2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹೋಂಡಾ ಕಂಪನಿಯು ಭಾರತದಲ್ಲಿ ತನ್ನ 2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಈ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಮ್ಯಾನುವಲ್ ವೆರಿಯೆಂಟ್ ಅನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ವಿತರಣೆ ನಡೆಸಿದ್ದಾರೆ.

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಬೈಕ್ ಅನ್ನು ಈ ವರ್ಷದ ಮೇ ತಿಂಗಳಲ್ಲಿ ವಿತರಣೆಯನ್ನು ಪ್ರಾರಂಭಿಸಬೇಕಾಗಿತ್ತು. ಕರೋನಾ ಸೋಂಕಿನ ಭೀತಿಯಿಂದ ಈ ಬೈಕಿನ ವಿತರಣೆಯು ವಿಳಂಬವಾಗಿದೆ ಎಂದು ನಿರೀಕ್ಷಿಸುತ್ತೇವೆ. ಇದೀಗ 2020ರ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ಮ್ಯಾನುವಲ್ ರೂಪಾಂತರಗಳ ವಿತರಣೆಯನ್ನು ಮಾತ್ರ ಪ್ರಾರಂಭಿಸಲಾಗಿದೆ. 2020ರ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ಮ್ಯಾನುವಲ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.35 ಲಕ್ಷಗಳಾಗಿದೆ.

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹಿಂದಿನ ಮಾದರಿಗಿಂತ 2020ರ ಆಫ್ರಿಕಾ ಟ್ವಿನ್ ಹೆಚ್ಚು ಪವರ್ ಫುಲ್ ಬೈಕ್ ಆಗಿದೆ. ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ 1,084ಸಿಸಿ ಎಂಜಿನ್ 101 ಬಿ‍‍ಹೆಚ್‍‍ಪಿ ಪವರ್ ಮತ್ತು 105 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಪಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯ ಎಂಜಿನ್‍‍ಗಿಂತ 2.5 ಕಿ.ಗ್ರಾಂ ಹೆಚ್ಚು ತೂಕವನ್ನುಹೊಂದಿದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಡಿಸಿ‍ಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹೊಸ 2020ರ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ಮುಂಭಾಗದಲ್ಲಿ ಶೋವಾ 45 ಎಂಎಂ ಕಾರ್ಟ್ರಿಡ್ಜ್ ಮಾದರಿಯ ಇನ್ವರ್ಡಡ್ ಟಿಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಪ್ರೊ-ಲಿಂಕ್‍‍ನೊಂದಿಗೆ ಮೊನೊಬ್ಲಾಕ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಹಿಂಭಾಗದಲ್ಲಿ ಶೋವಾ ಗ್ಯಾಸ್-ಚಾರ್ಜ್ಡ್ ಡ್ಯಾಂಪರ್ ಅನ್ನು ಒಳಗೊಂಡಿದೆ.

MOST READ: ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಫ್ರೆಮ್ ನವೀಕರಿಸಲಾಗಿದೆ. ಆಫ್ರಿಕಾ ಟ್ವಿನ್ ಕಾರ್ನರಿಂಗ್ ಎಬಿ‍ಎಸ್, ರೇರ್ ಲಿಫ್ಟ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್ ಅನ್ನು ಹೊಂದಿದೆ.

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಇದಲ್ಲದೆ ಅಡ್ವೆಂಚರ್ ಸ್ಪೋರ್ಟ್ ಇಎಸ್ ಮಾದರಿಯು ಎಲೆಕ್ಟ್ರಾನಿಕ್ ಸಸ್ಪೆಂಷನ್ ಅನ್ನು ಹೊಂದಿದೆ. ಹೊಸ ಆಫ್ರಿಕಾ ಟ್ವಿನ್ ಪ್ರಮುಖ ಫೀಚರ್ಸ್ ಅಂದರೆ ಹೊಸ 6 ಇಂಚಿನ ಟಿ‍ಎಫ್‍‍ಟಿ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇ ಅನ್ನು ಹೊಂದಿದ್ದು, ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ ಅನ್ನು ಅಳವಡಿಸಲಾಗಿದೆ. ಹೊಸ ಬೈಕ್ ಆರು ಎಕ್ಸಸ್ ಐಎಂಯು ಮತ್ತು ಬ್ಲೂಟತ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಈ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಹೈಡ್ರಾಲಿಕ್ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ 256 ಎಂಎಂ ಹೈಡ್ರಾಲಿಕ್ ಡಿಸ್ಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಆನ್ ರೋಡ್ ಮತ್ತು ಆಫ್-ರೋಡ್ ಗಳಲ್ಲಿ ಎಬಿಎಸ್ ಮೋಡ್ ಅನ್ನು ಸಹ ಹೊಂದಿದೆ.

2020ರ ಆಫ್ರಿಕಾ ಟ್ವಿನ್ ಬೈಕಿನ ವಿತರಣೆ ಆರಂಭಿಸಿದ ಹೋಂಡಾ

ಈ ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ, ಟ್ರಯಂಫ್ ಟೈಗರ್ ಮತ್ತು ಬಿಎಂಡಬ್ಲ್ಯು ಜಿಎಸ್ 1250 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Honda Africa Twin Deliveries Commence. Read In Kannada.
Story first published: Monday, June 29, 2020, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X