೊಂದಿಗೆ ಸುರಕ್ಷತಾ ಫೀಚರ್ ಗಳನ್ನು ಕೂಡ ಒಳಗೊಂಡಿದೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇದರಲ್ಲಿ ಟಾಪಲ್ ಅಲರ್ಟ್ ಅನ್ನು ಒಳಗೊಂಡಿರುತ್ತದೆ, ಇದು ನಿಮ್ಮ ಸ್ಕೂಟರ್ ನೆಲದ ಮೇಲೆ ಬಿದ್ದಾಗ ಅದನ್ನು ಪತ್ತೆ ಹಚ್ಚಿ ನೋಂದಾಯಿತ ಸಂಖ್ಯೆಯ ಅಪ್ಲಿಕೇಶನ್ ಮೂಲಕ ಮಾಹಿತಿ ಅಲರ್ಟ್ ನೀಡುತ್ತದೆ.

ಇನ್ನು ಜಿಪಿಎಸ್ ಸಹಾಯದಿಂದ, ಅಪ್ಲಿಕೇಶನ್ ನೈಜ-ಸಮಯದ ಟ್ರ್ಯಾಕಿಂಗ್ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇನ್ನು ನಿಮ್ಮ ಸ್ಕೂಟರ್ ಇತರರು ಚಲಾನೆ ಮಾಡಲು ಪ್ರಯತ್ನಿಸಿದರೆ ಅಲರ್ಟ್ ಅನ್ನು ನೀಡುತ್ತದೆ. ಸ್ಕೂಟರ್ ಕೊನೆಯ ಪಾರ್ಕಿಂಗ್ ಸ್ಥಳವನ್ನು ಪತ್ತಹಚ್ಚಲು ಮತ್ತು ಜಿಯೋ-ಫೆನ್ಸ್ ಅಲರ್ಟ್ ಫೀಚರ್ ಗಳಿಗಾಗಿ ಅಪ್ಲಿಕೇಶನ್ ಗೂಗಲ್ ಮ್ಯಾಪ್ ಒಳಗೊಂಡಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯು ಹೀರೋ ಕನೆಕ್ಟ್ ಫೀಚರ್ ಅನ್ನು ರೂ.4,999 ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕನೆಕ್ಟ್ ಫೀಚರ್ ಎಕ್ಸ್‌ಪಲ್ಸ್ 200, ಡೆಸ್ಟಿನಿ 125 ಮತ್ತು ಪ್ಲೆಷರ್ ಪ್ಲಸ್ ಸ್ಕೂಟರ್‌ಗಳಲ್ಲಿ ಲಭ್ಯವಿರುತ್ತದೆ.

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ 2020ರ ಅಕ್ಟೋಬರ್ ತಿಂಗಳಲ್ಲಿ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಆದರೆ ಹೀರೋ ಕಂಪನಿಯ ಸ್ಕೂಟರ್ ಗಳು ಮಾರಾಟದಲ್ಲಿ ಪ್ರತಿಸ್ಪರ್ಧಿಗಳದೆರು ಹಿನ್ನಡೆ ಅನುಭವಿಸುತ್ತಿತ್ತು. ಆದರೆ ಇತ್ತೀಚೆಗೆ ಹೀರೋ ಸ್ಕೂಟರ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. 2020ರ ಅಕ್ಟೋಬರ್ ತಿಂಗಳಲ್ಲಿ ಹೀರೋ ಡೆಸ್ಟಿನಿ 125 ಸ್ಕೂಟರ್ ಒಟ್ಟು 26,714 ಯುನಿಟ್‌ಗಳು ಮಾರಾಟವಾಗಿವೆ.

ಇದು ವರ್ಷದಿಂದ ವರ್ಷಕ್ಕೆ ಶೇ.157.58 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೀರೋ ಡೆಸ್ಟಿನಿ 10,371 ಯುನಿಟ್‌ಗಳು ಮಾರಾಟವಾಗಿತ್ತು. ಇನ್ನು ಈ ಡೆಸ್ಟಿನಿ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.