Just In
- 3 min ago
ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು
- 1 hr ago
ಟೈರ್ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್
- 2 hrs ago
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- 2 hrs ago
ಫಸ್ಟ್ ಡ್ರೈವ್ ರಿವ್ಯೂ: ಆಡಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನ್ಯೂ ಜನರೇಷನ್ ಎ4 ಸೆಡಾನ್?
Don't Miss!
- Movies
ಅರಮನೆಯನ್ನೇ ಹೊಂದಿರುವ ಸೈಫ್, ಮನೆ ಬದಲಾಯಿಸುತ್ತಿದ್ದಾರೆ!
- News
ಚಿತ್ರದುರ್ಗ: ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.16ರ ಚಿನ್ನ, ಬೆಳ್ಳಿ ದರ
- Sports
ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಜಾವಾ ಮೋಟಾರ್ಸೈಕಲ್
ಜನಪ್ರಿಯ ಜಾವಾ ಮೋಟಾರ್ಸೈಕಲ್ ಕಂಪನಿಯ 2020ರ ಆಗಸ್ಟ್ ತಿಂಗಳ ಮಾರಾಟ ವರದಿಯು ಬಹಿರಂಗವಾಗಿದೆ. ಈ ವರದಿಯ ಪ್ರಕಾರ, ಜಾವಾ ಮೋಟಾರ್ಸೈಕಲ್ ಕಂಪನಿಯು 2020ರ ಆಗಸ್ಟ್ ತಿಂಗಳಲ್ಲಿ 1,353 ಯುನಿಟ್ಗಳನ್ನು ಮಾರಾಟ ಮಾಡಿದೆ.

ಜಾವಾ ಮೋಟಾರ್ಸೈಕಲ್ ಕಂಪನಿಯ ಮಾರಾಟದ ವರದಿಯನ್ನು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಬಿಡುಗಡೆಗೊಳಿಸಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಾವಾ ಮೋಟಾರ್ಸೈಕಲ್ ಕಂಪನಿಯು 1,438 ಯುನಿಟ್ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.5.91 ಕುಸಿತವನ್ನು ಕಂಡಿದೆ. ಜಾವಾ ಮೋಟಾರ್ಸೈಕಲ್ ತನ್ನ ಪ್ರತಿಸ್ಪರ್ಧಿ ರಾಯಲ್ ಎನ್ಫೀಲ್ಡ್ ಬೈಕುಗಳಿಗೆ ಪೈಪೋಟಿ ನೀಡುವಲ್ಲಿ ವೈಫಲ್ಯ ಕಾಣುತ್ತಿದೆ.

ಜಾವಾ ಮೋಟಾರ್ಸೈಕಲ್ ಕಂಪನಿಯು 2020ರ ಜುಲೈ ತಿಂಗಳಲ್ಲಿ 569 ಯುನಿಟ್ಗಳನ್ನು ಮಾರಾಟ ಮಾಡಿತು. 2020ರ ಜುಲೈ ತಿಂಗಳ ಮಾರಾಟವನ್ನು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.137.78 ರಷ್ಟು ಬೆಳವಣಿಗೆಯನ್ನು ಕಂಡಿದೆ.
MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್ಸೈಕಲ್

ಜಾವಾ ಮೋಟಾರ್ಸೈಕಲ್ ಕಂಪನಿಯು ಹಲವು ವರ್ಷಗಳ ನಂತರ 2018ರಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಕೆಲವು ದಿನಗಳ ಹಿಂದಷ್ಟೇ ಮಹೀಂದ್ರಾ ಕಂಪನಿಯ ಅಂಗಸಂಸ್ಥೆಯಾದ ಜಾವಾ ಮೋಟಾರ್ಸೈಕಲ್, ಯುರೋಪಿಯನ್ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಆರಂಭಿಸಲು ಮುಂದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಜಾವಾ ಮೋಟಾರ್ಸೈಕಲ್ ನೇಪಾಳದಲ್ಲಿ ಡೀಲರ್ ಶಿಪ್ ಗಳನ್ನು ತೆರೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಾರಂಭಿಕ ಹಂತದಲ್ಲಿ ಕಂಪನಿಯು ನೇಪಾಳದಲ್ಲಿ ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42 ಬೈಕುಗಳನ್ನು ಮಾತ್ರ ಮಾರಾಟ ಮಾಡಲಿದೆ.

ಇನ್ನು ಜಾವಾ ಪೆರಾಕ್ ಬೈಕಿನ ವಿತರಣೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಕಂಪನಿಯು ಏಪ್ರಿಲ್ 2ರಂದು ಈ ಬೈಕಿನ ವಿತರಣೆಯನ್ನು ಆರಂಭಿಸಲು ನಿರ್ಧರಿಸಿತ್ತು. ಆದರೆ ಕರೋನಾ ವೈರಸ್ ಕಾರಣಕ್ಕೆ ಲಾಕ್ಡೌನ್ ಜಾರಿಗೊಳಿಸಿದ ಕಾರಣಕ್ಕೆ ವಿತರಣೆಯನ್ನು ಮುಂದೂಡಲಾಗಿತ್ತು.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಈ ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿಯ ಸಿಂಗಲ್ ಸಿಲಿಂಡರ್ ಬಿಎಸ್ -6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿಹೆಚ್ಪಿ ಪವರ್ ಹಾಗೂ 31 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಗೇರ್ಬಾಕ್ಸ್ ಜೋಡಿಸಲಾಗಿದೆ.

ಜಾವಾ ಸ್ಟ್ಯಾಂಡರ್ಡ್ ಬಿಎಸ್ 6 ಹಾಗೂ ಜಾವಾ 42 ಬಿಎಸ್ 6 ಬೈಕುಗಳ ವಿತರಣೆಯನ್ನು ಕೂಡ ಇತ್ತೀಚೆಗೆ ಆರಂಭಿಸಲಾಗಿದೆ. ಜಾವಾ ಬೈಕುಗಳು ಪ್ರತಿಸ್ಪರ್ಧಿ ರಾಯಲ್ ಎನ್ಫೀಲ್ಡ್ ಬೈಕುಗಳಿಗೆ ಪೈಪೋಟಿ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ಹೇಳಬಹುದು.