ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಜಾವಾ ಮೋಟಾರ್‌ಸೈಕಲ್ ಕಂಪನಿಯು ಈ ವರ್ಷದ ಮಾರ್ಚ್ ತಿಂಗಳಲ್ಲಿ ಈ ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳನ್ನು ಬಿಡುಗಡೆಗೊಳಿತ್ತು. ಇದೀಗ ಈ ಹೊಸ ಜಾವಾ ಮತ್ತು ಜಾವಾ 42 ಬೈಕುಗಳು ಡೀಲರ್ ಬಳಿ ತಲುಪಿದೆ.

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಈ ಹೊಸ ಬೈಕುಗಳನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ. ಕರೋನಾ ವೈರಸ್ ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲ್ಪಟ್ಟಿತು. ಇದರಿಂದಾಗಿ ಈ ಬೈಕುಗಳ ಲಭ್ಯತೆ ಮತ್ತು ವಿತರಣೆಗಳು ಕೂಡ ವಿಳಂಬವಾಗಿದೆ. ಇದೀಗ ಹೊಸ ಜಾವಾ ಮತ್ತು ಜಾವಾ 42 ಬೈಕುಗಳು ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು.

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಈ ಹೊಸ ಎರಡು ಬೈಕುಗಳ ಮಾಹಿತಿಯನ್ನು ಜಾವಾ ಮೋಟಾರ್‌ಸೈಕಲ್ ಕಂಪನಿಯು ಬಹಿರಂಗಪಡಿಸಿದೆ. ಈ ಹೊಸ ಎರಡು ಜಾವಾ ಬೈಕುಗಳು 172 ಕೆ,ಜಿ ತೂಕವನ್ನು ಹೊಂದಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 2 ಕೆಜಿ ಅಧಿಕ ತೂಕವಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಇನ್ನು ಈ ಎರಡು ಬೈಕುಗಳ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕೂಡ ಕಡಿಮೆಯಾಗಿದೆ. ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಒಂದೇ ಮಾದರಿಯ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 0.8 ಬಿಹೆಚ್‍ಪಿ ಪವರ್ ಮತ್ತು 0.95 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಈ ಬೈಕಿನಲ್ಲಿ ತೂಕ ಹೆಚ್ಚಳ ಮತ್ತು ಪವರ್, ಟಾರ್ಕ್ ಕಡಿಮೆಗೊಳಿಸಿರುವುದು ಈ ಬೈಕುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ತೂಕವನ್ನು ಹೆಚ್ಚಿಸಿರುವುದಕ್ಕೆ ಕಂಪನಿಯು ನಿಖರವಾದ ಕಾರಣವನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಬಿಎಸ್-6 ಜಾವಾ ಮತ್ತು ಜಾವಾ 42 ಬೈಕುಗಳನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಅವುಗಳ ಬೆಲೆಯಲ್ಲಿ ಕೂಡ ಗಮನಾರ್ಹ ಏರಿಕೆ ಕಂಡುಬಂದಿದೆ. ಕಂಪನಿಯು ಜಾವಾ ಮತ್ತು ಜಾವಾ 42 ಬೈಕುಗಳನ್ನು ಸಿಂಗಲ್-ಚಾನೆಲ್ ಎಬಿಎಸ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಸಿಂಗಲ್-ಚಾನೆಲ್ ಎಬಿಎಸ್ ಹೊಂದಿರುವ ಸ್ಟ್ಯಾಂಡರ್ಡ್ ಜಾವಾ ಬಿಎಸ್-6 ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.73 ಲಕ್ಷಗಳಾಗಿದೆ. ಹಿಂದಿನ ಬಿಎಸ್-4 ಮಾದರಿಗಿಂತ ರೂ.9,000 ರವರೆಗೆ ಹೆಚ್ಚಿಸಿದೆ.

ಡೀಲರ್ ಬಳಿ ತಲುಪಿದ ಹೊಸ ಜಾವಾ ಬೈಕುಗಳು

ಇನ್ನು ಬಿಎಸ್-6 ಜಾವಾ ಡ್ಯುಯಲ್-ಚಾನೆಲ್ ಎಬಿಎಸ್ ರೂಪಾಂತರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.83 ಲಕ್ಷಗಳಾಗಿದೆ. ಹಿಂದಿನ ಬಿಎಸ್-4 ಮಾದರಿಗಿಂತ ರೂ.10,000 ರವರೆಗೆ ಹೆಚ್ಚಿಸಿದೆ. ಇನ್ನು ಈ ಬೈಕುಗಳ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೆ ಹೋಲಿಸಿದರೆ ಸುಮಾರು 8 ಬಿಹೆಚ್‌ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

Most Read Articles

Kannada
English summary
BS6 Jawa Classic, Forty-Two start to arrive at dealerships. Read In Kannada.
Story first published: Wednesday, June 17, 2020, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X