ಕರೋನಾ ವೈರಸ್ ಭೀತಿ ನಡುವೆಯೂ ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಮಹಾಮಾರಿ ಕರೋನಾ ವೈರಸ್‌ನಿಂದ ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು, ವೈರಸ್ ಹರಡದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಹೀಗಿದ್ದರೂ ಕೂಡಾ ಕಳೆದ ತಿಂಗಳು ಲಾಕ್ ಡೌನ್‌ಗೂ ಮುನ್ನ ಸ್ಕೂಟರ್ ಮಾರಾಟದಲ್ಲಿ ಹೋಂಡಾ ಕಂಪನಿಯು ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ವೈರಸ್ ಹರಡದಂತೆ ಈಗಾಗಲೇ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದರೂ ಕಳೆದ ತಿಂಗಳ ಮೊದಲ ಎರಡು ವಾರ ವಾಹನ ಮಾರಾಟವು ವೈರಸ್ ಹರಡುವಿಕೆಯ ಭೀತಿಯ ನಡುವೆಯೂ ವಹಿವಾಟು ನಡೆದಿತ್ತು. ಇದರಿಂದ ಬಹುತೇಕ ವಾಹನಗಳ ಮಾರಾಟದಲ್ಲಿ ಶೇ. 45ರಿಂದ ಶೇ.90ರಷ್ಟು ಮಾರಾಟವು ಕುಸಿತ ಕಂಡಿತ್ತು. ಆದರೆ ಹೋಂಡಾ ದ್ವಿಚಕ್ರ ವಾಹನಗಳ ವಿಭಾಗವು ಇದೇ ಮೊದಲ ಎರಡು ವಾರಗಳಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಮಾಹಿತಿಗಳ ಪ್ರಕಾರ, ಹೋಂಡಾ ಕಂಪನಿಯು ಮಾರ್ಚ್ ಅವಧಿಯಲ್ಲಿ 2,61,699 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 2019ರ ಮಾರ್ಚ್ ಅವಧಿಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟದ ಪ್ರಮಾಣಕ್ಕಿಂತಲೂ ಇದು ಶೇ.5 ರಷ್ಟು ಹೆಚ್ಚುವರಿ ಬೇಡಿಕೆ ಹರಿದುಬಂದಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

2019ರ ಮಾರ್ಚ್ ಅವಧಿಯಲ್ಲಿ ಒಟ್ಟು 2,49,136 ಯುನಿಟ್ ಮಾರಾಟ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಕರೋನಾ ಭೀತಿ ನಡುವೆಯೂ ಉತ್ತಮ ಮಾರಾಟ ದಾಖಲೆ ಕಂಡಿದ್ದು, ಹೋಂಡಾ ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಕ್ ಮತ್ತು ಕಾರು ಉತ್ಪಾದನಾ ಕಂಪನಿಗಳು ಭಾರೀ ಕುಸಿತ ಕಂಡಿವೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ದ್ವಿಚಕ್ರ ಮಾರಾಟದಲ್ಲಿ ಬೇಡಿಕೆ ಹೆಚ್ಚಾಗಲು ಬಿಎಸ್-6 ನಿಯಮ ಜಾರಿ ಕೂಡಾ ಪ್ರಮುಖ ಕಾರಣವಾಗಿದ್ದು, ಏಪ್ರಿಲ್ 1ರಿಂದ ನಿಷೇಧಗೊಳ್ಳಬೇಕಿದ್ದ ದ್ವಿಚಕ್ರ ವಾಹನಗಳನ್ನು ಯುಗಾದಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್‌ಗಳೊಂದಿಗೆ ಮುಂಗಡವಾಗಿ ಮಾರಾಟ ಮಾಡಿತ್ತು. ಆದರೆ ಕರೋನಾ ವೈರಸ್ ಪ್ರಮಾಣ ಹೆಚ್ಚುತ್ತಿದ್ದಂತೆ ಲಾಕ್ ಡೌನ್ ಮಾಡಿದಾಗಲೂ ಕೂಡಾ ಭಾರೀ ಪ್ರಮಾಣದ ಬಿಎಸ್-4 ವಾಹನಗಳ ಸ್ಟಾಕ್ ಇಟ್ಟುಕೊಂಡಿದ್ದ ಹೋಂಡಾ ಕಂಪನಿಯು ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಭಾರತದಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ನಿಯಮವನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಸುಪ್ರೀಂ ಆದೇಶದಂತೆ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೂಡಾ ಬಿಎಸ್-4 ವಾಹನಗಳವನ್ನು ಮುಂದಿನ ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

2020ರ ಏಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ಬ್ಯಾನ್ ನಷ್ಟ ತಡೆಗೆ ಸಹಕರಿಸಿದೆ.ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

ಭಾರೀ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

Most Read Articles

Kannada
English summary
Honda sells 261,699 two-wheelers in March 2020 with 5% growth. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X