ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೊಸ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯನ್ನು ಎರಡನೇ ಬಾರಿ ಹೆಚ್ಚಿಸಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಕಳೆದ ವರ್ಷದ ನೆವೆಂಬರ್ ತಿಂಗಳಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.64,900 ಪರಿಚಯಿಸಿದ್ದರು. ಆದರೆ ಹೀರೋ ಮೋಟೊಕಾರ್ಪ್ ಕಂಪನಿಯು ಕಳೆದ ತಿಂಗಳು ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯನ್ನು ರೂ.2,200 ರಷ್ಟು ಹೆಚ್ಚಿಸಿದ್ದರು. ಇದೀಗ ಮತ್ತೆ ಈ ಬೈಕಿಗೆ ರೂ,800 ರಷ್ಟು ಬೆಲೆಯನ್ನು ಹೆಚ್ಚಿಸಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಪ್ರಸ್ತುತ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.67,900ಗಳಾಗಿದೆ

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕನ್ನು ಹೊಸ ಡೈಮಂಡ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಉತ್ತಮ ಕಂಟ್ರೋಲ್ ಅನ್ನು ಹೊಂದಿರುತ್ತದೆ. ಈ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ 2048 ಎಂಎಂ ಉದ್ದ, 726 ಅಗಲ ಮತ್ತು 1110 ಎತ್ತರವನ್ನು ಹೊಂದಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ 1270 ಎಂಎಂ ವ್ಹೀಲ್ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಐಸ್ಮಾರ್ಟ್ ಬೈಕಿನಲ್ಲಿ 36 ಎಂಎಂ ವ್ಹೀಲ್ ಬೇಸ್ ಮತ್ತು 11 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಹೊಸ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕನ್ನು ಹಿಂದಿನ ಮಾದರಿಗೆ ಹೋಲಿಸಿದರೆ ದೊಡ್ಡ ಫ್ಯೂಯಲ್ ಟ್ಯಾಂಕ್ ಮತ್ತು ಆಕರ್ಷಕ ಹೆಡ್‌ಲ್ಯಾಂಪ್ ಹೊಂದಿದೆ. ಹೊಸ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ಫೋರ್ಸ್ ಸಿಲ್ವರ್ & ಹೆವಿ ಗ್ರೇ, ಟೆಕ್ನೋ ಬ್ಲೂ & ಬ್ಲ್ಯಾಕ್ ಮತ್ತು ಸ್ಪೋರ್ಟ್ಸ್ ರೆಡ್ & ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಹೊಸ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನಲ್ಲಿ 113.2 ಸಿಸಿ, ಸಿಂಗಲ್-ಸಿಲಿಂಡರ್ ಫ್ಯೂಲ್-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.1 ಬೆಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಹಿಂದಿನ ಬಿಎಸ್-4 ಮಾದರಿಯಲ್ಲಿ 109.15 ಸಿಸಿ ಕಾರ್ಬ್ಯುರೇಟೆಡ್ ಎಂಜಿನ್ ಅನ್ನು ಅಳವಡಿಸಲಾಗಿತ್ತು. ವಿಶೇಷವೆಂದರೆ ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರೂ ಶೇ.10 ರಷ್ಟು ಟಾರ್ಕ್ ಉತ್ಪಾದನೆಯು ಹೆಚ್ಚಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಕರೋನಾ ವೈರಸ್ ವಿರುದ್ದ ಹೋರಾಡಲು ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಸಮೂಹ ಸಂಸ್ಥೆಗಳು ಕೂಡಾ ಒಟ್ಟು ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಉಪಕರಣಗಳನ್ನು ಸಹ ನೀಡುವುದಾಗಿ ಘೋಷಣೆ ಮಾಡಿದೆ.

ಮತ್ತಷ್ಟು ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಹೊಸ ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಹೊಂದಿದೆ. ಹೀರೋ ಕಂಪನಿಯು ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕನ್ನು ಬಿಡುಗಡೆಗೊಳಿಸಿದ ಬಳಿಕ ಎರಡು ಬಾರಿ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಜನಪ್ರಿಯ ಬಿಎಸ್-6 ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ಮತ್ತಷ್ಟು ದುಬಾರಿಯಾಗಿದೆ.

Most Read Articles

Kannada
English summary
BS6 Hero Splendor iSmart gets a price hike again in less than a month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X