ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಗೊಂಡಿದ್ದ ಬಿಎಸ್-6 ಆಕ್ಟಿವಾ 125 ಸ್ಕೂಟರ್ ಮಾದರಿಯು ಸದ್ಯ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಹೊಸ ಸ್ಕೂಟರ್‌ನಲ್ಲಿ ಕಂಡುಬಂದ ಕೆಲವು ತಾಂತ್ರಿಕ ದೋಷಗಳಿಂದಾಗಿ ಹೊಸ ಸ್ಕೂಟರ್ ಅನ್ನು ಹೋಂಡಾ ಸಂಸ್ಥೆಯು ಹಿಂಪಡೆಯಲು ನಿರ್ಧರಿಸಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಗ್ರಾಹಕರ ದೂರಿನ್ವಯ ಹೊಸ ಆಕ್ಟಿವಾ 125 ಸ್ಕೂಟರ್‌ನಲ್ಲಿರುವ ಕೂಲಿಂಗ್ ಫ್ಯಾನ್ ಕವರ್ ಮತ್ತು ಆಯಿಲ್ ಗೇಜ್ ಬದಲಿಸಲು ನಿರ್ಧರಿಸಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಸರ್ವಿಸ್ ಮಾಡಿಸಿಕೊಳ್ಳುವಂತೆ ಹೋಂಡಾ ಸಂಸ್ಥೆಯು ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಕೂಲಿಂಗ್ ಫ್ಯಾನ್‌‌ಗೆ ಸದ್ಯ ಹಾಕಲಾಗಿರುವ ಕವರ್ ಮೂಲಕ ಹೊರಹಾಕುವ ಶಾಖದ ಶಬ್ದದಿಂದ ಸಾಕಷ್ಟು ಕಿರಿಕಿರಿಯಾಗುತ್ತಿದ್ದು, ಆಯಿಲ್ ಗೇಜ್ ಕೂಡಾ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಈ ಹಿನ್ನಲೆ ಎಚ್ಚೆತ್ತುಕೊಂಡಿರುವ ಹೋಂಡಾ ಸಂಸ್ಥೆಯು ಕೂಲಿಂಗ್ ಫ್ಯಾನ್ ಕವರ್ ಮತ್ತು ಆಯಿಲ್ ಗೇಜ್ ಬದಲಿಸಲು ನಿರ್ಧರಿಸಿದ್ದು, ಹೊಸ ಬಿಡಿಭಾಗಗಳ ಮರುಜೋಡಣೆಗಾಗಿ ಹಂತ ಹಂತವಾಗಿ ಗ್ರಾಹಕರನ್ನು ಆಹ್ವಾನ ಮಾಡುತ್ತಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಇದರ ಹೊರತಾಗಿ ಹೊಸ ಸ್ಕೂಟರ್‌ನಲ್ಲಿ ಯಾವುದೇ ಸಮಸ್ಯೆ ಎಂದು ಸ್ಪಷ್ಟಪಡಿಸಿರುವ ಹೋಂಡಾ ಅಧಿಕೃತ ಮಾರಾಟಗಾರರು ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿರುದಿಲ್ಲ ಎನ್ನುವುದು ಸ್ಪಷ್ಟಪಡಿಸಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಇನ್ನು ಬಿಎಸ್-6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 125 ಎಫ್ಐ ಸ್ಕೂಟರ್ ಮಾದರಿಯು ಫ್ಯೂಲ್ ಇಂಜೆಕ್ಟೆಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ. ಡಿಸೆಂಬರ್‌ನಿಂದ ಇದುವರೆಗೂ ಸುಮಾರು 70 ಸಾವಿರಕ್ಕೂ ಹೆಚ್ಚು ಆಕ್ಟಿವಾ 125 ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಹೊಸ ಎಂಜಿನ್ ಆಯ್ಕೆಯಿಂದಾಗಿ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಹಾಗೆಯೇ ಹೊಸ ಸ್ಕೂಟರ್ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿರುವ ಹೋಂಡಾ ಸಂಸ್ಥೆಯು ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಿದ್ದು, ಕ್ರೋಮ್ ಡಿಸೈನ್‌ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಇದರೊಂದಿಗೆ ಬಿಎಸ್-6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ ಎನ್ನಬಹುದು.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್-ಇಂಜೆಕ್ಷಡ್ ಯುನಿಟ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು 8.4-ಬಿಎಚ್‌ಪಿ ಮತ್ತು 10.54-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಹೊಸ ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದ್ರೆ ಅದು ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯ. ಹೌದು, ಹೋಂಡಾ ಸಂಸ್ಥೆಯು ಮೊದಲ ಬಾರಿಗೆ ಆಕ್ಟಿವಾ 125 ಸ್ಕೂಟರ್‌ನಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಬಳಕೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಇಂಧನ ವ್ಯರ್ಥವನ್ನು ತಪ್ಪಿಸಲಿದೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಟ್ರಾಫಿಕ್ ಸಿಗ್ನಲ್‌ಗಳಲ್ಲಿ 30 ಸೇಕೆಂಡ್‌ಗಿಂತ ಹೆಚ್ಚು ನಿಲುಗಡೆಯಾದಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯವು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಲಿದ್ದು, ಸ್ಕೂಟರ್ ತನ್ನಷ್ಟೇ ತಾನೇ ಬಂದ್ ಆಗುತ್ತೆ. ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಆಗುವ ಇಂಧನ ವ್ಯರ್ಥವಾಗುವುದಕ್ಕೆ ಬ್ರೇಕ್ ಹಾಕಲಿದ್ದು, ಮೈಲೇಜ್ ಪ್ರಮಾಣವನ್ನು ಹೆಚ್ಚಿಸುತ್ತೆ.

ತಾಂತ್ರಿಕ ದೋಷ ಹಿನ್ನಲೆ ಬಿಎಸ್-6 ಆಕ್ಟಿವಾ 125 ಸ್ಕೂಟರ್ ರಿಕಾಲ್ ಮಾಡಿದ ಹೋಂಡಾ

ಇನ್ನುಳಿದಂತೆ ಮ್ಯಾಟೆ ಫಿನಿಷ್ ಬ್ಲ್ಯಾಕ್ ಅಲಾಯ್ ಚಕ್ರಗಳು, ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್, ಸೈಲೆಂಟ್ ಸ್ಟಾರ್ಟ್, ಸೈಡ್ ಸ್ಯಾಂಡ್ ಸೆನ್ಸಾರ್, ಎಲ್ಇಡಿ ಲೈಟಿಂಗ್, ಅನಲಾಗ್-ಡಿಜಿಟಲ್ ಕ್ಲಸ್ಟರ್ ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

Most Read Articles

Kannada
English summary
Honda Activa 125 BS6 recalled for this reason. Read in Kannada.
Story first published: Friday, February 21, 2020, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X