ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಹೋಂಡಾ ಮೋಟಾರ್‍‍ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.63,912ಗಳಾಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಈ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ಆಕ್ಟಿವಾ 6ಜಿ ಸ್ಕೂಟರ್, 5ಜಿ ಸ್ಕೂಟರ್‍‍ಗಿಂತ ಹೆಚ್ಚಿನ ಫೀಚರ್ ಹಾಗೂ ವಿನ್ಯಾಸದಲ್ಲಿ ಬದಲಾವಣೆಗಳನ್ನು ಹೊಂದಿದೆ. ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಹೀರೊ ಪ್ಲೆಷರ್ ಪ್ಲಸ್ 110 ಹಾಗೂ ಟಿವಿ‍ಎಸ್ ಜೂಪಿಟರ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಮೊದಲ ಬಾರಿಗೆ ಭಾರತದಲ್ಲಿ 2001ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗಿನಿಂದ ಹೋಂಡಾ ಆಕ್ಟಿವಾ ಭಾರತದ ಸ್ಕೂಟರ್ ಸೆಗ್‍‍ಮೆಂಟಿನಲ್ಲಿ ಪ್ರಾಬಲ್ಯವನ್ನು ಹೊಂದಿದೆ. 6ಜಿ ಹೋಂಡಾ ಆಕ್ಟಿವಾದ ಹೊಸ ತಲೆಮಾರಿನ ಸ್ಕೂಟರ್ ಆಗಿದೆ. 5ಜಿ ಹಾಗೂ 6ಜಿ ಸ್ಕೂಟರ್‍‍ಗಳ ನಡುವಿನ ವ್ಯತ್ಯಾಸವನ್ನು ಈ ಲೇಖನದಲ್ಲಿ ನೋಡೋಣ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಡಿಸೈನ್

ಆಕ್ಟಿವಾ 5ಜಿ ಸ್ಕೂಟರಿಗಿಂತ ಹೆಚ್ಚಿನ ಪ್ರಮಾಣದ ಡಿಸೈನ್ ಬದಲಾವಣೆಗಳನ್ನು 6ಜಿ ಸ್ಕೂಟರಿನಲ್ಲಿ ಮಾಡಲಾಗಿದೆ. ಇದರಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಏಪ್ರಾನ್ ಸೇರಿದೆ. ಇದನ್ನು ಮೊದಲಿಗಿಂತ ತೆಳುವಾಗಿ ವಿನ್ಯಾಸಗೊಳಿಸಲಾಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಸೈಡ್ ಪ್ಯಾನೆಲ್‍‍ಗಳು ಮೊದಲಿನಂತಿದ್ದರೂ, ಹಿಂಭಾಗದಲ್ಲಿ ದೊಡ್ಡ ಗಾತ್ರದ ಟೇಲ್‍‍ಲೈಟ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿರುವ ಪ್ರಮುಖವಾದ ಅಂಶವೆಂದರೆ ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲರ್ ಕ್ಯಾಪ್ ಅಳವಡಿಸಿರುವುದು. ಆಕ್ಟಿವಾ 6ಜಿ ಸ್ಕೂಟರಿನಲ್ಲಿ ಮೊದಲಿಗಿಂತ ಆಧುನಿಕವಾದ ಪ್ರೀಮಿಯಂ ಅಂಶಗಳನ್ನು ಅಳವಡಿಸಲಾಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಗಾತ್ರ

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್, 5ಜಿ ಸ್ಕೂಟರಿಗಿಂತ ಹೆಚ್ಚಿನ ಗಾತ್ರವನ್ನು ಹೊಂದಿದೆ. ಹೊಸ ಸ್ಕೂಟರ್ 5 ಜಿ ಸ್ಕೂಟರಿಗಿಂತ ಹೆಚ್ಚು ಉದ್ದ, ಅಗಲ, ಎತ್ತರ, ವ್ಹೀಲ್ ಬೇಸ್ ಹಾಗೂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಆಕ್ಟಿವಾ 6ಜಿ ಸ್ಕೂಟರ್ 5ಜಿ ಸ್ಕೂಟರಿಗಿಂತ 72 ಎಂಎಂ ಹೆಚ್ಚು ಉದ್ದ, 13 ಎಂಎಂ ಹೆಚ್ಚು ಅಗಲ, 2 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. 22 ಎಂಎಂ ಹೆಚ್ಚು ವ್ಹೀಲ್ ಬೇಸ್ ಹೊಂದಿರುವ ಈ ಸ್ಕೂಟರಿನ ಒಟ್ಟು ಗ್ರೌಂಡ್ ಕ್ಲಿಯರೆನ್ಸ್ 171 ಎಂಎಂ ಆಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಎಂಜಿನ್

ಆಕ್ಟಿವಾ 5ಜಿ ಹಾಗೂ 6ಜಿ ಸ್ಕೂಟರ್‍‍ಗಳೆರಡೂ ಒಂದೇ ಎಂಜಿನ್ ಹೊಂದಿದ್ದರೂ, ಆಕ್ಟಿವಾ 6ಜಿ ಸ್ಕೂಟರ್ ಬಿ‍ಎಸ್ 6 ಎಂಜಿನ್ ಹೊಂದಿರುವ ಕಾರಣಕ್ಕೆ ಕಡಿಮೆ ಪವರ್ ಉತ್ಪಾದಿಸುತ್ತದೆ. ಆಕ್ಟಿವಾ 6ಜಿ ಸ್ಕೂಟರಿನಲ್ಲಿರುವ 109ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ 7.8 ಬಿ‍‍ಹೆಚ್‍‍ಪಿ ಪವರ್ ಹಾಗೂ 8.8 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಅಂದರೆ ಆಕ್ಟಿವಾ 5ಜಿ ಸ್ಕೂಟರಿನಲ್ಲಿರುವ ಬಿ‍ಎಸ್ 4 ಎಂಜಿನ್‍‍ಗಿಂತ 0.2 ಬಿ‍‍ಹೆಚ್‍‍ಪಿ ಪವರ್ ಹಾಗೂ 0.2 ಎನ್‍ಎಂ ಟಾರ್ಕ್ ಅನ್ನು ಕಡಿಮೆ ಉತ್ಪಾದಿಸುತ್ತದೆ. ಬಿ‍ಎಸ್ 6 ಎಂಜಿನ್ ಹೊಂದಿರುವ 6ಜಿ ಸ್ಕೂಟರ್, 5 ಜಿ ಸ್ಕೂಟರ್‍‍‍ಗಿಂತ 10% ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಹೋಂಡಾ ಕಂಪನಿ ಹೇಳಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಹೋಂಡಾ ಆಕ್ಟಿವಾ 5ಜಿ ಸ್ಕೂಟರ್ ಪ್ರತಿ ಲೀಟರ್ ಪೆಟ್ರೋಲಿಗೆ 60 ಕಿ.ಮೀ ಮೈಲೇಜ್ ನೀಡುತ್ತಿತ್ತು. ಆಕ್ಟಿವಾ 6ಜಿ ಸ್ಕೂಟರ್ ಪ್ರತಿ ಲೀಟರ್ ಪೆಟ್ರೋಲಿಗೆ 65ರಿಂದ 68 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೋಂಡಾ ಕಂಪನಿ ಹೇಳಿದೆ. ಹೊಸ ಆಕ್ಟಿವಾ 6ಜಿ ಸ್ಕೂಟರಿನಲ್ಲಿ ಹೋಂಡಾ ಕಂಪನಿಯ ಪಿ‍‍ಜಿ‍ಎಂ-ಎಫ್‍ಐ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಫೀಚರ್ಸ್

ಹೋಂಡಾ ಕಂಪನಿಯು 6ಜಿ ಸ್ಕೂಟರಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಿದೆ. ಇವುಗಳಲ್ಲಿ ಮಲ್ಟಿ ಫಂಕ್ಷನ್ ಬಟನ್‍‍ಗಳಾದ ಪಾಸ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲರ್ ಕ್ಯಾಪ್, ಮುಂಭಾಗದಲ್ಲಿ 12 ಇಂಚಿನ ದೊಡ್ಡ ಗಾತ್ರದ ವ್ಹೀಲ್ ಹಾಗೂ ಹಿಂಭಾಗದಲ್ಲಿ ತ್ರಿ-ವೇ ಅಡ್ಜಸ್ಟಬಲ್ ಸಸ್ಪೆಂಷನ್ ಸೆಟ್‍ಅಪ್‍‍ಗಳಿವೆ. ಇವುಗಳನ್ನು 5ಜಿ ಸ್ಕೂಟರ್‍‍ನಲ್ಲಿ ಅಳವಡಿಸಿರಲಿಲ್ಲ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಹೊಸ ಸ್ಕೂಟರಿನಲ್ಲಿ 18 ಲೀಟರಿನ ಅಂಡರ್ ಸೀಟ್ ಸ್ಟೋರೇಜ್, ಟಾಪ್ ಮಾದರಿಯ ಸ್ಕೂಟರ್‍‍ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳಿರಲಿವೆ. ಇದರ ಜೊತೆಗೆ ಹೋಂಡಾ ಕಂಪನಿಯ ಹೆಚ್‍ಇ‍‍ಟಿ ಟೆಕ್ನಾಲಜಿ, ಕಾಂಬಿ ಬ್ರೇಕಿಂಗ್ ಸಿಸ್ಟಂ, ಮುಂಭಾಗದ ಸಸ್ಪೆಂಷನ್‍‍‍ಗಳಿಗಾಗಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಎಲ್‍ಇ‍ಡಿ ಡಿ‍ಆರ್‍ಎಲ್ ಹೊಂದಿರುವ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳಿವೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಬೆಲೆ

ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನ ಬೆಲೆ ಆಕ್ಟಿವಾ 5ಜಿ ಸ್ಕೂಟರಿಗಿಂತ ರೂ.8,000 ಹೆಚ್ಚಾಗಿರಲಿದೆ. ಆಕ್ಟಿವಾ 5ಜಿ ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.57,557ಗಳಾದರೆ, ಆಕ್ಟಿವಾ 6ಜಿ ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.63,912ಗಳಾಗಿದೆ.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಹೋಂಡಾ ಕಂಪನಿಯು ಆಕ್ಟಿವಾ 6ಜಿ ಸ್ಕೂಟರಿನ ಉತ್ಪಾದನೆಯನ್ನು ಆರಂಭಿಸಿದ್ದು, ಸ್ಕೂಟರ್‍‍ಗಳನ್ನು ಜನವರಿ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ತಿಂಗಳ ಆರಂಭದಲ್ಲಿ ವಿತರಿಸಲಿದೆ. ಬಿಎಸ್ 4 ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಸ್ಕೂಟರ್ ಅನ್ನು ಮಾರ್ಚ್ ತಿಂಗಳ ಕೊನೆಯವರೆಗೂ ಮಾರಾಟ ಮಾಡಲಾಗುವುದು.

ಹೋಂಡಾ ಆಕ್ಟಿವಾ 5ಜಿ v/s ಆಕ್ಟಿವಾ 6ಜಿ.. ನಡುವಿನ ವ್ಯತ್ಯಾಸವೇನು?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿರುವ ಆಕ್ಟಿವಾ 5ಜಿ ಸ್ಕೂಟರ್ ಹಾಗೂ ಹೊಸ ಆಕ್ಟಿವಾ 6ಜಿ ಸ್ಕೂಟರಿನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊಂದಿರುವ ಆಕ್ಟಿವಾ 6ಜಿ ಸ್ಕೂಟರ್‍ ವಿಶಿಷ್ಟವಾದ ಲುಕ್ ಹೊಂದಿದೆ.

Most Read Articles

Kannada
English summary
Honda Activa 6G Vs Honda Activa 5G Comparison: Here Are All The Significant Differences. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X