ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ವಾಹನಗಳ ಮಾರಾಟ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಏಪ್ರಿಲ್ ಅವಧಿಯಲ್ಲಿ ಯಾವುದೇ ಕಂಪನಿಯು ಒಂದೇ ಒಂದು ವಾಹನವನ್ನು ಮಾರಾಟಮಾಡಿಲ್ಲ.

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಂಪನಿಯು ಕೂಡಾ ಏಪ್ರಿಲ್ ಅವಧಿಯ ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾತ್ರ 2,630 ಬೈಕ್‌ಗಳನ್ನು ರಫ್ತು ಮಾಡಿದೆ. ಥೈಲ್ಯಾಂಡ್ ಮತ್ತು ಮಲೇಷಿಯಾ ಮಾರುಕಟ್ಟೆಗೆ ವಿವಿಧ ಮಾದರಿಯ ಕೆಲವು ದ್ವಿಚಕ್ರ ವಾಹನ ಮಾದರಿಗಳನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಫ್ತು ಮಾಡಿದ್ದು, ತದನಂತರ ಸಾಗರೋತ್ತರ ವ್ಯವಹಾರಗಳ ಬಂದ್ ಆಗಿದ್ದರಿಂದ ಸಂಪೂರ್ಣವಾಗಿ ಮಾರಾಟ ಮತ್ತು ಉತ್ಪಾದನೆಯನ್ನು ನಿಲ್ಲಿಸಿತ್ತು.

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಇದೀಗ ಹಸಿರು ವಲಯದಲ್ಲಿರುವ ಕೈಗಾರಿಕೆಗಳ ಉತ್ಪಾದನೆ ಅವಕಾಶ ನೀಡಿರುವುದರಿಂದ ಬೈಕ್ ಉತ್ಪಾದನೆಯನ್ನು ಮತ್ತೆ ಪುನಾರಂಭಿಸಿದ್ದು, ಹೊಸ ಸುರಕ್ಷಾ ಮಾರ್ಗಗಳ ಅನುಸಾರವಾಗಿ ಆನ್‌ಲೈನ್ ಬೈಕ್ ಮಾರಾಟವನ್ನು ಆರಂಭಿಸುತ್ತಿದೆ.

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಸದ್ಯಕ್ಕೆ ನೇರವಾಗಿ ವಾಹನ ಮಾರಾಟಕ್ಕೆ ಅವಕಾಶವಿಲ್ಲವಾಗಿದ್ದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ಮೂಲಕ ವಾಹನ ಮಾರಾಟಕ್ಕೆ ಚಾಲನೆ ನೀಡುತ್ತಿದ್ದು, ಹೋಂಡಾ ಕೂಡಾ ಗರಿಷ್ಠ ಸುರಕ್ಷಾ ಸೌಲಭ್ಯಗಳೊಂದಿಗೆ ಬೇಡಿಕೆ ಮೇರೆಗೆ ಗ್ರಾಹಕರ ಮನೆ ಬಾಗಿಲಿಗೆ ಹೊಸ ವಾಹನ ಉತ್ಪನ್ನಗಳನ್ನು ವಿತರಣೆ ಮಾಡಲಿದೆ.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಇನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಮ್ಮ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿದ್ದು, ಹೋಂಡಾ ಮೋಟಾರ್‌ಸೈಕಲ್ ಕೂಡಾ ಬಿಎಸ್-6 ಮಾದರಿಯ ಸ್ಕೂಟರ್ ಮತ್ತು ಬೈಕ್‌ಗಳನ್ನು ಉನ್ನತೀಕರಿಸಿ ಬಿಡುಗಡೆಗೊಳಿಸಿರುವುದಲ್ಲದೆ ಮಾರಾಟದಲ್ಲೂ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಮಿಷನ್ ಜಾರಿಗೆ ಮುನ್ನ ಬಿಡುಗಡೆಯಾಗಲಿರುವ ಹೊಸ ದ್ವಿಚಕ್ರ ವಾಹನಗಳಿಗೆ ದಾಖಲೆ ಪ್ರಮಾಣದ ಬೇಡಿಕೆ ಹರಿದು ಬಂದಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

2019ರ ಡಿಸೆಂಬರ್‌ನಿಂದ ಇದುವರೆಗೆ 7.50 ಲಕ್ಷ ಯುನಿಟ್ ಬಿಎಸ್-6 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 9 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಹೋಂಡಾ ನಿರ್ಮಾಣದ ಬಹುತೇಕ ದ್ವಿಚಕ್ರ ವಾಹನಗಳು ಹೊಸ ಎಂಜಿನ್ ಜೋಡಣೆಯ ನಂತರ ದುಬಾರಿ ಬೆಲೆ ಪಡೆದುಕೊಂಡಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.4 ಸಾವಿರದಿಂದ ರೂ. 12 ಸಾವಿರದಷ್ಟು ಹೆಚ್ಚುವರಿ ದರ ಪಡೆದುಕೊಂಡಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ನಡುವೆಯೂ ಏಪ್ರಿಲ್ ಅವಧಿಯಲ್ಲಿ 2,630 ಬೈಕ್ ರಫ್ತು ಮಾಡಿದ ಹೋಂಡಾ

ಜೊತೆಗೆ ಹೊಸ ವಾಹನಗಳ ಎಂಜಿನ್ ಅಭಿವೃದ್ದಿಯಲ್ಲಿ ಸಾಕಷ್ಟು ಸುಧಾರಣೆ ತಂದಿರುವ ಹೋಂಡಾ ಕಂಪನಿಯು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಗೊಳಿಸಿದ್ದು, ಮೈಲೇಜ್ ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿದೆ.

Most Read Articles

Kannada
English summary
Bike Sales Report For April 2020: Honda Two-Wheelers Register 2,630 Units Of Export Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X