ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಕರೋನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಹ ಇದೀಗ ಆನ್‌ಲೈನ್ ಬೈಕ್ ಮಾರಾಟ ಪ್ರಕ್ರಿಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಮಹತ್ವದ ಕ್ರಮಗಳನ್ನ ಪ್ರಕಟಿಸಿದೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಕರೋನಾ ವೈರಸ್ ಹೆಚ್ಚಳದಿಂದಾಗಿ ರೆಡ್ ಝೋನ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ವಾಹನ ಮಾರಾಟವು ಮತ್ತೆ ಕುಸಿತ ಕಾಣುವ ಸಾಧ್ಯತೆಗಳಿದ್ದು, ಸಂಕಷ್ಟ ಪರಿಸ್ಥಿತಿಯಲ್ಲೂ ಹೊಸ ಕ್ರಮಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಳ್ಳುವುದು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬೈಕ್ ಮಾರಾಟ ಮಳಿಗೆಗಳಿಗೆ ಗ್ರಾಹಕರ ಭೇಟಿಯನ್ನು ತಡೆಯುತ್ತಿರುವ ಹೋಂಡಾ ಕಂಪನಿಯು ಸಾಧ್ಯವಾದಷ್ಟು ಆನ್‌ಲೈನ್ ಮೂಲಕವೇ ವ್ಯವಹಾರ ಕೈಗೊಳ್ಳುವಂತೆ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದು, ಆನ್‌ಲೈನ್ ವಾಹನ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿದೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಹೋಂಡಾ ಕಂಪನಿಯು ಈಗಾಗಲೇ ಕಾರು ಮಾರಾಟದಲ್ಲಿ ಮಹತ್ವ ಬದಲಾವಣೆ ಪರಿಚಯಿಸುವ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಇದೀಗ ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಹೊಸ ಬದಲಾವಣೆಗಾಗಿ ಆನ್‌ಲೈನ್ ವಾಹನ ಮಾರಾಟವನ್ನು ಉತ್ತೇಜಿಸುತ್ತಿದೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಇನ್ನು ಕರೋನಾ ವೈರಸ್ ಪರಿಣಾಮ ಕುಸಿದಿರುವ ವಾಹನ ಮಾರಾಟ ಪ್ರಮಾಣವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿರುವುದಲ್ಲದೆ ಸುಲಭ ಸಾಲಸೌಲಭ್ಯಗಳನ್ನು ಒದಗಿಸುತ್ತಿವೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಲಾಕ್‌ಡೌನ್ ನಂತರವು ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಹೋಂಡಾ ಸೇರಿದಂತೆ ಹಲವಾರು ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್‌ಗಳನ್ನು ಸೇರಿದಂತೆ ಸುಲಭ ಸಾಲ ಸೌಲಭ್ಯಗಳನ್ನು ನೀಡುತ್ತಿವೆ. ಹೋಂಡಾ ಕಂಪನಿಯು ಹೊಸದಾಗಿ ಘೋಷಣೆ ಮಾಡಿರುವ ಹೊಸ ಸಾಲ ಸೌಲಭ್ಯವು ಲಾಕ್‌ಡೌನ್ ಸಂಕಷ್ಟದಿಂದಾಗಿ ವಾಹನ ಖರೀದಿ ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಮಾಹಿತಿ ಪ್ರಕಾರ, ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸೀಮಿತ ಅವಧಿಯೊಳಗೆ ಸ್ಕೂಟರ್ ಮತ್ತು ಬೈಕ್ ಖರೀದಿಸುವ ಗ್ರಾಹಕರಿಗೆ ಶೇ.95ರಷ್ಟು ಆನ್‌ರೋಡ್ ಸಾಲ ಸೌಲಭ್ಯವನ್ನು ಅತಿ ಸರಳವಾದ ಇಎಂಐನೊಂದಗೆ ಆಫರ್ ಮಾಡುತ್ತಿದೆ.

MOST READ: ಫ್ರಂಟ್ ಲೈನ್ ವಾರಿಯರ್ಸ್‌ಗೆ ಸ್ಪೆಷಲ್ ಆಫರ್ ನೀಡಿದ ಯಮಹಾ ಇಂಡಿಯಾ

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸುವ ಗ್ರಾಹಕರು ಹೊಸ ವಾಹನ ಖರೀದಿ ಮಾಡಿದ ಮೊದಲ 3 ತಿಂಗಳು ಶೇ.50ರಷ್ಟು ಐಎಂಐ ಮಾತ್ರ ಪಾವತಿಸಲು ಅವಕಾಶ ನೀಡಲಾಗಿದ್ದು, ಮೂರು ತಿಂಗಳ ನಂತರ ಸಾಮಾನ್ಯ ದರದಲ್ಲೇ ಇಎಂಐ ಪಾವತಿಸುವ ಸೌಲಭ್ಯ ಇದಾಗಿದೆ.

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಹೊಸ ಸಾಲ ಸೌಲಭ್ಯದಲ್ಲಿ ಶೇ.95ರಷ್ಟು ಆನ್ ರೋಡ್ ಬೆಲೆಯ ಮೇಲೆ ಸಾಲ ದೊರಲಿದ್ದು, ಇಎಂಐ ಹೊರೆ ತಗ್ಗಿಸಲು ಇದು ಸಹಕಾರಿಯಾಗಿದೆ. ಹೊಸ ಲೋನ್ ಆಫರ್ ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರ ಅಧಿಕೃತ ಬೈಕ್ ಮಾರಾಟಗಾರರನ್ನು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸಂಪರ್ಕಿಸಬಹುದಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಕರೋನಾ ವೈರಸ್ ಹೆಚ್ಚಳ- ಆನ್‌ಲೈನ್ ವಾಹನ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಹೋಂಡಾ

ಇದಲ್ಲದೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ಇಳಿಕೆಯಾಗಿರುವ ವಾಹನ ಮಾರಾಟ ಪ್ರಮಾಣವನ್ನು ಸುಧಾರಣೆಗೊಳಿಸಲು ಪ್ರಮುಖ ದ್ವಿಚಕ್ರ ವಾಹನ ಮಾದರಿಗಳ ಖರೀದಿ ಮೇಲೆ ಹೆಚ್ಚುವರಿ ವಾರಂಟಿ ಅವಧಿಯ ಆಫರ್ ನೀಡುತ್ತಿದೆ.

Most Read Articles

Kannada
English summary
Honda Two-Wheeler Launches Online Booking Platform For Its Customers. Read in Kannada.
Story first published: Thursday, July 9, 2020, 20:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X