ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಇದೇ ತಿಂಗಳಾಂತ್ಯಕ್ಕೆ ಪ್ರೀಮಿಯಂ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಬೈಕಿನ ಬಗೆಗೆ ಯಾವುದೇ ನಿಖರ ಮಾಹಿತಿ ನೀಡದ ಹೋಂಡಾ ಕಂಪನಿಯು ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಕುರಿತಾದ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಯು ಹೋಂಡಾ ಬಿಗ್ ವಿಂಗ್ ಮಾರಾಟ ಮಳಿಗೆಗಳ ಮೂಲಕ ಮಾರಾಟಗೊಳ್ಳಲಿದ್ದು, ಹೊಸ ಬೈಕ್ ಮಾದರಿಯು 350ಸಿಸಿಯಿಂದ 500ಸಿಸಿ ಎಂಜಿನ್ ವೈಶಿಷ್ಟ್ಯತೆ ಹೊಂದಿರಲಿದೆ. ಹೊಸ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳಿಗೆ ಪೈಪೋಟಿಯಾಗಿ ನೀಡಲಿದ್ದು, ಹೊಸ ಬೈಕ್ ಮಾದರಿಯು ಕ್ರೂಸರ್ ವೈಶಿಷ್ಟ್ಯತೆ ಹೊಂದಿರಲಿದೆ.

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ರೆಬೆಲ್ 300 ಮಾದರಿಯನ್ನು ಆಧರಿಸಿ ಹೊಸ ಬೈಕ್ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ದೇಶಿಯ ಮಾರುಕಟ್ಟೆಯ ಬೇಡಿಕೆಯೆಂತೆ ಹೊಸ ಬೈಕ್ ಹಲವಾರು ಗಮನಾರ್ಹವಾದ ನವೀಕರಣಗಳು ಮತ್ತು ಬದಲಾವಣೆಗಳೊಂದಿಗೆ ರಸ್ತೆಗಿಳಿಯಲಿದೆ ಎನ್ನಲಾಗಿದೆ.

ಇದರಿಂದ ಹೊಸ ಬೈಕ್ ಕುರಿತಾದ ಅಧಿಕೃತ ಮಾಹಿತಿಗಳು ಸೆಪ್ಟೆಂಬರ್ 30ರಂದೇ ಲಭ್ಯವಾಗಲಿದ್ದು, ಹೊಸ ಬೈಕ್ ಮಾದರಿಯು ರೂ.2.50 ಲಕ್ಷದಿಂದ ರೂ.3 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ.

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಇನ್ನು ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ಪ್ರೀಮಿಯಂ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ವಿವಿಧ ಮಾದರಿಯ ನಾಲ್ಕು ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತರಲಾದ ಆಮದು ನೀತಿಯ ವಿನಾಯ್ತಿಯು ವಿದೇಶಿ ಆಟೋ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲಕವಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಹೊಸ ನೀತಿ ಅಡಿ ವಿದೇಶಿ ಮಾರುಕಟ್ಟೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ 2,500 ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಹಿನ್ನಲೆ ಜಪಾನ್ ಮೂಲದ ಮೋಟಾರ್ ಸೈಕಲ್ ಕಂಪನಿ ಹೋಂಡಾ ಕೂಡಾ ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿ ಕೆಲವು ಸೂಪರ್ ಬೈಕ್ ಮಾದರಿಗಳನ್ನು ಭಾರತದಲ್ಲೂ ಪರಿಚಯಿಸಲು ಮುಂದಾಗಿದೆ.

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಹೋಂಡಾ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಬಿಆರ್650ಆರ್, ಸಿಬಿಆರ್1000ಆರ್‌ಆರ್, ಸಿಬಿ1000ಆರ್, ಆಫ್ರಿಕನ್ ಟ್ವಿನ್ ಮತ್ತು ಗೋಲ್ಡ್‌ವಿಂಗ್ ಸೂಪರ್ ಬೈಕ್ ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಬೈಕ್‌ಗಳು 300 ಸಿಸಿ ಯಿಂದ 500 ಸಿಸಿ ಮಧ್ಯದ ಎಂಜಿನ್ ಗಾತ್ರವನ್ನು ಹೊಂದಿರಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೋಂಡಾ ಹೊಸ ಬೈಕಿನ ಎಕ್ಸಾಸ್ಟ್ ಸೌಂಡ್ ಟೀಸರ್ ಬಿಡುಗಡೆ

ಮಾಹಿತಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಹೊಸದಾಗಿ ರೆಬೆಲ್ 500, ಸಿಬಿ500ಎಫ್, ಸಿಬಿಆರ್500ಆರ್ ಮತ್ತು ಸಿಬಿ500ಎಕ್ಸ್ ಬೈಕ್‌ಗಳನ್ನು ಹೊಸ ಬದಲಾವಣೆಯೊಂದಿಗೆ ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಮಾರಾಟಗೊಳ್ಳಲಿವೆ.

Most Read Articles

Kannada
English summary
Honda Teased Exhaust Note Of Its New Premium Motorcycle. Read in Kannada.
Story first published: Sunday, September 20, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X