ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಈಗ ಪ್ರಪಂಚದೆಲ್ಲೆಡೆ ಒಂದೇ ಆತಂಕ, ಭಯ, ಅದುವೇ ಕರೋನಾ ವೈರಸ್. ಈ ಮಹಾಮಾರಿ ವೈರಸ್ ಗೆ ಹೆದರಿ ಜನರು ಮನೆಯಿಂದ ಹೊರಬರುತ್ತಿಲ್ಲ. ಇದರಿಂದ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಉಂಟಾಗಿದೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಜನರು ಹೊರಗಡೆ ಬರದಂತೆ ಸರ್ಕಾರವು ಲಾಕ್ ಡೌನ್ ಘೋಷಿಸಿದೆ. ಇಂತಹ ಸಂದರ್ಭಗಳಲ್ಲಿ ವ್ಯಾಪಾರ, ವ್ಯವಹಾರ ಕುಸಿತವಾಗುವುದು ಸಹಜ. ಇದಕ್ಕೆ ಆಟೋ ಮೊಬೈಲ್ ಕಂಪನಿಗಳು ಹೊರತಲ್ಲ. ಈಗಾಗಲೇ ಹಲವು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿವೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಈಗ ಜಾವಾ ಮೋಟಾರ್‌ಸೈಕಲ್ ಕಂಪನಿಯೂ ಸಹ ಪಿತಾಂಪುರದಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಕರೋನಾ ವೈರಸ್‌ನಿಂದಾಗಿ ಈಗಾಗಲೇ ದೇಶದ ಹಾಗೂ ವಿಶ್ವದ ಅನೇಕ ವಾಹನ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರವು ಮಾರ್ಚ್ 31ರವರೆಗೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯವಿರುತ್ತವೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಜಾವಾ ಮೋಟಾರ್‌ಸೈಕಲ್ ಕಂಪನಿಯ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುವುದರಿಂದ ಜಾವಾ ಕಂಪನಿಯ ಹೊಸ ಬಾಬರ್ ಬೈಕ್ ಆದ ಪೆರಾಕ್ ವಿತರಣೆಯು ವಿಳಂಬವಾಗಲಿದೆ ಎಂದು ಕಂಪನಿ ಹೇಳಿದೆ. ಈ ಬೈಕ್ ಅನ್ನು ಏಪ್ರಿಲ್ 2ರಿಂದ ವಿತರಿಸಲು ನಿರ್ಧರಿಸಲಾಗಿತ್ತು. ಈಗಾಗಲೇ ಜಾವಾ ಹಾಗೂ ಜಾವಾ 42 ಬೈಕುಗಳ ವಿತರಣೆಯನ್ನು ನಿಲ್ಲಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಜಾವಾ ಕಂಪನಿಯ ಸಿಇಒ ಆಶಿಶ್ ಸಿಂಗ್ ಜೋಶಿರವರು ಮಾತನಾಡಿ, ಇಂತಹ ಸಂಕಷ್ಟದ ಸಮಯದಲ್ಲಿ ಗ್ರಾಹಕರ ಸುರಕ್ಷತೆಯು ಮುಖ್ಯವಾಗಿದೆ. ಶೀಘ್ರದಲ್ಲೇ ಕರೋನಾ ವೈರಸ್ ಹರಡುವಿಕೆಯಿಂದ ಹೊರಬರಲು ಸಾಧ್ಯವಾಗುವ ವಿಶ್ವಾಸವಿದೆ ಎಂದು ಹೇಳಿದರು.

ಕರೋನಾ ವೈರಸ್ ಎಫೆಕ್ಟ್: ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಜಾವಾ

ಪರಿಸ್ಥಿತಿ ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದ ನಂತರ ಉತ್ಪಾದನಾ ಘಟಕವನ್ನು ತೆರೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈ ಉತ್ಪಾದನಾ ಘಟಕದಲ್ಲಿ ತಿಂಗಳಿಗೆ 10,000 ಯೂನಿಟ್ ಬೈಕ್ ಗಳನ್ನು ಉತ್ಪಾದಿಸಲಾಗುತ್ತದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ನಮತ ಬೈಕಿನ ವಿತರಣೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Jawa Motorcycles suspends production due to corona virus. Read in Kannada.
Story first published: Tuesday, March 24, 2020, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X