ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಸ್ವೀಡನ್ ಮೂಲದ ಹಸ್ಕ್​ವರ್ನಾ ಕೆಟಿ‍ಎಂ ಕಂಪನಿಯ ಭಾಗವಾಗಿದೆ. ಕೆಟಿ‍ಎಂ ಭಾರತದಲ್ಲಿ ಬಜಾಜ್ ಆಟೋದೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈಗ ಕೆಟಿಎಂ ಭಾರತದಲ್ಲಿ ಹಸ್ಕ್​ವರ್ನಾ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಹಸ್ಕ್​ವರ್ನಾ ಕಂಪನಿಯ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಗೋವಾದಲ್ಲಿ ನಡೆದ ಇಂಡಿಯಾ ಬೈಕ್ ವೀಕ್‍‍ನಲ್ಲಿ ಪ್ರದರ್ಶಿಸಲಾಗಿತ್ತು. ಪ್ರದರ್ಶನಗೊಂಡ ನಂತರ ಈ ಎರಡೂ ಬೈಕ್‍‍ಗಳು ಸಾಕಷ್ಟು ಜನಪ್ರಿಯವಾಗಿವೆ. ಬಜಾಜ್ ಆಟೋ ಈ ಎರಡು ಬೈಕ್‍‍ಗಳ ಬಿಡುಗಡೆಯ ಬಗ್ಗೆ ಘೋಷಿಸಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಈ ಎರಡೂ ಬೈಕ್‍‍ಗಳನ್ನು ಭಾರತದ 45 ನಗರಗಳಲ್ಲಿರುವ 100ಕ್ಕೂ ಹೆಚ್ಚು ಕೆಟಿ‍ಎಂ ಬೈಕ್ ಶೋರೂಂಗಳ ಮೂಲಕ ಮಾರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ 275 ನಗರಗಳ 400ಕ್ಕೂ ಹೆಚ್ಚು ಕೆಟಿ‍ಎಂ ಶೋರೂಂಗಳ ಮೂಲಕ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಹಸ್ಕ್​ವರ್ನಾದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಇದರ ಜೊತೆಗೆ ಎರಡು ಬೈಕ್‍‍ಗಳು ಕೆಟಿಎಂ ಬೈಕ್‍‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍‍ಗಳನ್ನು ಹೊಂದಿವೆ. ಸ್ವಾರ್ಟ್‍‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍‍ನಂತಿದ್ದರೆ, ವಿಟ್‍‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍‍ಪಿಲೆನ್ 250 ಬೈಕ್, ಹ್ಯಾಂಡಲ್‍‍ಬಾರ್ ಮೇಲೆ ಕ್ಲಿಪ್ ಹಾಗೂ ಮುಂಭಾಗಕ್ಕೆ ಬಾಗಿರುವ ಸೀಟಿಂಗ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್‍‍ಗಳಲ್ಲಿ ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಈ ಎಂಜಿನ್ 29.5 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‍‍ಗಳಲ್ಲಿ ಕೆಟಿಎಂ ಬೈಕ್‍‍ಗಳಲ್ಲಿರುವಂತಹ ಟ್ರೆಲ್ಲಿಸ್ ಫ್ರೇಂ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಬೈಕಿನ ಲುಕ್ ಹೆಚ್ಚುವುದರ ಜೊತೆಗೆ ಹ್ಯಾಂಡ್ಲಿಂಗ್ ಸಹ ಸುಧಾರಿಸಲಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಸಸ್ಪೆಂಷನ್‍‍ಗಳಿಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯುಪಿ ಅಪೆಕ್ಸ್ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ ಶಾಕ್ ಅಬ್ಸರ್ವರ್‍‍ಗಳನ್ನು ನೀಡಲಾಗಿದೆ. ಈ ಬೈಕ್‍‍ಗಳಲ್ಲಿ 17 ಇಂಚಿನ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಮುಂಭಾಗದಲ್ಲಿ 320 ಎಂಎಂನ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂನ ಡಿಸ್ಕ್ ಬ್ರೇಕ್‍‍ಗಳಿವೆ. ಬಾಷ್ ಕಂಪನಿಯ ಡ್ಯುಯಲ್ ಚಾನೆಲ್ ಎಬಿ‍ಎಸ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಈ ಬೈಕ್‍‍ಗಳಲ್ಲಿ ಅಳವಡಿಸಲಾಗಿದೆ. ಈ ಬೈಕ್‍‍ಗಳು 9.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿವೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಸೀಟುಗಳು ಫ್ಲೋರ್‍‍‍ನಿಂದ 835 ಎಂಎಂ ಎತ್ತರದಲ್ಲಿವೆ. 145 ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.80 ಲಕ್ಷಗಳಾಗಿದೆ. ಎಲ್ಲಾ ತೆರಿಗೆಗಳನ್ನು ಪಾವತಿಸಿದ ನಂತರ ಈ ಬೈಕ್‍‍ಗಳ ಆನ್‍‍ರೋಡ್ ಬೆಲೆಯು ರೂ.2.30 ಲಕ್ಷದಿಂದ ರೂ.2.50 ಲಕ್ಷಗಳಾಗುವ ಸಾಧ್ಯತೆಗಳಿವೆ.

ಆರಂಭವಾಯ್ತು ಹಸ್ಕ್​ವರ್ನಾ ಬೈಕ್‍‍ಗಳ ಬುಕ್ಕಿಂಗ್

ಇವು ಆರಂಭಿಕ ಬೆಲೆಗಳಾಗಿದ್ದು, ನಂತರದ ದಿನಗಳಲ್ಲಿ ಈ ಬೈಕ್‍‍ಗಳ ಬೆಲೆಗಳು ಹೆಚ್ಚುವ ಸಾಧ್ಯತೆಗಳಿವೆ. ಈ ಬೈಕ್‍‍ಗಳನ್ನು ಮಾರ್ಚ್ ತಿಂಗಳಿನಿಂದ ಮಾರಾಟ ಮಾಡಲಾಗುವುದು. ಹೊಸ ಹಸ್ಕ್​ವರ್ನಾ 250 ಬೈಕ್‍‍ಗಳನ್ನು ಪ್ರೀಮಿಯಂ ಸೆಗ್‍‍ಮೆಂಟ್‍‍ನಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್‍‍ಗಳು ಕೆಟಿಎಂ 250 ಬೈಕ್‍‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
English summary
Bookings started for Husqvarna bikes. Read in Kannada.
Story first published: Tuesday, February 25, 2020, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X