ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ಗ್ರೊಮ್ ಮಿನಿ ಬೈಕ್ ಅನ್ನು ಅನಾವರಣಗೊಳಿಸಿದೆ. ಹೋಂಡಾ ಎಂಎಸ್‌ಎಕ್ಸ್‌125 ಎಂದೂ ಕರೆಯಲ್ಪಡುವ ಮಿನಿ ಬೈಕನ್ನು ಹಲವಾರು ಬದಲಾವಣೆಗಳನ್ನು ಮಾಡಿ ಗ್ರೊಮ್ ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿದೆ.

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಗ್ರೊಮ್ ಮಿನಿ ಬೈಕ್ ಚೆರ್ರಿ ರೆಡ್, ಬ್ಲೂ ರಾಸ್ಪ್ಬೆರಿ, ಹ್ಯಾಲೋವೀನ್ ಆರೆಂಜ್ ಮತ್ತು ಇನ್ಕ್ರೆಡಿಬಲ್ ಗ್ರೀನ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಚೆರಿ ರೆಡ್ ಬಣ್ಣವು ಎಬಿಎಸ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಹೋಂಡಾ ಕಂಪನಿಯ ಮಿನಿ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಕಂಪನಿಯು ಮಿನಿಬೈಕ್ ವಿಭಾಗದಲ್ಲಿ ಮಿನಿಮೊಟೊ ಎಂಬ ಬೈಕುಗಳನ್ನು ಹೊಂದಿದೆ. ಮಿನಿಮೊಟೊ ಸರಣಿಯಲ್ಲಿರುವ ಮಂಕಿ ಎಂಬ ಬೈಕಿನ ಬೆಲೆಯು ರೂ. 3.02 ಲಕ್ಷಗಳಾಗಿದೆ. ಹೋಂಡಾ ಮಂಕಿ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಗ್ರೊಮ್ ಮಿನಿ ಬೈಕಿನಲ್ಲಿ 124.9 ಸಿಸಿ ಏರ್-ಕೂಲ್ಡ್ ಎಫ್‌ಐ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9.57 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೋಂಡಾ ಗ್ರೋಮ್ ಮಿನಿ ಬೈಕ್ 103 ಕೆಜೆ ತೂಕವಿದೆ. ಈ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಜಪಾನಿನ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ಮಿನಿ ಬೈಕನ್ನು ಸಂಪೂರ್ಣವಾಗಿ ನವೀಕರಿಸಿದೆ. ಇದು ಆಧುನಿಕ ರೆಟ್ರೊ ಸ್ಟೈಲಿಂಗ್ ಅನ್ನು ಸ್ವಲ್ಪಮಟ್ಟಿಗೆ ಹೊಂದಿದೆ. ಫ್ಯೂಯಲ್ ಟ್ಯಾಂಕ್ ಕೂಡ ಹೊಸದು ಮತ್ತು ಈಗ ಮೊದಲಿಗಿಂತ ಸ್ವಲ್ಪ ಹೆಚ್ಚು ಇಂಧನವನ್ನು ಹಿಡಿದಿಟ್ಟುಕೊಳ್ಳುತ್ತದೆ. ಹೆಡ್ ಲೈಟ್ ಯುನಿಟ್ ದೊಡ್ಡದಾಗಿದೆ.

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಗ್ರೊಮ್ ಮಿನಿ ಬೈಕಿನ ಸೀಟ್ 762 ಎಂಎಂ ಎತ್ತರವನ್ನು ಹೊಂದಿದೆ. ಈ ಮಿನಿಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 220 ಎಂಎಂ ಮತ್ತು 190 ಎಂಎಂ ಡಿಸ್ಕ್ ಬ್ರೇಕ್‌‍ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಈ ಮಿನಿಬೈಕ್ 12 ಇಂಚಿನ ಟಯರ್ 31 ಎಂಎಂ ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊಶಾಕ್ ಅನ್ನು ಹೊಂದಿದೆ, ಈ ಮಿನಿಬೈಕ್ ಪ್ರತಿಲೀಟರ್ ಗೆ ಶೇ.50 ರಷ್ಟು ಮೈಲೇಜ್ ನೀಡುತ್ತದೆ. ಹೋಂಡಾ ಗ್ರೊಮ್ ಮಿನಿಬೈಕ್ 125 5.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಹೊಸ ಗ್ರೊಮ್ ಮಿನಿ ಬೈಕನ್ನು ಅನಾವರಣಗೊಳಿಸಿದ ಹೋಂಡಾ

ಹೋಂಡಾ ಗ್ರೊಮ್ ಬೈಕಿನಲ್ಲಿ ಪೂರ್ಣ-ಎಲ್ಇಡಿ ಲೈಟಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಬಿಎಸ್ ಅನ್ನು ಅಳವಡಿಸಿದ್ದಾರೆ. ಈ ಮಿನಿಬೈಕ್ ರೈಡ್ ಮಾಡವುದು ಹೆಚ್ಚಿನ ಫನ್ ಅನ್ನು ನೀಡುತ್ತದೆ. ಈ ಹೋಂಡಾ ಕಂಪನಿಯು ಗ್ರೊಮ್ ಮಿನಿ ಬೈಕನ್ನು ಸ್ಥಗಿತಗೊಳುಸಲಾಗಿದೆ. ಆದರೆ ಭವಿಷ್ಯದಲ್ಲಿ ಹೊಸ ತಲೆಮಾರಿನ ಗ್ರೋಮ್ ಬೈಕನ್ನು ಬಿಡುಗಡೆಗೊಳಿಸಬಹುದು.

Most Read Articles

Kannada
English summary
Honda Unveils The New Grom For 2021. Read In Kannada.
Story first published: Thursday, October 22, 2020, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X