Just In
Don't Miss!
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Sports
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನೀಡಿದ ಪ್ರದರ್ಶನ ಅಸಾಮಾನ್ಯ: ಮೈಕಲ್ ವಾನ್
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್ವರ್ನಾ ಬೈಕುಗಳೆಷ್ಟು ಗೊತ್ತಾ?
ಹಸ್ಕ್ವರ್ನಾ ಕಂಪನಿಯು ಫೆಬ್ರವರಿ 25ರಂದು ದೇಶೀಯ ಮಾರುಕಟ್ಟೆಯಲ್ಲಿ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್ಪಿಲೆನ್ 250 ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಫೆಬ್ರವರಿ ತಿಂಗಳಿನಲ್ಲಿ ಹಸ್ಕ್ವರ್ನಾದ ಎಷ್ಟು ಬೈಕ್ ಗಳನ್ನು ಮಾರಾಟ ಮಾಡಲಾಗಿತ್ತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್ ವಾಲೆ ವರದಿಗಳ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ಹಸ್ಕ್ವರ್ನಾದ 163 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಹಸ್ಕ್ವರ್ನಾ ಕಂಪನಿಯು ಬೈಕ್ ಗಳ ಬಿಡುಗಡೆಗೂ ಒಂದು ತಿಂಗಳ ಮುನ್ನವೇ ಈ ಬೈಕ್ ಗಳ ಪ್ರಿ ಬುಕ್ಕಿಂಗ್ ಗಳನ್ನು ಆರಂಭಿಸಿತ್ತು. ಇದರಿಂದಾಗಿ ಫೆಬ್ರವರಿಯಲ್ಲಿ 163 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ಹಾಗೂ ವಿಟ್ಪಿಲೆನ್ 250 ಬೈಕ್ ಗಳ ಬೆಳೆಯು ಎಕ್ಸ್ ಶೋ ರೂಂ ದರದಂತೆ ರೂ.1.80 ಲಕ್ಷಗಳಾಗಿದೆ. ಹಸ್ಕ್ವರ್ನಾ ಕಂಪನಿಯು ಈ ಬೈಕ್ ಗಳನ್ನು ಭಾರತದಲ್ಲಿ ಕೆಟಿಎಂ ಶೋರೂಂಗಳ ಮೂಲಕ ಮಾರಾಟ ಮಾಡುತ್ತದೆ.

ಇದರಿಂದಾಗಿ ಈ ಬೈಕ್ ಗಳ ಮಾರಾಟ ಪ್ರಮಾಣವು ಇನ್ನೂ ಹೆಚ್ಚಾಗಬಹುದು. ಕರೋನಾ ವೈರಸ್ ನಿಂದಾಗಿ ಈ ಬೈಕ್ ಗಳ ಮಾರಾಟವು ಸ್ತಗಿತಗೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಈ ಬೈಕುಗಳ ಮಾರಾಟ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ.

ಹೊಸದಾಗಿ ಬಿಡುಗಡೆಯಾಗಿದ್ದರೂ ಈ ಬೈಕುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಸ್ಕ್ವರ್ನಾ ವಿಟ್ಪಿಲೆನ್ 250 ಹಾಗೂ ಸ್ವಾರ್ಟ್ಪಿಲೆನ್ 250 ಬೈಕುಗಳಲ್ಲಿ 248.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 27 ಬಿಹೆಚ್ಪಿ ಪವರ್ ಹಾಗೂ 24 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಗಳಲ್ಲಿ 6-ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ವಿಟ್ಪಿಲೆನ್ 250 ಹಾಗೂ ಸ್ವಾರ್ಟ್ಪಿಲೆನ್ 250 ಬೈಕುಗಳ ವಿನ್ಯಾಸವು 401 ಬೈಕಿನ ವಿನ್ಯಾಸವನ್ನು ಹೋಲುತ್ತದೆ.

ಈ ಬೈಕುಗಳಲ್ಲಿರುವ ಬಹುತೇಕ ಬಿಡಿಭಾಗಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನಿಂದ ಪಡೆಯಲಾಗಿದೆ. ದೇಶಿಯ ಮಾರುಕಟ್ಟೆಯ 250 ಸಿಸಿ ಬೈಕ್ ಸೆಗ್ ಮೆಂಟ್ ನಲ್ಲಿ ಹಸ್ಕ್ವರ್ನಾ ಕಂಪನಿಯು ಪ್ರಾಬಲ್ಯವನ್ನು ಹೊಂದಲು ಮುಂದಾಗಿದೆ. ಇದರಲ್ಲಿ ಯಶಸ್ವಿಯಾಗುವುದೇ ಇಲ್ಲವೇ ಎಂಬುದನ್ನು ಮುಂಬರುವ ತಿಂಗಳುಗಳಲ್ಲಿ ಕಾದು ನೋಡಬೇಕಿದೆ.