ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ವಿವಿಧ ಮಾದರಿಯ ನಾಲ್ಕು ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತರಲಾದ ಆಮದು ನೀತಿ ವಿನಾಯ್ತಿಯು ವಿದೇಶಿ ಆಟೋ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲಕವಾಗಿದ್ದು, ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2500 ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನಲೆ ಜಪಾನ್ ಮೋಟಾರ್ ಸೈಕಲ್ ಸಂಸ್ಥೆಯಾಗಿರುವ ಹೋಂಡಾ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಕೆಲವು ಸೂಪರ್ ಬೈಕ್ ಮಾದರಿಗಳನ್ನು ಭಾರತದಲ್ಲೂ ಪರಿಚಯಿಸಲು ಮುಂದಾಗಿದೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಹೋಂಡಾ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್, ಸಿಬಿ1000ಆರ್, ಆಫ್ರಿಕನ್ ಟ್ವಿನ್ ಮತ್ತು ಗೋಲ್ಡ್‌ವಿಂಗ್ ಸೂಪರ್ ಬೈಕ್ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಬೈಕ್‌ಗಳು 450 ಸಿಸಿ ಯಿಂದ 500 ಸಿಸಿ ಮಧ್ಯದ ಎಂಜಿನ್ ಗಾತ್ರವನ್ನು ಹೊಂದಿರಲಿವೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಹೊಸದಾಗಿ ರೆಬೆಲ್ 500, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಬೈಕ್‌ಗಳನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಆಫ್ರಿಕನ್ ಟ್ವಿನ್ ಅಡ್ವೆಂಚರ್ ಬೈಕಿನ ಬಿಎಸ್-6 ಆವೃತ್ತಿ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಹೊಸ ಬೈಕ್‌ಗಳ ಬಿಡುಗಡೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಹೊಸ ಬೈಕ್‌ಗಳು ಸಂಪೂರ್ಣವಾಗಿ ಆಮದು ಬೈಕ್ ಮಾದರಿಯಾಗಿರುವುದರಿಂದ ಬೈಕ್‌ಗಳ ಬೆಲೆಯೂ ತುಸು ದುಬಾರಿಯಾಗಿರಲಿದೆ. ಇದರಲ್ಲಿ ರೆಬೆಲ್ 500 ಮಾದರಿಯು ಮೊದಲ ಹಂತದಲ್ಲಿ ಬಿಡುಗಡೆಯಾಗಲಿದ್ದು, ಹೋಂಡಾ ಸಂಸ್ಥೆಗೆ ಇದು ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಹೊಸ ರೆಬೆಲ್ 500 ಬೈಕ್ ಮಾದರಿಯು ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕ್ರೂಸ್ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ ಮತ್ತು ಪ್ರೀಮಿಯಂ ಬೈಕ್ ಮಾದರಿಗಳಾದ ಹಾರ್ಲೆ ಡೆವಿಡ್ಸನ್ ಸ್ಟ್ರೀಟ್ 750 ಮತ್ತು ಕವಾಸಕಿ ವಲ್ಕನ್ ಎಸ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನುಳಿದ ಸಿಬಿ500ಎಫ್ ಮಾದರಿಯು ಸ್ಟ್ರೀಟ್ ಫೈಟರ್, ಸಿಬಿಆರ್500ಆರ್ ಸೂಪರ್ ಸ್ಪೋರ್ಟ್ಸ್ ಮತ್ತು ಸಿಬಿ500ಎಕ್ಸ್ ಮಾದರಿಯ ಅಡ್ವೆಂಚರ್ ಟೂರರ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, 471-ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ 47.5-ಬಿಎಚ್‌ಪಿ ಮತ್ತು 43-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ಬೈಕ್‌ಗಳ ಬೆಲೆ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ಮೇಲೆ ಹೇಳಿದಂತೆ ಹೊಸ ಬೈಕ್‌ಗಳು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಂಡಿರುವ ಹಿನ್ನಲೆಯಲ್ಲಿ ಬೆಲೆ ತುಸು ದುಬಾರಿಯಾಗಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4 ಲಕ್ಷದಿಂದ ರೂ. 4.60 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿವೆ.

ಬಹುನೀರಿಕ್ಷಿತ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನು ಹೊಸ ಆಮದು ನೀತಿಯಡಿ ವಿದೇಶಿ ಮಾರುಕಟ್ಟೆಯಿಂದ ಆಮದುಗೊಳ್ಳುವ ಹೊಸ ಬೈಕ್‌ಗಳು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೋಂಡಾ ಮಾತ್ರವಲ್ಲದೆ ಸುಜುಕಿ ಮತ್ತು ಹಾರ್ಲೆ ಡೆವಿಡ್ಸನ್ ಬೈಕ್ ಸಂಸ್ಥೆಗಳು ಸಹ ಹೊಸ ಬೈಕ್‌ಗಳನ್ನು ಭಾರತದಲ್ಲಿ ಮಾರಾಟಕ್ಕೆ ಸಿದ್ದಗೊಳ್ಳುತ್ತಿವೆ.

Source: Bikedekho

Most Read Articles

Kannada
English summary
According to reports, Honda Motorcycle company is likely to launch Rebel 500 cruiser bike in India by next month. Read in Kannada.
Story first published: Wednesday, March 11, 2020, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X