ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೋಂಡಾ ಆಕ್ಟಿವಾ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಈ ಜನಪ್ರಿಯ ಮತ್ತು ಹೆಚ್ಚು ಯಶಸ್ವಿಗಳಿಸಿದ ಆಕ್ಟಿವಾ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಎರಡು ದಶಕಗಳನ್ನು ಪೂರೈಸಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಆರನೇ ತಲೆಮಾರಿನ ಮಾದರಿ ಮಾರಾಟವಾಗುತ್ತಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 20 ವರ್ಷಗಳ ಯಶ್ವಸಿ ಓಟವನ್ನು ಪೂರೈಸಿದೆ. ಈ ಸಂಭ್ರಮದ ಪ್ರಯುಕ್ತ ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ತನ್ನ ಆಕ್ಟಿವಾ 6ಜಿ ಸ್ಕೂಟರ್‌ನ ಹೊಸ ಸ್ಪೆಷಲ್ 20ನೇ ವರ್ಷದ ಆನಿವರ್ಸರಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಬೇಸ್ ರೂಪಾಂತರದ ಬೆಲೆಯು ರೂ.66,816 ಗಳಾದರೆ, ಟಾಪ್-ಸ್ಪೆಕ್ ಬೆಲೆಯು ರೂ.68,316 ಗಳಾಗಿದೆ. ಈ ಬೆಲೆಗಳು ಹರಿಯಾಣದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಕಾಸ್ಮೆಟಿಕ್ ನವೀಕರಣಗಳ ಬಗ್ಗೆ ಹೇಳುವುದಾದರೆ, ಮ್ಯಾಟ್ ಮೆಚುರ್ ಬ್ರೌನ್ ಎಂಬ ಹೊಸ ಬಣ್ಣವನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿನ ಹೊಸ ಬಣ್ಣದ ಜೊತೆಗೆ ವೈಟ್ ಮತ್ತು ಗೋಲ್ಡನ್ ಬಣ್ಣದ ಸ್ಟ್ರೀಪ್ ಅನ್ನು ಹೊಂದಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಅದೇ ಮ್ಯಾಟ್ ಬ್ರೌನ್ ಬಣ್ಣವು ಪಿಲಿಯನ್ ಗ್ರ್ಯಾಬ್ ರೈಲ್ ಗಳಲ್ಲಿಯು ಸಹ ಒಳಗೊಂಡಿದೆ. ಈ ಆನಿವರ್ಸರಿ ಎಡಿಷನ್ ಸೈಡ್ ಪ್ಯಾನೆಲ್‌ಗಳು ಈಗ ಆಕ್ಟಿವಾ ಎಂಬ ಗೋಲ್ಡನ್ ಬಣ್ಣದ ಲೋಗೊವನ್ನು ಹೊಂದಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಆನಿವರ್ಸರಿ ಎಡಿಷನ್ ಮಾದರಿಯ ಎರಡು ಕಡೆಗಳಲ್ಲಿ ಬ್ಲ್ಯಾಕ್ ಬಣ್ಣದ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಸೀಟ್ ಸೀಟ್ ಕವರ್‌ಗಳೊಂದಿಗೆ, ಸ್ಪೆಷಲ್ ಎಡಿಷನ್ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇದು ಜನಸಮೂಹದಲ್ಲಿ ತಕ್ಷಣವೇ ಎದ್ದು ಕಾಣುವಂತೆ ಸ್ಟೈಲಿಂಗ್ ಅನ್ನು ಹೊಂದಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಎಚ್‌ಎಂಎಸ್‌ಐ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅಟ್ಸುಶಿ ಒಗಾಟಾ ಅವರು ಮಾತನಾಡಿ, 20 ವರ್ಷಗಳ ಕಾಲ ಗ್ರಾಹಕರ ಪ್ರೀತಿ ಮತ್ತು ನಂಬಿಕೆಯನ್ನು ಗಳಿಸಿ ಸ್ಕೂಟರ್ ಇದಾಗಿದೆ, ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಅನ್ನು ನಾವು ಬಿಡುಗಡೆಗೊಳಿಸಲು ಸಂತೋಷಪಡುತ್ತೇವೆ ಎಂದು ಹೇಳಿದರು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ

ಹೋಂಡಾ ಆಕ್ಟಿವಾ ಬಿಡುಗಡೆಯಾದಗಿನಿಂದ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಜ್ಯೂಪಿಟರ್ ಮತ್ತು ಹೀರೋ ಪ್ಲೆಷರ್ 110 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda Activa 20-Year Anniversary Edition Launched In India. Read In Kananda.
Story first published: Thursday, November 26, 2020, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X