ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಮಧ್ಯಮ ಗಾತ್ರದ ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಹೀರೋ ಮೊಟೋಕಾರ್ಪ್ ಸಂಸ್ಥೆಯು ನಿಧಾನವಾಗಿ ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ಬೈಕ್ ಆವೃತ್ತಿಗಳಲ್ಲೂ ಮುಂಚೂಣಿ ಸಾಧಿಸುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಅಡ್ವೆಂಚರ್ ವಿಭಾಗದಲ್ಲಿ ಈಗಾಗಲೇ ಎಕ್ಸ್‌ಪಲ್ಸ್ 200 ಮಾದರಿಯು ಸಾಕಷ್ಟು ಸದ್ದು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಅಡ್ವೆಂಚರ್ ಆವೃತ್ತಿಗಳನ್ನು ಸಿದ್ದಪಡಿಸಿರುವ ಹೀರೋ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಾಗಿ ಕೆಲವು ಫೋಟೋಟೈಪ್ ಬೈಕ್ ಮಾದರಿಗಳನ್ನು ಪ್ರದರ್ಶನಗೊಳಿಸಿದೆ. ಪ್ರದರ್ಶನಗೊಂಡಿರುವ ಫೋಟೋಟೈಪ್ ಬೈಕ್ ಮಾದರಿಗಳು 300ಸಿಸಿ ಯಿಂದ 500ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, ಅಡ್ವೆಂಚರ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿವೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಹೀರೋ ಸಂಸ್ಥೆಯು ಸದ್ಯ ನಿರ್ಮಾಣ ಮಾಡುತ್ತಿರುವ ಹೊಸ ಬೈಕ್‌ಗಳ ಬಗೆಗೆ ಅಧಿಕೃತ ಮಾಹಿತಿ ಇಲ್ಲವಾದರೂ ಪ್ರದರ್ಶನಗೊಂಡ ಫೋಟೋಟೈಪ್ ಮಾದರಿಗಳು 300ಸಿಸಿ ಯಿಂದ 500ಸಿಸಿ ಎಂಜಿನ್‌ನೊಂದಿಗೆ ಸದ್ದು ಮಾಡಲಿವೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಪ್ರದರ್ಶನಗೊಂಡ ಫೋಟೋಟೈಪ್ ಮಾದರಿಗಳನ್ನು ಕೆಟಿಎಂ 390 ಅಡ್ವೆಂಚರ್ ಬೈಕ್ ಗುರಿಯಾಗಿಸಿಕೊಂಡು ಅಭಿವೃದ್ದಿಗೊಳಿಸಲಾಗುತ್ತಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಗಳನ್ನು ಸಹ ಅನಾವರಣಗೊಳಿಸಲು ಹೀರೋ ಸಂಸ್ಥೆಯು ಸಿದ್ದತೆ ನಡೆಸಿದೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಡಕಾರ್ ರ‍್ಯಾಲಿ ನಂತರ ಅಡ್ವೆಂಚರ್ ಮಾದರಿಗಳ ಉತ್ಪಾದನೆ ಮೇಲೆ ಹೆಚ್ಚು ಆಸಕ್ತಿ ವಹಿಸಿರುವ ಹೀರೋ ಸಂಸ್ಥೆಯು ಮೊದಲ ಬಾರಿಗೆ ಹೊಸ ಅಡ್ವೆಂಚರ್ ಫೋಟೋಟೈಪ್ ಮಾದರಿಗಳನ್ನು "ಹೀರೋ ವರ್ಲ್ಡ್ 2020' ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದ್ದು, ಹೊಸ ಬೈಕ್ ಉತ್ಪಾದನಾ ಆವೃತ್ತಿಯನ್ನು ಇದೇ ವರ್ಷಾಂತ್ಯದಲ್ಲಿ ಅನಾವರಣಗೊಳಿಸುವುದಾಗಿ ಹೇಳಿಕೊಂಡಿದೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಮಾಹಿತಿಗಳ ಪ್ರಕಾರ ಹೊಸ ಬೈಕ್ ಮಾದರಿಯು ಎಕ್ಸ್‌ಪಲ್ಸ್ 350 ಅಥವಾ ಎಕ್ಸ್‌ಪಲ್ಸ್ 450 ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳಲ್ಲಿ ಸಾಮಾನ್ಯ ಮಾದರಿಯೊಂದಿಗೆ ರ‍್ಯಾಲಿ ಎಡಿಷನ್‌ಗಳನ್ನು ಕೂಡಾ ಪರಿಚಯಿಸಲಾಗುತ್ತಿದೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಸಾಮಾನ್ಯ ಅಡ್ವೆಂಚರ್ ಬೈಕ್‌ಗಳನ್ನು ಪರ್ಫಾಮೆನ್ಸ್ ಜೊತೆಗೆ ದಿನನಿತ್ಯದ ರೈಡಿಗೂ ಬಳಕೆ ಮಾಡಬಹುದಾಗಿದ್ದು, ರ‍್ಯಾಲಿ ಎಡಿಷನ್‌ಗಳನ್ನು ಕಡ್ಡಾಯವಾಗಿ ಟ್ರಾಕ್ ಮತ್ತು ನಿಗದಿತ ಆಫ್ ರೋಡ್ ಮಾರ್ಗಗಳಲ್ಲಿ ಮಾತ್ರವೇ ಬಳಕೆಗೆ ಅವಕಾಶವಿರುತ್ತದೆ.

ಕೆಟಿಎಂಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಹೀರೋ

ಬಿಡುಗಡೆಯ ಅವಧಿ(ಅಂದಾಜು)

ಇದೇ ವರ್ಷಾಂತ್ಯದಲ್ಲಿ ಫೋಟೋಟೈಪ್ ಅಡ್ವೆಂಚರ್ ಬೈಕ್ ಮಾದರಿಗಳ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುವುದಾಗಿ ಹೇಳಿಕೊಂಡಿರುವ ಹೀರೋ ಸಂಸ್ಥೆಯು ಹೊಸ ಬೈಕ್‌ಗಳನ್ನು 2021ರ ಮಧ್ಯಂತರ ಅಧಿಕೃತವಾಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Hero Xpulse 300 – 500cc Motorcycle In The Works: Will Compete With KTM Adventure 390. Read in Kannada.
Story first published: Monday, February 24, 2020, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X