ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದೆ. ಹೋಂಡಾ ಅಫ್ರಿಕ್ ಟ್ವಿನ್‌ ಬೈಕ್‌ ಅನ್ನು ಪೂರ್ಣ ಪ್ರಮಾಣದ ಆಟೋಮ್ಯಾಟಿಕ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ನಲ್ಲಿ ಬಿಡುಗಡೆಗೊಳಿಸಿದ ನಂತರ ಕಂಪನಿಯು ಸೆಮಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬೈಕ್ ಅಭಿವೃದ್ಧಿಪಡಿಸಲು ಮುಂದಾಗಿದೆ.

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಗೇರ್‌ಬಾಕ್ಸ್ ಹೋಂಡಾದ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಆಧಾರಿತವಾಗಿರಬಹುದು. ಆದರೆ ಮೊದಲಿಗಿಂತಲೂ ಹಗುರವಾಗಿ ಹಾಗೂ ವಿನ್ಯಾಸದಲ್ಲಿ ಸರಳವಾಗಿರಲಿದೆ. ಹೊಸ ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್, ಕ್ಲಚ್ ಲಿವರ್‌ನ ಬಳಕೆಯನ್ನು ಇಲ್ಲವಾಗಿಸುತ್ತದೆ. ಆದರೆ ಮೆಕಾನಿಕಲ್ ಅಂಶಗಳು ಡಿಸಿಟಿ ವಿನ್ಯಾಸಕ್ಕಿಂತ ಸರಳವಾಗಿ, ಹಗುರವಾಗಿರಲಿವೆ. ಡಿಸಿಟಿ ಗೇರ್‌ಬಾಕ್ಸ್ ಡ್ಯುಯಲ್ ಕ್ಲಚ್ ಸೆಟಪ್ ಆಗಿದ್ದು, ಹಳೆಯ ಹೊಂಡಾಮ್ಯಾಟಿಕ್ ವಿನ್ಯಾಸದಲ್ಲಿ 2-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬಳಸಲಾಗುತ್ತದೆ.

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಸೆಮಿ ಆಟೋಮ್ಯಾಟಿಕ್ ಸಿಸ್ಟಂನಲ್ಲಿ 6-ಸ್ಪೀಡಿನ ಗೇರ್‌ಬಾಕ್ಸ್‌ ನೀಡಲಾಗುವುದು. ಇದನ್ನು ಬೈಕ್ ಸವಾರನು ಕಂಟ್ರೋಲ್ ಮಾಡಲಿದ್ದಾನೆ. ಈ ಸಿಸ್ಟಂನಲ್ಲಿ ಬೈಕ್‌ ಹ್ಯಾಂಡಲ್‌ನಲ್ಲಿ ಕ್ಲಚ್ ಲಿವರ್ ನೀಡುವುದಿಲ್ಲ. ಪೇಟೆಂಟ್ ಅರ್ಜಿಯಲ್ಲಿ ಈ ಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ. ಬೈಕ್ ಚಾಲಕರು ಯಾವಾಗ, ಹೇಗೆ ಗೇರ್‌ಗಳನ್ನು ಬದಲಿಸಬೇಕು ಎಂಬ ಬಗ್ಗೆ ಹೇಳಲಾಗಿಲ್ಲ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಬೈಕ್ ತಜ್ಞರು ಹೇಳುವ ಪ್ರಕಾರ, ಈ ಬೈಕ್‌ನಲ್ಲಿ ಕ್ಲಚ್ ಅನ್ನು ಆರ್‌ಪಿಎಂ ಶ್ರೇಣಿಗೆ ಲಿಂಕ್ ಮಾಡಲಾಗುತ್ತದೆ. ಬೈಕ್‌ನ ಆರ್‌ಪಿಎಂ ಹೆಚ್ಚು ಅಥವಾ ಕಡಿಮೆಯಾದಾಗ ಗೇರ್ ಬದಲಿಸಬಹುದು. ಇದರಿಂದಾಗಿ ಕ್ಲಚ್ ಒತ್ತುವಾಗ ಯಾವುದೇ ತೊಂದರೆಯಾಗುವುದಿಲ್ಲ. ಕಿಕ್ಕಿರಿದ ರಸ್ತೆಗಳಲ್ಲಿ ಬೈಕ್ ಅನ್ನು ಸುಲಭವಾಗಿ ಚಲಿಸಬಹುದು.

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಪೇಟೆಂಟ್ ಫೋಟೋಗಳಲ್ಲಿ ಈ ತಂತ್ರಜ್ಞಾನವನ್ನು ಹೋಂಡಾ ಸಿಬಿ 1100 ಬೈಕಿನೊಂದಿಗೆ ತೋರಿಸಲಾಗಿದೆ. ಈ ಬೈಕ್‌ನಲ್ಲಿ ಹೋಂಡಾದ ಹೊಸ ಸೆಮಿ ಆಟೋಮ್ಯಾಟಿಕ್ ಸಿಸ್ಟಂ ಬಳಸುವ ನಿರೀಕ್ಷೆಗಳಿವೆ. ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಲಾದ ನಂತರ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಎಲ್ಲಾ ಘಟಕಗಳಲ್ಲಿ ಉತ್ಪಾದನೆಯನ್ನು ಆರಂಭಿಸಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಇದರ ಜೊತೆಗೆ ಕಂಪನಿಯು ದೇಶಾದ್ಯಂತವಿರುವ ತನ್ನ 60%ನಷ್ಟು ಮಾರಾಟ ಕೇಂದ್ರಗಳನ್ನು ತೆರೆದಿದ್ದು, ಮಾರಾಟ ಹಾಗೂ ಸರ್ವಿಸ್‌ಗಳನ್ನು ಆರಂಭಿಸಿದೆ. ಕಂಪನಿಯ ಉತ್ಪಾದನಾ ಘಟಕ, ಶೋರೂಂ, ಸರ್ವೀಸ್ ಸೆಂಟರ್‌ಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಚಿಸಿರುವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ.

ಸೆಮಿ ಆಟೋಮ್ಯಾಟಿಕ್ ಬೈಕಿಗೆ ಪೇಟೆಂಟ್ ಅರ್ಜಿ ಸಲ್ಲಿಸಿದ ಹೋಂಡಾ ಮೋಟಾರ್‌ಸೈಕಲ್

ಮಾರಾಟವು ನಿಧಾನವಾಗಿ ಹೆಚ್ಚುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ವಾಹನಗಳನ್ನು ಪೂರೈಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಶೋರೂಂಗಳನ್ನು ತೆರೆದ ನಂತರ ಕಂಪನಿಯು 21,000 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಹೇಳಲಾಗಿದೆ.

Most Read Articles

Kannada
English summary
Honda Motorcycles files patent application for new semi automatic transmission unit. Read in Kannada.
Story first published: Thursday, May 28, 2020, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X