ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೊಸ ಹಾರ್ನೆಟ್ 2.0 ಮತ್ತು ಹೈನೆಸ್ ಸಿಬಿ 350 ಬೈಕನ್ನು ಬಿಡುಗಡೆಗೊಳಿಸಿತ್ತು. ಇದೀಗ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಎಚ್‌ಎಂಎಸ್‌ಐ ಅಧ್ಯಕ್ಷರಾದ ಅಟ್ಸುಶಿ ಒಗಾಟಾ ಅವರು ಹೋಂಡಾ ಹಾರ್ನೆಟ್ 2.0 ಪ್ಲಾಟ್‌ಫಾರ್ಮ್‌ನಲ್ಲಿ ಹೂಡಿಕೆ ಮಾಡಿರುವುದರಿಂದ ಆ ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾಗುವ ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಹೋಂಡಾ ಮುಂದಿನ ದಿನಗಳಲ್ಲಿ 180-200ಸಿಸಿ ಅಡ್ವೆಂಚರ್ ಅನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿದ್ದಾರೆ.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಹೊಸ ಅಡ್ವೆಂಚರ್ ಬೈಕ್ ಸಿಆರ್ಎಫ್ 250ಎಲ್ ಸರಣಿಯಿಂದ ವಿನ್ಯಾಸಕ್ಕೆ ಸ್ಫೂರ್ತಿ ಪಡೆಯಬಹುದು. ಈ ಹೊಸ ಅಡ್ವೆಂಚರ್ ಬೈಕನ್ನು ವಿಶ್ವದ ಇತರ ಭಾಗಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಪ್ರಸ್ತುತ ಹೀರೋ ಎಕ್ಸ್‌ಪಲ್ಸ್ 200 ಬೈಕಿಗೆ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಆದರೆ ಹೊಸ 180-200 ಸಿಸಿ ಬೈಕು ತರಲು ಹೋಂಡಾ ನಿರ್ಧರಿಸಿದರೆ ಅದು ಹೀರೋ ಎಕ್ಸ್‌ಪಲ್ಸ್ 200 ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಸಣ್ಣ ವಿಭಾಗದ ಅಡ್ವೆಂಚರ್ ಬೈಕನ್ನು ಅಭಿವೃದ್ಧಿಪಡಿಸುತ್ತದೆ, ಈ ಅಡ್ವೆಂಚರ್ ಬೈಕಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ, ಇದರ ಬೆಲೆಯು ಎಕ್ಸ್‌ಪಲ್ಸ್ 200ರಂತೆಯೇ ನೀಡಬಹುದು.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಇನ್ನು ಹೋಂಡಾ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬೆಲೆಯು ಎಕ್ಸ್ ಶೋರೂಂ(ಗುರುಗ್ರಾಮ್) ಪ್ರಕಾರ ರೂ.1.26 ಲಕ್ಷಗಳಾಗಿದೆ. ಹೋಂಡಾ ಕಂಪನಿಯು ತನ್ನ ಹಳೆಯ ಸಿಬಿ ಹಾರ್ನೆಟ್ 160ಆರ್ ಬೈಕನ್ನು ಬದಲಾಯಿಸಿ ಆ ಸ್ಥಾನಕ್ಕೆ ಹೊಸ ಹೋಂಡಾ ಹಾರ್ನೆಟ್ 2.0 ಮಾದರಿಯನ್ನು ಬಿಡುಗಡೆಗೊಳಿಸಿತು.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಹೊಸ ಹಾರ್ನೆಟ್ 2.0 ಬೈಕನ್ನು ಬಿಡುಗಡೆಗೊಳಿಸುವ ಮೂಲಕ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 180-200 ಸಿಸಿ ವಿಭಾಗಕ್ಕೆ ಪ್ರವೇಶವನ್ನು ಮಾಡಿತು. ಹೋಂಡಾ ಹಾರ್ನೆಟ್ 2.0 ಬೈಕ್ ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಎಂಜಿನ್ 8500 ಆರ್‌ಪಿಎಂನಲ್ಲಿ 17 ಬಿಹೆಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಈ ಹೋಂಡಾ ಹಾರ್ನೆಟ್ 2.0 ಬೈಕ್ ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹಾರ್ನೆಟ್ 2.0 ಮಾದರಿಯನ್ನು ಆಧರಿಸಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಹಾರ್ನೆಟ್ 2.0 ಭಾರತೀಯ ಮಾರುಕಟ್ಟೆಯ 180-200 ಸಿಸಿ ವಿಭಾಗದಲ್ಲಿ ಹೋಂಡಾ ಕಂಪನಿಯ ಮೊದಲ ಬೈಕ್ ಆಗಿದೆ. ಉತ್ತಮ ಫೀಚರ್‍‍ಗಳೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಈ ಹೋಂಡಾ ಹಾರ್ನೆಟ್ 2.0 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 180 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda May Introduce A Small Adventure Motorcycle, Based On Hornet 2.0. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X