ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಕೋವಿಡ್ -19 ಕಾರಣಕ್ಕೆ ಜಾರಿಗೊಳಿಸಿದ ಲಾಕ್‌ಡೌನ್‌ನಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರಕಟಿಸಿದೆ.

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹಂತ ಹಂತವಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಹೋಂಡಾ ಕಂಪನಿಯು ತಿಳಿಸಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದೆಂದು ಕಂಪನಿಯು ತಿಳಿಸಿದೆ.

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಕಂಪನಿಯ ಮಾರಾಟಗಾರರು ರೆಡ್ ಝೋನ್, ಆರೆಂಜ್ ಝೋನ್ ಹಾಗೂ ಗ್ರೀನ್ ಝೋನ್‌ಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಾರೆ ಎಂದು ಹೋಂಡಾ ಹೇಳಿದೆ. 2020ರ ಮೇ 1ರಂದು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಹೊಸ ಅಧ್ಯಕ್ಷ, ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅಟ್ಸುಶಿ ಒಗಾಟಾ ಅಧಿಕಾರ ವಹಿಸಿಕೊಂಡಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಕರೋನಾ ವೈರಸ್‌ನಿಂದ ಉಂಟಾಗಿರುವ ನಷ್ಟವನ್ನು ಸರಿಪಡಿಸುವುದು ಹೊಸ ಅಧ್ಯಕ್ಷರ ಮೊದಲ ಆದ್ಯತೆಯಾಗಿದೆ. ಈ ಸಂಕಷ್ಟದ ಸಮಯದಲ್ಲಿ ಹೋಂಡಾ ಕಂಪನಿಯು ತನ್ನ ಡೀಲರ್‌ಗಳ, ಪಾಲುದಾರರ ಹಾಗೂ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ.

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಈ ಬಗ್ಗೆ ಮಾತನಾಡಿರುವ ಹೋಂಡಾ ಕಂಪನಿಯ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕರಾದ ಯದ್‌ವಿಂದರ್‌ಸಿಂಗ್ ಗುಲೇರಿಯಾರವರು, ಈ ಸಂಕಷ್ಟದ ಸಂದರ್ಭದಲ್ಲಿ ಹೋಂಡಾ ದ್ವಿಚಕ್ರ ವಾಹನ ಕಂಪನಿಯು ಭಾರತದಲ್ಲಿರುವ ತನ್ನ ಡೀಲರ್‌ಗಳಿಗೆ ಹಣಕಾಸಿನ ಪ್ಯಾಕೇಜ್ ನೀಡಲಿದೆ ಎಂದು ತಿಳಿಸಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೆಚ್ಚುವರಿ 19 ದಿನಗಳ ಬಡ್ಡಿಯನ್ನು ಪಾವತಿಸಿ ಬಿಎಸ್ 6 ದ್ವಿಚಕ್ರ ವಾಹನ ಷೇರುಗಳ ಮೇಲಿನ ಒಟ್ಟು 40 ದಿನಗಳ ಬಡ್ಡಿ ವೆಚ್ಚವನ್ನು ಭರಿಸಲು ನಾವು ನಿರ್ಧರಿಸಿದ್ದೇವೆ. ಈ ಪ್ಯಾಕೇಜ್ ನಮ್ಮ ಡೀಲರ್‌ಗಳ ವ್ಯವಹಾರ ಮುಂದುವರಿಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರವು ನೀಡಿರುವ ವಿನಾಯಿತಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡುವುದಾಗಿ ಕಂಪನಿ ತಿಳಿಸಿದೆ. ಗ್ರೀನ್ ಝೋನ್ ಹಾಗೂ ಆರೆಂಜ್ ಝೋನ್‌ಗಳಲ್ಲಿ ಕಂಪನಿಯು ಎಚ್ಚರಿಕೆಯಿಂದ ತನ್ನ ವ್ಯವಹಾರವನ್ನು ಆರಂಭಿಸುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಕಂಪನಿಯು ದೇಶಾದ್ಯಂತವಿರುವ ತನ್ನ ಔಟ್‌ಲೆಟ್‌ಗಳಲ್ಲಿ ಗ್ರಾಹಕರಿಗೆ ಸುರಕ್ಷತೆ ನೀಡಲು ಮುಂದಾಗಿದೆ. ಈ ಕಾರಣಕ್ಕೆ ಹೋಂಡಾ ಕಂಪನಿಯ ಸಿಎಸ್ಆರ್ ವಿಂಗ್ ಆದ ಹೋಂಡಾ ಇಂಡಿಯಾ ಫೌಂಡೇಶನ್, ಹೋಂಡಾ ಎಂಜಿನ್ ಹೊಂದಿರುವ 800 ಹೈ ಪ್ರೆಶರ್ ಬ್ಯಾಕ್‌ಪ್ಯಾಕ್ ಸ್ಪ್ರೇಯರ್ ಕಿಟ್‌ಗಳನ್ನು ಕರ್ನಾಟಕ, ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್‌ಗಳಲ್ಲಿ ವಿತರಿಸಿದೆ.

ಲಾಕ್‌ಡೌನ್ ವಿನಾಯಿತಿ: ಕಾರ್ಯಾಚರಣೆ ಪುನರಾರಂಭಕ್ಕೆ ಮುಂದಾದ ಹೋಂಡಾ ಮೋಟಾರ್‌ಸೈಕಲ್

ಬ್ಯಾಕ್‌ಪ್ಯಾಕ್ ಸ್ಪ್ರೇಯರ್‌ಗಳ ಹೊರತಾಗಿ ಹೋಂಡಾ ಇಂಡಿಯಾ ಫೌಂಡೇಶನ್ ಗುಜರಾತ್ ಹಾಗೂ ಹರಿಯಾಣದಲ್ಲಿರುವ ಕಾರ್ಮಿಕರು ಹಾಗೂ ಹಿಂದುಳಿದ ಕುಟುಂಬಗಳಿಗೆ ಪ್ರತಿದಿನ 1,000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

Most Read Articles

Kannada
English summary
Honda two wheeler dealerships to restart operations in India amidst lockdown relaxations. Read in Kannada.
Story first published: Thursday, May 7, 2020, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X