ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೋ-ಶೈಲಿಯ ಬೈಕುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಭಾರತೀಯ ಮಾರುಕಟ್ಟೆಯ ರೆಟ್ರೋ-ಶೈಲಿಯ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಹಲವು ದಶಕಗಳಿಂದ ಪಾರುಪತ್ಯ ಸಾಧಿಸುತ್ತಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಜಾವಾ ಬೈಕುಗಳು ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಇತ್ತೀಚೆಗೆ ಹೋಂಡಾ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಪೈಪೋಟಿ ನೀಡಲು ಹೈನೆಸ್ ಸಿಬಿ350 ಅನ್ನು ಬಿಡುಗಡೆಗೊಳಿಸಿತ್ತು. ಇನ್ನು ಕವಾಸಕಿ ಕಂಪನಿಯು ‘ಡಬ್ಲ್ಯು' ಸರಣಿಯ ಸುಂದರವಾದ ರೆಟ್ರೊ-ಶೈಲಿಯ ಬೈಕುಗಳನ್ನು ಒಳಗೊಂಡಿದೆ. ಈ ಸರಣಿಯ ಬೈಕುಗಳ ಎಂಜಿನ್‌ಗಳು 175 ಸಿಸಿ ಯಿಂದ 800 ಸಿಸಿ ವರೆಗೆ ಸಾಮರ್ಥ್ಯ ಹೊಂದಿವೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಇತ್ತೀಚಿನ ವರದಿ ಪ್ರಕಾರ, ಜಪಾನಿನ ತಯಾರಕರು ಮುಂದಿನ ವರ್ಷ ಭಾರತದಲ್ಲಿ ಈ ಸರಣಿಯ ಡಬ್ಲ್ಯು175 ಎಂಬ ಅತ್ಯಂತ ಚಿಕ್ಕ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಒಳ್ಳೆ ಬೈಕ್ ಆಗಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಕವಾಸಕಿ ಡಬ್ಲ್ಯು 175 ಬೈಕ್ ಈಗಾಗಲೇ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ, ಈ ಬೈಕನ್ನು ಭಾರತಕ್ಕೆ ಸಿಕೆಡಿ ಮಾರ್ಗಗಳ ಮೂಲಕ ತರಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಭಾರತದಲ್ಲಿ ಬೈಕು ಜೋಡಿಸುವುದು ಕವಾಸಕಿ ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಕೆಲವು ವರದಿಗಳ ಪ್ರಕಾರ, ಕವಾಸಕಿ ಡಬ್ಲ್ಯು 175 ಬೈಕಿನ ಬೆಲೆಯು ಸುಮಾರು ರೂ.1.4 ಲಕ್ಷಗಳಾಗಿದೆ. ಹೊಸ ಕವಾಸಕಿ ಡಬ್ಲ್ಯು175 ಬೈಕಿನಲ್ಲಿ 177 ಸಿಸಿ, ಏರ್-ಕೂಲ್ಡ್, ಎಸ್‌ಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಈ ಎಂಜಿನ್ 13 ಬಿಹೆಚ್‍ಪಿ ಪವರ್ ಮತ್ತು 13.2 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪವರ್ ಅಂಕಿಅಂಶಗಳು ಹೆಚ್ಚು ಪ್ರಭಾವಶಾಲಿಯಾಗಿಲ್ಲ, ಆದರೆ ಬೈಕು ಸಾಕಷ್ಟು ಹಗುರವಾಗಿರುತ್ತದೆ ಮತ್ತು ಆಕರ್ಷಕವಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಈ ಡಬ್ಲ್ಯು175 ಬೈಕ್ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರಿಸಬಹುದು. ಈ ಬೈಕ್ ಅತ್ಯಂತ ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ವೈರ್-ಸ್ಪೋಕ್ ವ್ಹೀಲ್ಸ್ ಮತ್ತು ಪಿ-ಶೂಟರ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಹೊಸ ಕವಾಸಕಿ ಡಬ್ಲ್ಯು175 ಬೈಕ್ ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪೀಡೋ, ಓಡೋಮೀಟರ್ ಮತ್ತು ಟ್ರಿಪ್‌ಮೀಟರ್ ಜೊತೆಗೆ ಟೆಲ್-ಟೇಲ್ ಲ್ಯಾಂಪ್ ಅನ್ನು ಹೊಂದಿವೆ. ಈ ಬೈಕಿನಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್ ಗಳನ್ನು ಸಹ ಪಡೆಯುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ರೆಟ್ರೋ-ಶೈಲಿಯ ಬೈಕ್

ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ. ಕೆಂದರೆ ಭಾರತದಲ್ಲಿ ರೆಟ್ರೊ-ಶೈಲಿಯ ಬೈಕ್‌ಗಳು 250 ಸಿಸಿಗಿಂತ ಹೆಚ್ಚಾಗಿದೆ. .

Most Read Articles

Kannada
English summary
Kawasaki W175 To Launch In India Next Year – Report. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X