Just In
- 1 hr ago
ಒಂದೂವರೆ ವರ್ಷದಲ್ಲಿ ದಾಖಲೆ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್
- 3 hrs ago
ಕೆಟಿಎಂನಿಂದ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೊಸ ಅಭಿಯಾನ ಆರಂಭ
- 13 hrs ago
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- 15 hrs ago
ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾದ ಒಕಿನಾವ
Don't Miss!
- Movies
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
- News
ಮತ್ತೆ ಸಂಪುಟ ವಿಸ್ತರಣೆ; ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ!
- Sports
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಮೊದಲನೇ ಟೆಸ್ಟ್ ಪಂದ್ಯ, Live ಸ್ಕೋರ್
- Finance
ಬಜೆಟ್ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ಕವಾಸಕಿ ಬೈಕುಗಳ ಮೇಲೆ ಇಯರ್ ಎಂಡ್ ಆಫರ್
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಭಾರತದಲ್ಲಿ 2020ರ ವರ್ಷಾಂತ್ಯದ ರಿಯಾಯಿತಿಯನ್ನು ಘೋಷಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ಆಯ್ದ ಬೈಕುಗಳಿಗೆ ಕವಾಸಕಿ ಕಂಪನಿಯು ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ಕವಾಸಕಿ ಕಂಪನಿಯು ತನ್ನ ಕೆಎಲ್ಎಕ್ಸ್ 110, ಕೆಎಲ್ಎಕ್ಸ್ 140, ಕೆಎಕ್ಸ್ 100, ಡಬ್ಲ್ಯು 800, ಝಡ್ 650 ವರ್ಸಿಸ್ 650, ಮತ್ತು ವಲ್ಕನ್ ಎಸ್ ಮಾದರಿಗಳ ಬೆಲೆ ರಿಯಾಯಿಗಳನ್ನು ಘೋಷಿಸಿದೆ. ಕವಾಸಕಿ ಕಂಪನಿಯು ವರ್ಷಾಂತ್ಯದ ಮಾರಾಟವನ್ನು ಹೆಚ್ಚಿಸಲು ತನ್ನ ಆಯ್ದ ಜನಪ್ರಿಯ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಗ್ರಾಹಕರು ಆಯ್ದ ಮಾದರಿಗಳ ಅಕ್ಸೆಸರೀಸ್ ಖರೀದಿಸಲು ಕೂಪನ್ ಅನ್ನು ಸಹ ಬಳಸಬಹುದು. ಕಂಪನಿಯು ನೀಡುವ ಕೆಲವು ಅಕ್ಸೆಸರೀಸ್ ಗಳನ್ನು ಗ್ರಾಹಕರು ಆಯ್ಕೆ ಮಾಡಬಹುದು.

ಕವಾಸಕಿ ಕಂಪನಿಯ ಆಯ್ದ ಮಾದರಿಗಳ ಮೇಲಿನ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಮಾತ್ರ ಲಭ್ಯವಿರುತ್ತದೆ. ಈ ಆಯ್ದ ಮಾದರಿಗಳನ್ನು ಗ್ರಾಹಕರು ಖರೀದಿಸುವಾಗ ಕೂಪನ್ ಅನ್ನು ದೇಶದಾದ್ಯಂತದ ಯಾವುದೇ ಕವಾಸಕಿ ಡೀಲರುಗಳ ಬಳಿ ಪಡೆದುಕೊಳ್ಳಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಮಾದರಿವಾರು ಹೇಳಬೇಕಾದರೆ, ಮೊದಲಿಗೆ ಕವಾಸಕಿ ವರ್ಸಿಸ್ 650 ಅಡ್ವೆಂಚರ್ ಟೂರರ್ ಬೈಕಿನ ಮೇಲೆ ರೂ.30,000 ಗಳ ಮೌಲ್ಯದ ‘ಅಡ್ವೆಂಚರ್ ವೋಚರ್' ಎಂಬ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಈ ವೋಚರ್' ನಲ್ಲಿ ಅಕ್ಸೆಸರೀಸ್ ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಬ್ರ್ಯಾಂಡ್ನ ಆಫ್-ರೋಡ್ ಮಾದರಿ ಕೆಎಲ್ಎಕ್ಸ್ 110 ಮತ್ತು ಕೆಎಲ್ಎಕ್ಸ್ 140 ಬೈಕುಗಳ ಮೇಲೆ ಕ್ರಮವಾಗಿ ರೂ.30,000 ಮತ್ತು ರೂ.40,000 ಗಳ ರಿಯಾಯಿತಿ ‘ಆಫ್-ರೋಡ್ ವೋಚರ್' ಎಂದು ನೀಡಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ತನ್ನ ಡಬ್ಲ್ಯು800 ಮತ್ತು ನೇಕೆಡ್ ಮಾದರಿಯಾದ ಝಡ್650 ಬೈಕುಗಳ ಮೇಲೆ ರೂ.30,000 ಮೌಲ್ಯದ ವೋಚರ್ ಸಹ ನೀಡುತ್ತದೆ. ಇನ್ನು ಕವಾಸಕಿ ವಲ್ಕನ್ ಎಸ್ ಬೈಕಿನ ಮೇಲೆ ರೂ.20,000 ಮೌಲ್ಯದ ವೋಚರ್ ಸಹ ನೀಡುತ್ತದೆ

ಜಪಾನಿನ ತಯಾರಕರು ಮುಂದಿನ ವರ್ಷ ಭಾರತದಲ್ಲಿ ಈ ಸರಣಿಯ ಡಬ್ಲ್ಯು175 ಎಂಬ ಅತ್ಯಂತ ಚಿಕ್ಕ ಮಾದರಿಯನ್ನು ಬಿಡುಗಡೆಗೊಳಿಸಲಿದೆ. ಇತ್ತೀಚೆಗೆ ಭಾರತದಲ್ಲಿ ಕವಾಸಕಿ ಡಬ್ಲ್ಯು 175 ಬೈಕ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಈ ಬೈಕನ್ನು ಭಾರತಕ್ಕೆ ಸಿಕೆಡಿ ಮಾರ್ಗಗಳ ಮೂಲಕ ತರಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಭಾರತದಲ್ಲಿ ಬೈಕು ಜೋಡಿಸುವುದು ಕವಾಸಕಿ ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು.

ಕವಾಸಕಿ ಇಂಡಿಯಾ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಕವಾಸಕಿ ಕಂಪನಿಯ ಆಫ್-ರೋಡ್, ಅಡ್ವೆಂಚರ್-ಟೂರರ್ ಮತ್ತು ನೇಕೆಡ್ ಸ್ಟ್ರೀಟ್ ವಿಭಾಗದ ಬೈಕುಗಳು ಒಳಗೊಂಡಿದೆ.