ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿರಲಿವೆ. ಎಲೆಕ್ಟ್ರಿಕ್ ವಾಹನಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು ಜನಪ್ರಿಯ ಕಂಪನಿಗಳವರೆಗೆ ಎಲ್ಲಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಇದರಲ್ಲಿ ಇಟಲಿ ಮೂಲದ ಲ್ಯಾಂಬ್ರೆಟಾ ಕಂಪನಿಯು ಹಿಂದೆ ಬಿದ್ದಿಲ್ಲ. ಲ್ಯಾಂಬ್ರೆಟಾ ಕಂಪನಿಯನ್ನು 73 ವರ್ಷಗಳ ಹಿಂದೆ 1947ರಲ್ಲಿ ಆರಂಭಿಸಲಾಗಿತ್ತು. ಈ ಕಂಪನಿಯ ಕೇಂದ್ರ ಕಚೇರಿಯು ಇಟಲಿಯ ಮಿಲಾನ್‍‍ನಲ್ಲಿದೆ. ಲ್ಯಾಂಬ್ರೆಟಾ ಕಂಪನಿಯು ಭಾರತದಲ್ಲಿಯೂ ತನ್ನ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿತ್ತು.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಲ್ಯಾಂಬ್ರೆಟಾ ಕಂಪನಿಯು ಈಗ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಮುಂದಾಗಿದೆ. ತನ್ನ ಹೊಸ ಲ್ಯಾಂಬ್ರೆಟಾ ಜಿ325 ಸ್ಪೆಷಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಸ್ಕೂಟರ್ ಅನ್ನು ಮೊದಲ ಬಾರಿಗೆ 2019ರ ಮಿಲಾನ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಆದರೆ ಅನಾವರಣಗೊಳಿಸಲಾದ ಸ್ಕೂಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿತ್ತು. ಭಾರತದಲ್ಲಿ ಈ ಸ್ಕೂಟರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುವುದು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲ್ಯಾಂಬ್ರೆಟಾ ಕಂಪನಿಯು ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

2020ರ ಆಟೋ ಎಕ್ಸ್ ಪೋ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಯುವಜನತೆಯನ್ನು ಸೆಳೆಯುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರಿನ ಮುಂಭಾಗದಲ್ಲಿರುವ ಎಲ್‍ಇ‍‍ಡಿ ಲೈಟಿಂಗ್, ಫ್ರಂಟ್ ಫೆಂಡರ್ ಹಾಗೂ ಹ್ಯಾಂಡಲ್‍‍ಗಳು ಆಕರ್ಷಕವಾಗಿದ್ದು, ನೋಡುಗರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಈ ಸ್ಕೂಟರಿನ ಬಾಡಿಯನ್ನು ಸ್ಟೀಲ್‍‍ನಿಂದ ತಯಾರಿಸಲಾಗಿದೆ. ಈ ಸ್ಕೂಟರಿನಲ್ಲಿರುವ ಸೈಡ್ ಪ್ಯಾನೆಲ್‍‍ಗಳನ್ನು ಸುಲಭವಾಗಿ ಬದಲಿಸಬಹುದಾಗಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹಾಗೂ ಗ್ಲಿಟರ್ ಲ್ಯಾಂಪ್ ಅನ್ನು ಲ್ಯಾಂಬ್ರೆಟಾ ಲೊಗೊದಂತೆ ಹೊಂದಿದೆ. ಲ್ಯಾಂಬ್ರೆಟಾ ಕಂಪನಿಯು ಈ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದೆಂಬ ಭರವಸೆಯನ್ನು ಹೊಂದಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ರೆಟ್ರೋ ವಿನ್ಯಾಸದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಭಾರತೀಯರು ಹೆಚ್ಚು ಇಷ್ಟಪಡುವುದು ಇದಕ್ಕೆ ಮುಖ್ಯ ಕಾರಣ. ಭಾರತದಲ್ಲಿ ಮಾರಾಟವಾಗುವ ಈ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಪ್ರೀಮಿಯಂ ಅಂಶಗಳನ್ನು ಹೊಂದಿರಲಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಮುಂದಿನ ತಿಂಗಳು ಈ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದ್ದು, ಭಾರತದ ರಸ್ತೆಗಳಲ್ಲಿ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇಟಲಿ ಮೂಲದ ಲ್ಯಾಂಬ್ರೆಟಾ ಕಂಪನಿಯು ಈಗಾಗಲೇ ಮುಂಬೈನಲ್ಲಿ ತನ್ನ ಘಟಕವನ್ನು ಆರಂಭಿಸಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಈ ಘಟಕದಲ್ಲಿಯೇ ಜಿ 325 ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿ ಉತ್ಪಾದಿಸಲಾಗುವ ಸ್ಕೂಟರ್‍‍ಗಳನ್ನು ಭಾರತದಲ್ಲಿ ಮಾತ್ರವೇ ಬಳಸುವುದಿಲ್ಲ. ಬದಲಿಗೆ ಏಷ್ಯಾ ಹಾಗೂ ಆಫ್ರಿಕಾದಲ್ಲಿರುವ ದೇಶಗಳಿಗೂ ಸಹ ರಫ್ತು ಮಾಡಲಾಗುವುದು.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನ ಬೆಲೆ, ಬ್ಯಾಟರಿ ಹಾಗೂ ಚಲಿಸುವ ದೂರದ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಕೂಟರಿನ ಬಿಡುಗಡೆಯ ಸುದ್ದಿಯು ಭಾರತೀಯರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ರೆಟ್ರೊ ಶೈಲಿಯ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್

ಲ್ಯಾಂಬ್ರೆಟಾ ಕಂಪನಿಯು ಅಂತರ್‍‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿ50 ಸ್ಪೆಷಲ್, ವಿ 125 ಸ್ಪೆಷಲ್ ಹಾಗೂ ವಿ 200 ಸ್ಪೆಷಲ್ ಹೆಸರಿನಲ್ಲಿ ಹಲವಾರು ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Italian firm Lambretta to launch G 325 special e-scooter in India 2020 Auto Expo. Read in Kannada.
Story first published: Tuesday, January 14, 2020, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X