Just In
- 14 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 15 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 16 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 17 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News ಹುಬ್ಬಳ್ಳಿ ಹತ್ಯೆಯನ್ನು ಲವ್ ಜಿಹಾದ್ ಆಯಾಮದಲ್ಲಿ ತನಿಖೆ ನಡೆಸಿ: ಪ್ರಹ್ಲಾದ್ ಜೋಶಿ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡ್ಡಾಯಕ್ಕೂ ಮುನ್ನ ಬಿಎಸ್-6 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಹೋಂಡಾ
ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಮ್ಮ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿದ್ದು, ಹೋಂಡಾ ಮೋಟಾರ್ಸೈಕಲ್ ಕೂಡಾ ಬಿಎಸ್-6 ಮಾದರಿಯ ಸ್ಕೂಟರ್ ಮತ್ತು ಬೈಕ್ಗಳನ್ನು ಉನ್ನತೀಕರಿಸಿ ಬಿಡುಗಡೆಗೊಳಿಸಿರುವುದಲ್ಲದೆ ಮಾರಾಟದಲ್ಲೂ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.
ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 6ಜಿ, ಆಕ್ಟಿವಾ 125, ಡಿಯೋ, ಎಸ್ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಮಿಷನ್ ಜಾರಿಗೆ ಮುನ್ನ ಬಿಡುಗಡೆಯಾಗಲಿರುವ ಹೊಸ ದ್ವಿಚಕ್ರ ವಾಹನಗಳಿಗೆ ದಾಖಲೆ ಪ್ರಮಾಣದ ಬೇಡಿಕೆ ಹರಿದು ಬಂದಿದೆ. ಹೋಂಡಾ ಸಂಸ್ಥೆಯು ಇದುವರೆಗೆ 3 ಲಕ್ಷ ಯುನಿಟ್ ಬಿಎಸ್-6 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 4 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.
ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 6ಜಿ, ಡಿಯೋ, ಆಕ್ಟಿವಾ 125, ಎಸ್ಪಿ 125, ಶೈನ್ ಬೈಕ್ ಮಾದರಿಯು ದುಬಾರಿ ಬೆಲೆ ಹೊಂದಿದ್ದರೂ ಗ್ರಾಹಕರನ್ನು ಸೆಳೆಯುತ್ತಿದ್ದು, ಮೈಲೇಜ್ ವಿಚಾರದಲ್ಲಿ ಹೊಸ ಎಂಜಿನ್ ಪ್ರೇರಿತ ವಾಹನಗಳು ಆಕರ್ಷಣೆಗೆ ಕಾರಣವಾಗಿವೆ.
ಆಕ್ಟಿವಾ 6ಜಿ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.63,912ಕ್ಕೆ(ಸ್ಟ್ಯಾಂಡರ್ಡ್) ಮತ್ತು ಟಾಪ್ ವೆರಿಯೆಂಟ್ ಡಿಲಕ್ಸ್ ರೂ.65,412 ಬೆಲೆ ಪಡೆದುಕೊಂಡಿದೆ. ಹೊಸ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಈ ಹಿಂದಿನ ಆಕ್ಟಿವಾ 5ಜಿ ಗಿಂತಲೂ ರೂ.8 ಸಾವಿರದಷ್ಟು ಹೆಚ್ಚುವರಿ ಪಡೆದುಕೊಂಡಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಎಂಜಿನ್ ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಫೀಚರ್ಸಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.
109 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಆಕ್ಟಿವಾ 6ಜಿ ಮಾದರಿಯಲ್ಲಿ ಆಕ್ಟಿವಾ 125 ನಂತರ ಎರಡನೇ ಸ್ಕೂಟರ್ ಮಾದರಿಯಲ್ಲಿ ಪಿಜಿಎಂ-ಎಫ್ಐ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನದಿಂದ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆಯ ಮೂಲಕ ಶೇ.10 ರಷ್ಟು ಹೆಚ್ಚುವರಿ ಮೈಲೇಜ್ ಹಿಂದಿರುಗಿಸಬಲ್ಲ ಗುಣಲಕ್ಷಣವನ್ನು ಹೊಂದಿದೆ.
ಹಾಗೆಯೇ ಹೊಸ ಆಕ್ಟಿವಾ 125 ಸ್ಕೂಟರ್ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಲಾಗಿದೆ. ಕ್ರೋಮ್ ಡಿಸೈನ್ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದ್ದು, ಇದು ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.
ಇದರೊಂದಿಗೆ ಬಿಎಸ್-6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮತ್ತು ಎಸ್ಪಿ 125 ಬೈಕ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ ಎನ್ನಬಹುದು.
ಆಕ್ಟಿವಾ 125 ಸ್ಕೂಟರ್ ಮಾದರಿಯು ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್-ಇಂಜೆಕ್ಷಡ್ ಯುನಿಟ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು 8.4-ಬಿಎಚ್ಪಿ ಮತ್ತು 10.54-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
ಹೊಸ ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಅಂದ್ರೆ ಅದು ಐಡ್ಲಿಂಗ್ ಸ್ಟಾಪ್ ಸಿಸ್ಟಂ ಸೌಲಭ್ಯ. ಹೌದು, ಹೋಂಡಾ ಸಂಸ್ಥೆಯು ಮೊದಲ ಬಾರಿಗೆ ಆಕ್ಟಿವಾ 125 ಸ್ಕೂಟರ್ನಲ್ಲಿ ಐಡ್ಲಿಂಗ್ ಸ್ಟಾಪ್ ಸಿಸ್ಟಂ ಬಳಕೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆಗಳಲ್ಲಿ ಇಂಧನ ವ್ಯರ್ಥವನ್ನು ತಪ್ಪಿಸಲಿದೆ.
ಎಸ್ಪಿ 125 ಬೈಕ್ ಮಾದರಿಯು ಸಹ ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರುವ ಎಸ್ಪಿ 125 ಬೈಕ್ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.77,100 ಬೆಲೆ ಪಡೆದುಕೊಂಡಿದೆ.
ಎಸ್ಪಿ 125 ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್ಪಿಎಂನಲ್ಲಿ 10.7 ಬಿಹೆಚ್ಪಿ ಪವರ್ ಹಾಗೂ 9,000 ಆರ್ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ದೇಶದಲ್ಲಿ ಮಾರಾಟವಾಗುವ ಟಾಪ್ 10 ಸ್ಕೂಟರ್ಗಳಲ್ಲಿ ಒಂದಾಗಿರುವ ಡಿಯೋ ಸ್ಕೂಟರ್ ಕೂಡಾ ಇದೀಗ ಹೊಸ ಎಂಜಿನ್, ವಿನೂತನ ವಿನ್ಯಾಸ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಡಿಸೈನ್ ಹೊಂದಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.
ಬಿಎಸ್-6 ಹೋಂಡಾ ಡಿಯೋ ಸ್ಕೂಟರ್ನಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಇದು ವೇಗ, ಸರಾಸರಿ ಇಂಧನ ದಕ್ಷತೆ ಮತ್ತು ರಿಯಲ್ ಟೈಮ್ ಇಂಧನ ದಕ್ಷತೆಯ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದಲ್ಲದೆ ಇದು ಟ್ರಿಪ್ ಮೀಟರ್, ಕ್ಲಾಕ್ ಮತ್ತು ಸರ್ವಿಸ್ ಇಂಡಿಕೇಟರ್ ಅನ್ನು ಪ್ರದರ್ಶಿಸಲಿದ್ದು, ಆಕ್ಟಿವಾ 6ಜಿ ಸ್ಕೂಟರ್ನಂತೆ ಫುಲ್ ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಡಿಆರ್ಎಲ್ ಅನ್ನು ಅಳವಡಿಸಲಾಗಿದೆ.
ಆಕ್ಟಿವಾ 6ಜಿಯಂತೆಯೇ ಹೋಂಡಾ ಡಿಯೋ ಕೂಡಾ ಒಂದೇ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ್ದು, 110 ಸಿಸಿ ಎಂಜಿನ್ನೊಂದಿಗೆ 7.79-ಬಿಹೆಚ್ಪಿ ಮತ್ತು 8.79-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 59,990 ಆರಂಭಿಕ ಬೆಲೆ ಹೊಂದಿದೆ.
ಇನ್ನು ಭಾರತದಲ್ಲಿ ಮಾರಾಟವಾಗುವ 125 ಬೈಕ್ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿರುವ ಸಿಬಿ ಶೈನ್ ಕೂಡಾ ಇದೀಗ ಕೆಲವು ಮಹತ್ವದ ಬದಲಾವಣೆಯೊಂದಿಗೆ ಉನ್ನತೀಕರಣಗೊಂಡಿದ್ದು, ಬಿಎಸ್-6 ಎಂಜಿನ್ ಹೊಂದಿರುವ ಹೊಸ ಬೈಕ್ ಇದೀಗ ಸಿಬಿ ಶೈನ್ ಬದಲಾಗಿ ಶೈನ್ ಹೆಸರಿನಲ್ಲಿ ಮಾತ್ರವೇ ಮಾರಾಟಗೊಳ್ಳಲಿದೆ.
ಹೊಸ ಶೈನ್ ಬೈಕ್ ಮಾದರಿಯು 125 ಸಿಸಿ ಫ್ಯೂಲ್ ಇಂಜೆಕ್ಷಡ್ ಎಂಜಿನ್ ಹೊಂದಿದ್ದು, ಸೈಲೆಂಟ್ ಸ್ಟಾರ್ಟರ್ ಜೊತೆ ಇಎಸ್ಪಿ ತಂತ್ರಜ್ಞಾನ ಹೊಂದಿರುವ ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.67,857 ಬೆಲೆ ನಿಗದಿಪಡಿಸಲಾಗಿದೆ.