Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್
ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಫೋರ್ಜಾ ಮ್ಯಾಕ್ಸಿ ಸ್ಕೂಟರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರ್ ಅನ್ನು ಅಕ್ಟೋಬರ್ ನಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಕಂಪನಿಯು ತಿಳಿಸಿದೆ.

ಫೋರ್ಜಾ ಹೆಸರಿನಲ್ಲಿ ಕಂಪನಿಯು 125 ಸಿಸಿ ಹಾಗೂ 300 ಸಿಸಿ ಸ್ಕೂಟರ್‌ಗಳನ್ನು ಮಾರಾಟ ಮಾಡಲಿದೆ. ಈ ಎರಡೂ ಸ್ಕೂಟರ್‌ಗಳನ್ನು ವಿಭಿನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಹೊಸ ಫಾರ್ಜಾ ಸ್ಕೂಟರಿನಲ್ಲಿ ದೊಡ್ಡ ಎಂಜಿನ್ ನೀಡುವ ಸಾಧ್ಯತೆಗಳಿವೆ. ಈ ವೀಡಿಯೊ ಟೀಸರ್ ನಲ್ಲಿ ಸ್ಕೂಟರಿನ ಫ್ರಂಟ್ ಕೌಲ್, ಎಂಜಿನ್ ಕೇಸಿಂಗ್ ಹಾಗೂ ಕೆಲವು ವಿನ್ಯಾಸದ ನೋಟವನ್ನು ಕಾಣಬಹುದು.

ಟೀಸರ್ ನಲ್ಲಿ ಹೊಸ ಫೋರ್ಜಾ ಸ್ಕೂಟರ್ ಸಾಕಷ್ಟು ಆಕರ್ಷಕವಾಗಿ ಹಾಗೂ ಸ್ಪೋರ್ಟಿಯಾಗಿ ಕಾಣುತ್ತದೆ. ಈ ಸ್ಕೂಟರಿನಲ್ಲಿ ಪೂರ್ಣ ಪ್ರಮಾಣದ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಟೇಲ್‌ಲೈಟ್ ಹಾಗೂ ಎಲ್‌ಇಡಿ ಡಿಆರ್‌ಎಲ್ ಲೈಟ್ ಗಳಿರುವ ಸಾಧ್ಯತೆಗಳಿವೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೋಂಡಾ ಫೋರ್ಜಾ 350 ಸಿಸಿ ಸ್ಕೂಟರ್ ಅನ್ನು ಜುಲೈ ತಿಂಗಳಿನಲ್ಲಿ ಥೈಲ್ಯಾಂಡ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಥೈಲ್ಯಾಂಡ್‌ನಲ್ಲಿ ಫೋರ್ಜಾ 350 ಸಿಸಿ ಸ್ಕೂಟರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.16 ಲಕ್ಷಗಳಾಗಿದೆ. ಫೋರ್ಜಾ 350 ಸ್ಕೂಟರ್ ಉದ್ದವಾದ ವ್ಹೀಲ್ ಬೇಸ್ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

ಹೋಂಡಾ ಫೋರ್ಜಾ 350 ಸಿಸಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗುವುದು. ಈ ಸ್ಕೂಟರ್ ಹಿಂದಿನ ಎರಡು ಫೋರ್ಜಾ ಸ್ಕೂಟರ್‌ಗಳಿಗಿಂತ ಹೆಚ್ಚಿನ ಪವರ್ ಹಾಗೂ ಪರ್ಫಾಮೆನ್ಸ್ ಹೊಂದಿದೆ. ದೊಡ್ಡ ಎಂಜಿನ್ ಹೊಂದಿರುವ ಕಾರಣಕ್ಕೆ ಈ ಸ್ಕೂಟರಿನ ಮೈಲೇಜ್ ಕಡಿಮೆಯಾಗಲಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫೋರ್ಜಾ 350 ಸ್ಕೂಟರ್ ಉದ್ದವಾದ ಸೀಟನ್ನು ಹೊಂದಿದೆ. ಸೀಟಿನ ಕೆಳಗೆ ದೊಡ್ಡ ಸ್ಟೋರೇಜ್ ನೀಡಲಾಗಿದೆ. ಈ ಸ್ಟೋರೇಜ್ ನಲ್ಲಿ ಎರಡು ಹೆಲ್ಮೆಟ್‌ಗಳನ್ನಿಡಬಹುದು. ಫೋರ್ಜಾ 350 ಸ್ಕೂಟರ್, 329 ಸಿಸಿಯ ಸಿಂಗಲ್ ಸಿಲಿಂಡರ್, ನಾಲ್ಕು-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್‌ನ ಟಾರ್ಕ್ ಹಾಗೂ ಪವರ್ ಅಂಕಿಅಂಶಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಈ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೋಂಡಾ ಕಂಪನಿಯು ಶೀಘ್ರದಲ್ಲೇ ಎಂಜಿನ್ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸುವ ನಿರೀಕ್ಷೆಗಳಿವೆ. ಈ ಮ್ಯಾಕ್ಸಿ ಸ್ಕೂಟರ್ ಅನ್ನು ಸದ್ಯಕ್ಕೆ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪ್ರಸಕ್ತ ಹಣಕಾಸು ವರ್ಷದ ಮೊದಲ 4 ತಿಂಗಳಲ್ಲಿ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು 11 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹೋಂಡಾ ಕಂಪನಿಯ ಆಕ್ಟಿವಾ 6 ಜಿ ಸ್ಕೂಟರ್ ಹಾಗೂ ಶೈನ್ 125 ಬೈಕ್‌ಗಳ ಮಾರಾಟವು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.