Just In
- 20 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶೇಷ ಗ್ರಾಫಿಕ್ಸ್ ಡಿಸೈನ್ ಹೊಂದಿರುವ ರೆಪ್ಸೊಲ್ ಹೋಂಡಾ ಹಾರ್ನೆಟ್ 2.0 ಮತ್ತು ಡಿಯೋ ಬಿಡುಗಡೆ
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಬೈಕ್‌ಗಳಲ್ಲಿ ಈಗಾಗಲೇ ರೇಸಿಂಗ್ ಟೀಮ್ ಪ್ರತಿನಿಧಿಸುವ ರೆಪ್ಸೊಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗೆ ನಡೆದ 800ನೇ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ಹಾರ್ನೆಟ್ 2.0 ಮತ್ತು ಡಿಯೋ ಸ್ಕೂಟರ್ ಮಾದರಿಯಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

ಸ್ಪೆಷಲ್ ರೆಪ್ಸೊಲ್ ಹೋಂಡಾ ಹಾರ್ನೆಟ್ 2.0 ಮತ್ತು ಡಿಯೋ ಮಾದರಿಗಳು ಸೀಮಿತ ಅವಧಿಗಾಗಿ ಕೆಲವೇ ಯುನಿಟ್ ಉತ್ಪಾದನೆ ಮಾಡಲಿರುವ ಕಂಪನಿಯು ಸ್ಪೆಷಲ್ ಎಡಿಷನ್‌ಗಳ ಖರೀದಿಗಾಗಿ ಇಂದಿನಿಂದಲೇ ಬುಕ್ಕಿಂಗ್ ಆರಂಭಿಸಿದ್ದು, ಸ್ಪೆಷಲ್ ಎಡಿಷನ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 69,757(ಡಿಯೋ) ಮತ್ತು ರೂ. 1.28 ಲಕ್ಷ(ಹಾರ್ನೆಟ್ 2.0)ಕ್ಕೆ ನಿಗದಿಪಡಿಸಲಾಗಿದ್ದು, ಮುಂದಿನ ವಾರದಿಂದಲೇ ಸ್ಪೆಷನ್ ಎಡಿಷನ್‌ಗಳ ವಿತರಣೆ ಆರಂಭವಾಗಲಿದೆ.

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ರೇಸಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಹಲವು ಬೈಕ್ ಮಾದರಿಗಳಲ್ಲಿ ರೆಪ್ಸೊಲ್ ಎಡಿಷನ್ ಮಾರಾಟ ಹೊಂದಿದ್ದು, ಇದೀಗ ಹಾರ್ನೆಟ್ 2.0 ಮತ್ತು ಡಿಯೋ ಸ್ಕೂಟರ್ ಮಾದರಿಯಲ್ಲಿ ಹೊಸ ಗ್ರಾಫಿಕ್ಸ್ ಸೌಲಭ್ಯವನ್ನು ನೀಡಲಾಗಿದೆ.

ಹೋಂಡಾ ರೆಪ್ಸೊಲ್ ಸ್ಪೆಷಲ್ ಎಡಿಷನ್ ಮಾದರಿಗಳಲ್ಲಿ ರೇಸಿಂಗ್ ಬಾಡಿ ಗ್ರಾಫಿಕ್ಸ್ ಜೊತೆ ವೈಬ್ರಂಟ್ ಆರೇಂಜ್ ವೀಲ್ಹ್ ರಿಮ್ ಹೊಂದಿದ್ದು, ಹೊಸ ಗ್ರಾಫಿಕ್ಸ್ ಡಿಸೈನ್ ಸೌಲಭ್ಯವು ಸ್ಪೆಷಲ್ ಎಡಿಷನ್ ಸ್ಪೋರ್ಟಿ ಲುಕ್ ಹೆಚ್ಚಿಸಲಿವೆ.

ಸ್ಪೋರ್ಟಿ ಲುಕ್ ಇಷ್ಟಪಡುವ ಗ್ರಾಹಕರಿಗೆ ಸ್ಪೆಷಲ್ ಎಡಿಷನ್‌ಗಳು ಖರೀದಿಗೆ ಉತ್ತಮ ಆಯ್ಕೆಯಾಗಿದ್ದು, ಗ್ರಾಫಿಕ್ಸ್ ಸೌಲಭ್ಯ ಹೊಂದಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿ ಬೆಲೆ ಪಡೆದುಕೊಂಡಿವೆ. ಮೊಟೊ ಜಿಪಿ ರೇಸ್‌ಗಳಲ್ಲಿ ಹಲವಾರು ಬಾರಿ ವಿಜಯಶಾಲಿಯಾಗಿರುವ ಹೋಂಡಾ ರೆಪ್ಸೊಲ್ ತಂಡವು ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದು, ಹೋಂಡಾ ನಿರ್ಮಾಣದ ಆರ್‌ಸಿ 213ವಿ ಬೈಕ್ ಮಾದರಿಯೇ ಮೊಟೊ ಜಿಪಿ ಟ್ರ್ಯಾಕ್‌ಗಳಲ್ಲಿ ಅದ್ಬುತ ರೈಡಿಂಗ್ ಪ್ರದರ್ಶನ ಹೊಂದಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇತ್ತೀಚೆಗೆ 800ನೇ ಮೊಟೊ ಜಿಪಿ ರೇಸ್‌ನಲ್ಲೂ ಕಮಾಲ್ ಮಾಡಿದ ಹೋಂಡಾ ರೆಪ್ಸೊಲ್ ತಂಡವು ಸತತ ಸರಣಿ ಗೆಲವು ತನ್ನದಾಗಿಸಿಕೊಂಡಿತ್ತು. ಇದೇ ಸಂಭ್ರಮಕ್ಕಾಗಾಗಿ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ವಿಭಾಗವು ಹಾರ್ನೆಟ್ 2.0 ಮತ್ತು ಡಿಯೋ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

ಗ್ರಾಫಿಕ್ಸ್ ಡಿಸೈನ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳಲ್ಲಿನ ಇತರೆ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಹಾರ್ನೆಟ್ 2.0 ಮಾದರಿಯು 184 ಸಿಸಿ ಎಂಜಿನ್‌ನೊಂದಿಗೆ ಮತ್ತು ಡಿಯೋ ಮಾದರಿಯು 109ಸಿಸಿ ಎಂಜಿನ್ ಆಯ್ಕೆ ಹೊಂದಿವೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹಾರ್ನೆಟ್ 2.0 ಬೈಕ್ ಮಾದರಿಯಲ್ಲಿರುವ 184 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಮಾದರಿಯು ಫೈವ್ ಸ್ಪೀಡ್ ಗೇರ್‌ಬಾಕ್ಸ್ 17-ಬಿಎಚ್‌ಪಿ, 16.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 109-ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಡಿಯೋ ಸ್ಕೂಟರ್ ಮಾದರಿಯು 7.6-ಬಿಎಚ್‌ಪಿ, 9ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.