Just In
- 39 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- News
''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಂಡಾ ಆಕ್ಟಿವಾ ಸ್ಕೂಟರ್ನ 20ನೇ ವರ್ಷದ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಬಿಡುಗಡೆ
ಹೋಂಡಾ ಆಕ್ಟಿವಾ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿದೆ. ಈ ಜನಪ್ರಿಯ ಮತ್ತು ಹೆಚ್ಚು ಯಶಸ್ವಿಗಳಿಸಿದ ಆಕ್ಟಿವಾ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಎರಡು ದಶಕಗಳನ್ನು ಪೂರೈಸಿದೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಆರನೇ ತಲೆಮಾರಿನ ಮಾದರಿ ಮಾರಾಟವಾಗುತ್ತಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 20 ವರ್ಷಗಳ ಯಶ್ವಸಿ ಓಟವನ್ನು ಪೂರೈಸಿದೆ. ಈ ಸಂಭ್ರಮದ ಪ್ರಯುಕ್ತ ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ತನ್ನ ಆಕ್ಟಿವಾ 6ಜಿ ಸ್ಕೂಟರ್ನ ಹೊಸ ಸ್ಪೆಷಲ್ 20ನೇ ವರ್ಷದ ಆನಿವರ್ಸರಿ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ರೂಪಾಂತರ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಬೇಸ್ ರೂಪಾಂತರದ ಬೆಲೆಯು ರೂ.66,816 ಗಳಾದರೆ, ಟಾಪ್-ಸ್ಪೆಕ್ ಬೆಲೆಯು ರೂ.68,316 ಗಳಾಗಿದೆ. ಈ ಬೆಲೆಗಳು ಹರಿಯಾಣದ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಕಾಸ್ಮೆಟಿಕ್ ನವೀಕರಣಗಳ ಬಗ್ಗೆ ಹೇಳುವುದಾದರೆ, ಮ್ಯಾಟ್ ಮೆಚುರ್ ಬ್ರೌನ್ ಎಂಬ ಹೊಸ ಬಣ್ಣವನ್ನು ಹೊಂದಿದೆ. ಈ ಸ್ಕೂಟರ್ನಲ್ಲಿನ ಹೊಸ ಬಣ್ಣದ ಜೊತೆಗೆ ವೈಟ್ ಮತ್ತು ಗೋಲ್ಡನ್ ಬಣ್ಣದ ಸ್ಟ್ರೀಪ್ ಅನ್ನು ಹೊಂದಿದೆ.

ಹೊಸ ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಅದೇ ಮ್ಯಾಟ್ ಬ್ರೌನ್ ಬಣ್ಣವು ಪಿಲಿಯನ್ ಗ್ರ್ಯಾಬ್ ರೈಲ್ ಗಳಲ್ಲಿಯು ಸಹ ಒಳಗೊಂಡಿದೆ. ಈ ಆನಿವರ್ಸರಿ ಎಡಿಷನ್ ಸೈಡ್ ಪ್ಯಾನೆಲ್ಗಳು ಈಗ ಆಕ್ಟಿವಾ ಎಂಬ ಗೋಲ್ಡನ್ ಬಣ್ಣದ ಲೋಗೊವನ್ನು ಹೊಂದಿದೆ.
MOST READ: ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಇನ್ನು ಆನಿವರ್ಸರಿ ಎಡಿಷನ್ ಮಾದರಿಯ ಎರಡು ಕಡೆಗಳಲ್ಲಿ ಬ್ಲ್ಯಾಕ್ ಬಣ್ಣದ ವ್ಹೀಲ್ ಗಳು ಮತ್ತು ಬ್ಲ್ಯಾಕ್ ಸೀಟ್ ಸೀಟ್ ಕವರ್ಗಳೊಂದಿಗೆ, ಸ್ಪೆಷಲ್ ಎಡಿಷನ್ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇದು ಜನಸಮೂಹದಲ್ಲಿ ತಕ್ಷಣವೇ ಎದ್ದು ಕಾಣುವಂತೆ ಸ್ಟೈಲಿಂಗ್ ಅನ್ನು ಹೊಂದಿದೆ.

ಎಚ್ಎಂಎಸ್ಐ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅಟ್ಸುಶಿ ಒಗಾಟಾ ಅವರು ಮಾತನಾಡಿ, 20 ವರ್ಷಗಳ ಕಾಲ ಗ್ರಾಹಕರ ಪ್ರೀತಿ ಮತ್ತು ನಂಬಿಕೆಯನ್ನು ಗಳಿಸಿ ಸ್ಕೂಟರ್ ಇದಾಗಿದೆ, ಹೋಂಡಾ ಆಕ್ಟಿವಾ 6ಜಿ 20ನೇ ವರ್ಷದ ಆನಿವರ್ಸರಿ ಎಡಿಷನ್ ಅನ್ನು ನಾವು ಬಿಡುಗಡೆಗೊಳಿಸಲು ಸಂತೋಷಪಡುತ್ತೇವೆ ಎಂದು ಹೇಳಿದರು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.79 ಬಿಹೆಚ್ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಆಕ್ಟಿವಾ ಬಿಡುಗಡೆಯಾದಗಿನಿಂದ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ಗಳಲ್ಲಿ ಒಂದಾಗಿದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಜ್ಯೂಪಿಟರ್ ಮತ್ತು ಹೀರೋ ಪ್ಲೆಷರ್ 110 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.