ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಪ್ರೀಮಿಯಂ ಸಿಬಿ300ಆರ್ ಬೈಕಿನ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಹೋಂಡಾ ಸಿಬಿ300ಆರ್ ಮಾದರಿಯು ಮೊದಲ ನಿಯೊ-ರೆಟ್ರೊ ಸ್ಟ್ರೀಟ್‌ಫೈಟರ್ ಬೈಕ್ ಆಗಿದೆ. ಸಿಬಿ300ಆರ್ ಹಿಂದಿನ ಮಾದರಿಯನ್ನು ಸಿಕೆಡಿ ಮೂಲಕ ಭಾರತಕ್ಕೆ ತರಲಾಗಿತ್ತು. ಇದರಿಂದಾಗಿ ಸಿಬಿ300ಆರ್ ಬೈಕಿನ ಪ್ರತಿಸ್ಪರ್ಧಿ ಮಾದರಿಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿತ್ತು. ಆದರೂ ಈ ಹೋಂಡಾ ಸಿಬಿ300ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಎರಡೇ ತಿಂಗಳುಗಳಲ್ಲಿ ಇದರ 500 ಯುನಿಟ್ ಗಳು ಮಾರಾಟವಾಗಿತ್ತು. ಆದರೆ ಇಲ್ಲಿಯವರೆಗೆ ಈ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಅಲ್ಲದೇ ಈ ಸಿಬಿ300ಆರ್ ಬೈಕಿನ ಹೆಸರನ್ನು ವೆಬ್‌ಸೈಟ್ ನಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಹೋಂಡಾ ಕಂಪನಿಯು ಈ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಹೋಂಡಾ ಸಿಬಿ300ಆರ್ ಬೈಕ್ ವಾಸ್ತವವಾಗಿ ಜಪಾನಿನ ಉತ್ಪಾದಕರ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಬೈಕು ಎಂಬುದು ಗಮನಿಸ ಬೇಕಾದ ಅಂಶವಾಗಿದೆ. ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಈ ಜನಪ್ರಿಯ ಸಿಬಿ300ಆರ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಹೋಂಡಾ ತನ್ನ ಬಿಗ್‌ವಿಂಗ್ ಡೀಲರುಗಳ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸುತ್ತಿದೆ. ಇದು ಪ್ರೀಮಿಯಂ ಬೈಕುಗಳನ್ನು ದೇಶಾದ್ಯಂತ ಹೆಚ್ಚು ಮಾರಾಟ ಮಾಡಲು ಸಹಾಯ ಮಾಡುತ್ತದೆ. ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ತನ್ನ ಬಿಗ್‌ವಿಂಗ್ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಪ್ರಸ್ತುತ ತಲೆಮಾರಿನ ಸಿಬಿ300ಆರ್ ಬೈಕಿನಲ್ಲಿ ಆಧುನಿಕ ಎಲ್‌ಇಡಿ ತಂತ್ರಜ್ಞಾನದೊಂದಿಗೆ ವೈವಿಧ್ಯಮಯ ಜೆಡ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಹಿಂದಿನ ಮಾದರಿ ಹೋಂಡಾ ಸಿಬಿ300ಆರ್ ನಲ್ಲಿ ಸಿಂಗಲ್-ಸಿಲಿಂಡರ್, 286 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 31.4 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್

ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಯೋಜನೆ ರೂಪಿಸಬಹುದು. ಸ್ಥಳೀಯವಾಗಿ ಈ ಬೈಕನ್ನು ಅಭಿವೃದ್ದಿಪಡಿಸಿದರೆ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು. ಹೋಂಡಾ ಸಿಬಿ300ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಮೊಜೊ, ಬಿಎಂಡಬ್ಲ್ಯು ಜಿ 310 ಆರ್ ಮತ್ತು ಟಿವಿಎಸ್ ಅಪಾಚೆ 310 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
BS6-Compliant CB300R To Be The Next Honda BigWing Launch. Read In Kannada.
Story first published: Monday, November 23, 2020, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X