ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಭಾರತದಲ್ಲಿ ಈ ವರ್ಷದ ಏಪ್ರಿಲ್ 1ರಿಂದ ಬಿಎಸ್ 4 ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಕರೋನಾದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದ ಸಂದರ್ಭದಲ್ಲಿ ಈ ನಿಯಮಗಳು ಜಾರಿಗೆ ಬಂದವು. ಇದರಿಂದಾಗಿ ಅನೇಕ ವಾಹನ ತಯಾರಕ ಕಂಪನಿಗಳ ಬಿಎಸ್ 4 ವಾಹನಗಳು ಮಾರಾಟವಾಗದೇ ಉಳಿದಿವೆ.

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಸುಪ್ರೀಂ ಕೋರ್ಟ್ 10 ದಿನಗಳ ಹೆಚ್ಕುವರಿ ಕಾಲಾವಧಿ ನೀಡಿ 10%ನಷ್ಟು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಆಟೋ ಮೊಬೈಲ್ ಕಂಪನಿಗಳಿಗೆ ಅನುಮತಿ ನೀಡಿತ್ತು. ಈ ಅವಧಿಯಲ್ಲಿಯೂ ಕಂಪನಿಗಳು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಈಗ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮೊದಲೇ ರಿಜಿಸ್ಟರ್ ಮಾಡಲಾಗಿರುವ ತನ್ನ ಉಪಯೋಗಿಸದ ವಾಹನಗಳ ಮಾರಾಟಕ್ಕಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ.

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಈ ಯೋಜನೆಯಡಿ ಕಂಪನಿಯು ಮೊದಲೇ ರಿಜಿಸ್ಟರ್ ಮಾಡಲಾಗಿರುವ ಹಾಗೂ ಬಳಸದೇ ಇರುವ ಬಿಎಸ್ 4 ವಾಹನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ. ಇದಕ್ಕಾಗಿ ಕಂಪನಿಯು ತನ್ನ ವೆಬ್‌ಸೈಟ್ ನಲ್ಲಿ ಪ್ರತ್ಯೇಕವಾದ ವಿಭಾಗವನ್ನು ತೆರೆದಿದೆ. ಇದರಲ್ಲಿ ಗ್ರಾಹಕರು ತಮ್ಮ ಸ್ಥಳ, ಮೊಬೈಲ್ ನಂಬರ್ ಹಾಗೂ ಅವರು ಖರೀದಿಸಲು ಬಯಸಿರುವ ಮಾದರಿಯ ವಿವರಗಳನ್ನು ನೀಡಬೇಕಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಈ ವಿವರಗಳನ್ನು ಭರ್ತಿ ಮಾಡಿದ ನಂತರ ಹತ್ತಿರದಲ್ಲಿರುವ ಹೋಂಡಾ ಶೋರೂಂನ ಸೇಲ್ಸ್ ಎಕ್ಸಿಕ್ಯೂಟಿವ್ ಸಂಪರ್ಕಿಸಿ, ಮುಂದಿನ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ಪ್ರತಿ ಮಾದರಿಯಲ್ಲಿ ಉಳಿದಿರುವ ಸ್ಟಾಕ್ ಆಧಾರದ ಮೇಲೆ ರಿಯಾಯಿತಿ ನೀಡಲಾಗುತ್ತದೆ.

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಬಿಎಸ್ 4 ವಾಹನಗಳ ಮಾರಾಟಕ್ಕಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂಬುದನ್ನು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ದೃಢಿಕರಿಸಿಲ್ಲವಾದರೂ ಬಳಕೆಯಾಗದ ವಾಹನಗಳೆಂದರೆ ಬಿಎಸ್ 4 ವಾಹನಗಳೆಂದು ತಿಳಿಯಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಪಾಣಿಪತ್‌ನಲ್ಲಿರುವ ಹೋಂಡಾ ಶೋರೂಂನಲ್ಲಿ ಮೊದಲೇ ನೋಂದಾಯಿಸಲಾಗಿರುವ 0 ಕಿ.ಮೀ ರೀಡಿಂಗ್ ಹೊಂದಿರುವ ಹೋಂಡಾ ನವೀ ಮಿನಿ ಬೈಕ್ ಅನ್ನು ಆನ್ ರೋಡ್ ದರದಂತೆ ರೂ.30,000ಗಳಿಗೆ ಮಾರಾಟ ಮಾಡಲಾಗಿದೆ. ಈ ಬೈಕಿನ ಎಕ್ಸ್ ಶೋರೂಂ ಬೆಲೆಗಿಂತ ರೂ.15 ಸಾವಿರ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.

ಅತಿ ಕಡಿಮೆ ಬೆಲೆಗೆ ಮಾರಾಟವಾಗಲಿವೆ ಹೋಂಡಾ ಕಂಪನಿಯ ವಾಹನಗಳು

ಈ ಎಲ್ಲಾ ಬಿಎಸ್ 4 ವಾಹನಗಳನ್ನು ಮೊದಲೇ ರಿಜಿಸ್ಟರ್ ಮಾಡಲಾಗಿದೆ. ಇವುಗಳನ್ನು ಬಳಸಲಾಗಿಲ್ಲ. ಈ ಎಲ್ಲಾ ವಾಹನಗಳನ್ನು ಬಳಸಿದ ವಾಹನಗಳಂತೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ವಾಹನಗಳಲ್ಲಿ ಹೋಂಡಾದ ಎಲ್ಲಾ ಸ್ಕೂಟರ್‌ ಹಾಗೂ ಬೈಕ್‌ಗಳು ಸೇರಿವೆ.

Most Read Articles

Kannada
English summary
Honda Motorcycle selling unused BS4 vehicles at lower price. Read in Kannada.
Story first published: Monday, July 13, 2020, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X