ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದುಬಾರಿಯ ಬೆಲೆಯ ಮೊಪೆಡ್ ಆವೃತ್ತಿಯಾದ ಸಿಟಿ125 ಹಂಟರ್ ಕ್ಲಬ್ ಮಾದರಿಯನ್ನು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಕಂಪನಿಯು ಭಾರತದಲ್ಲೂ ಬಿಡುಗಡೆ ಮಾಡಲು ಸಿದ್ದವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಹೌದು, ಸದ್ಯ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಮಾದರಿಯು ಕಳೆದ ತಿಂಗಳು ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗಿದ್ದು, ಹೊಸ ಮೊಪೆಡ್ ಭಾರತದಲ್ಲೂ ಬಿಡುಗಡೆಯಾಗುವ ಸುಳಿವು ಸಿಕ್ಕಿದೆ. ಆದರೆ ಈ ಕುರಿತು ಹೋಂಡಾ ಕಂಪನಿಯಿಂದ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲವಾದರೂ ದುಬಾರಿ ಮೊಪೆಡ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗಾಗಿ ಪೇಟೆಂಟ್(ಹಕ್ಕುಸ್ವಾಮ್ಯ) ಚಿತ್ರವನ್ನು ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಿರುವುದು ಬಹಿರಂಗವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಹೀಗಾಗಿ ಹೋಂಡಾ ನಿರ್ಮಾಣ ಐಷಾರಾಮಿ ಫೀಚರ್ಸ್‌ವುಳ್ಳ ಸಿಟಿ125 ಹಂಟಕ್ ಕ್ಲಬ್ ಮೊಪೆಡ್ ಮಾದರಿಯು ಭಾರತದಲ್ಲೂ ಬಿಡುಗಡೆಯಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದ್ದು, ಆಫ್-ರೋಡ್ ವೈಶಿಷ್ಟ್ಯತೆಯ ಐಷಾರಾಮಿ ಮೊಪೆಡ್ ಮಾದರಿಯೊಂದನ್ನು ಹಂತ ಹಂತವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಹೋಂಡಾ ಕಂಪನಿಯ ಈಗಾಗಲೇ ಸೂಪರ್ ಕ್ಲಬ್ ಸಿ125, ಪಿಸಿಎಕ್ಸ್ 150, ಮಂಕಿ 125 ಮತ್ತು ಸಿಆರ್‌ಎಫ್125ಎಫ್ ಡರ್ಕ್ ಬೈಕ್ ಮಾದರಿಗಳನ್ನು ಹೊಂದಿದ್ದರು ಸಹ ಇದೀಗ ಬಿಡುಗಡೆ ಮಾಡಲಾಗಿರುವ ಸಿಟಿ125 ಮೊಪೆಡ್ ಮಾದರಿಯು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಮೊಪೆಡ್ ಮಾದರಿಯು ಬೆಲೆ ಇಳಿಕೆಗಾಗಿ ತುಸು ಬದಲಾವಣೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಕೆಲವು ಸೌಲಭ್ಯಗಳನ್ನು ಕಡಿತ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಮೊಪೆಡ್ ಬೆಲೆಯು ಸದ್ಯ ರೂ.3 ಲಕ್ಷ (440,000 ಜಪಾನೀಸ್ ಯೆನ್) ಬೆಲೆ ಪಡೆದುಕೊಂಡಿದ್ದು, 125ಸಿಸಿ ಸ್ಕೂಟರ್ ಮತ್ತು ಬೈಕ್ ಮಾದರಿಗಳಲ್ಲೇ ಇದು ಅತಿ ದುಬಾರಿ ಬೆಲೆ ವಾಹನ ಮಾದರಿಯಾಗಿದೆ. ಸಿಟಿ125 ಮೊಪೆಡ್ ಮಾದರಿಯನ್ನು ವಿಶೇಷವಾಗಿ ಆಫ್-ರೋಡ್ ಸಾಹಸ ಪ್ರದರ್ಶನಕ್ಕಾಗಿಯೇ ನಿರ್ಮಾಣ ಮಾಡಲಾಗಿದ್ದು, ರಗಡ್ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಎಕ್ಸಾಸ್ಟ್ ಮತ್ತು ಪರ್ಫಾಮೆನ್ಸ್ ಬೈಕ್ ಮಾದರಿಯಲ್ಲಿ ನೀಡಲಾಗುವ ಏರ್ ಇನ್ ಟೆಕ್ ಡಟ್ ಸೌಲಭ್ಯವು ಈ ಮೊಪೆಡ್‌ನಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

125-ಸಿಸಿ ಫಿಜಿಎಂಐ ಎಫ್ಐ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಸಿಟಿ125 ಮೊಪೆಡ್ ಮಾದರಿಯು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.8-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 5.4-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಮೇಲ್ನೊಟಕ್ಕೆ ಟಿವಿಎಸ್ ಎಕ್ಸ್ಎಲ್100 ಮಾದರಿಯಂತೆ ಕಂಡರೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಸಿಟಿ125 ಮೊಪೆಡ್ ಮಾದರಿಯು ಒಟ್ಟು 120ಕೆ.ಜಿ ತೂಕ ಹೊಂದಿದ್ದು, ಅಡ್ವೆಂಚರ್ ಚಾಲನೆಗೆ ಅತ್ಯುತ್ತಮ ಮೊಪೆಡ್ ಮಾದರಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಹಾಗೆಯೇ ಹೊಸ ಸಿಟಿ125 ಮೊಪೆಡ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆ ಎರಡು ಬದಿಯ ಚಕ್ರದಲ್ಲೂ ಡಿಸ್ಕ್ ಬ್ರೇಕ್, ಆಫ್ ರೋಡ್ ಟೈರ್, ಸ್ಟಿಲ್ ಫೆಂಡರ್, ಕ್ರ್ಯಾಶ್ ಗಾರ್ಡ್, ಹಿಟ್ ಪ್ರೋಟೆಕ್ಟರ್, ಡಿಜಿಟಲ್ ಸ್ಪೀಡೋ ಮೀಟರ್, ಫುಲ್ ಎಲ್ಇಡಿ ಲೈಟ್ಸ್, ಸೇರಿದಂತೆ ಹಲವು ಸುರಕ್ಷಾ ಸೌಲಭ್ಯಗಳಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಭಾರತದಲ್ಲಿ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಹೋಂಡಾ ಮೊಪೆಡ್...!

ಈ ಮೂಲಕ ಆಫ್-ರೋಡ್ ವೈಶಿಷ್ಟ್ಯತೆಯ ಎಂಟ್ರಿ ಲೆವೆಲ್ ಬೈಕ್ ಮಾದರಿಗಳಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಸಿಟಿ125 ಮೊಪೆಡ್ ಮಾದರಿಯ ಸದ್ಯ ಜಪಾನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿದೆ.

Most Read Articles

Kannada
English summary
Honda Filed Patent Application For New Moped In India. Read In kannada.
Story first published: Saturday, August 8, 2020, 21:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X