ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ರೆಟ್ರೋ ಮಾದರಿಯ ಪ್ರೀಮಿಯಂ ಕ್ಲಾಸಿಕ್ ಬೈಕ್ ಆವೃತ್ತಿಯಾದ ಹೈನೆಸ್ ಸಿಬಿ 350 ಅನಾವರಣಗೊಳಿಸಿದ್ದು, ಹೊಸ ಬೈಕ್ ಇದೇ ತಿಂಗಳು ಮಧ್ಯಂತರದಲ್ಲಿ ಅಧಿಕೃತವಾಗಿ ಬಿಡುಗಡೆಯಾಲಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೊಚ್ಚ ಹೊಸ ಹೈನೆಸ್ ಸಿಬಿ 350 ಮಾದರಿಯನ್ನು ಸದ್ಯಕ್ಕೆ ಅನಾವರಣಗೊಳಿಸುವ ಮೂಲಕ ಹೊಸ ಬೈಕ್ ಬೆಲೆ ಮಾಹಿತಿ ಹಂಚಿಕೊಂಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಬೈಕ್ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಹೊಸ ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರವಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೊಸ ಬೈಕ್ ಮಾದರಿಯು ಹೋಂಡಾ ಪ್ರೀಮಿಯಂ ಬೈಕ್ ಮಾರಾಟ ಮಳಿಗೆ ಬಿಗ್‌ವಿಂಗ್ ಡೀಲರ್ಸ್ ಮೂಲಕ ಮಾರಾಟ ಮಾಡಲಿದ್ದು, ಆಸಕ್ತ ಗ್ರಾಹಕರು ಇಂದಿನಿಂದಲೇ ರೂ.5 ಸಾವಿರ ಮುಂಗಡದೊಂದಿಗೆ ಬೈಕ್ ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೋಂಡಾ ಕಂಪನಿಯು ಭಾರತದಲ್ಲಿ ಎರಡು ಮಾದರಿಯ ಬೈಕ್ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಸಾಮಾನ್ಯ ಬೈಕ್ ಮತ್ತು ಸ್ಕೂಟರ್ ಮಾದರಿಗಳಲ್ಲಿ ಒಂದಡೆ ಮಾರಾಟ ಮಾಡಿದ್ದಲ್ಲಿ ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಡೀಲರ್ಸ್ ಮೂಲಕ ಮಾರಾಟ ಮಾಡುತ್ತಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಇದೀಗ ಬಿಡುಗಡೆಯಾಗಲಿರುವ ಹೈನೆಸ್ ಸಿಬಿ 350 ರೋಡ್‌ಸ್ಟರ್ ಕ್ಲಾಸಿಕ್ ಬೈಕ್ ಮಾದರಿಯು ಕೂಡಾ ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳಲಿದ್ದು, ಹೊಸ ಬೈಕ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಕ್ಲಾಸಿಕ್ 350, ಜಾವಾ ನಿರ್ಮಾಣದ ಜಾವಾ 300 ಟ್ವಿನ್ಸ್ ಮತ್ತು ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳನ್ನು ಹೊಂದಿರುವ ಹೈನೆಸ್ ಸಿಬಿ 350 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.90 ಲಕ್ಷದಿಂದ ಆರಂಭಗೊಳ್ಳುವುದಾಗಿ ಹೋಂಡಾ ಕಂಪನಿಯು ಮಾಹಿತಿ ನೀಡಿದ್ದು, ವಿವಿಧ ವೆರಿಯೆಂಟ್‌ಗಳ ಸಂಪೂರ್ಣ ಬೆಲೆ ಮಾಹಿತಿಯನ್ನು ಬಿಡುಗಡೆಯ ಸಂದರ್ಭದಲ್ಲಿ ಹಂಚಿಕೊಳ್ಳಲಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೈನೆಸ್ ಸಿಬಿ 350 ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು ಆರು ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಎಂಜಿನ್ ಮತ್ತು ಪರ್ಫಾಮೆನ್ಸ್

ಹೈನೆಸ್ ಸಿಬಿ 350 ಮಾದರಿಯು ಏರ್ ಕೂಲ್ಡ್ 350ಸಿಸಿ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸ್ಲಿಪ್ ಅಸಿಸ್ಟ್ ಕ್ಲಚ್ ವೈಶಿಷ್ಟ್ಯತೆ ಹೊಂದಿದೆ. ಎಂಜಿನ್ ಮಾಹಿತಿ ಹೊರತಾಗಿ ಹೊಸ ಬೈಕಿನ ಪರ್ಫಾಮೆನ್ಸ್ ಕುರಿತಾದ ಮಾಹಿತಿ ಬಿಡುಗಡೆ ವೇಳೆ ಬಹಿರಂಗವಾಗಲಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ರೆಟ್ರೊ ವಿನ್ಯಾಸದ ಹೈನೆಸ್ ಸಿಬಿ 350 ಬೈಕ್ ಮಾದರಿಯಲ್ಲಿ ಅತ್ಯುತ್ತಮ ಸಸ್ಷೆಂಷನ್ ಸೆಟಪ್ ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾರ್ಕ್ ನೀಡಲಾಗಿದೆ. ಹಾಗೆಯೇ ಹೊಸ ಬೈಕ್ ಮಾದರಿಯಲ್ಲಿ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಅಲಾಯ್ ವೀಲ್ಹ್ ಹೊಂದಿರಲಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೊಸ ಬೈಕಿನಲ್ಲಿ ರೆಟ್ರೋ ಶೈಲಿಯನ್ನು ಹೆಚ್ಚಿಸುವ ವೃತ್ತಾಕಾರವಾದ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ಸ್, ಟರ್ನ್ ಸಿಗ್ನಲ್ ಇಂಡಿಕೇಟರ್, ರೆಟ್ರೋ ಮಾದರಿಯ ರಿಯರ್ ವ್ಯೂ ಮಿರರ್, ಕ್ರೋಮ್ ಪ್ರೇರಿತ ಎಕ್ಸಾಸ್ಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಹೊಂದಿದೆ.

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಹೈನೆಸ್ ಸಿಬಿ 350 ಮಾದರಿಯಲ್ಲಿ ಹೋಂಡಾ ಕಂಪನಿಯು ಬ್ಲೂಥೂಟ್ ಮೂಲಕ ನಿಯಂತ್ರಣ ಮಾಡಬಹುದಾದ 'ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ' ಜೋಡಣೆ ಮಾಡಿದ್ದು, ಲಾಂಗ್ ರೈಡಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಆರ್‌ಇ ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಂದ ಹೋಂಡಾ ಹೈನೆಸ್ ಸಿಬಿ 350 ಸ್ಪೆಷಲ್ ಏನು?

ಈ ಮೂಲಕ ಭಾರತದಲ್ಲಿರುವ ಪ್ರಮುಖ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಹೈನೆಸ್ ಸಿಬಿ 350 ಆವೃತ್ತಿಯು ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೋಂಡಾ ಕಂಪನಿಯು ಹೊಸ ಬೈಕ್ ಮಾದರಿಯನ್ನು ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆ ಕೈಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
All New Honda Highness CB 350 Bike Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X