ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಜಪಾನಿನ ಬೈಕ್ ತಯಾರಕ ಕಂಪನಿಯಾದ ಕವಾಸಕಿ ಹೊಸ ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದೆ. ಪೇಟೆಂಟ್ ರೇಖಾಚಿತ್ರಗಳಲ್ಲಿ ಹಿಂಬದಿ ಸವಾರನಿಗೆ ಹಿಂಬದಿಯ ಬದಲು ಚಾಲಕನ ಪಕ್ಕದಲ್ಲಿ ಸೀಟು ನೀಡಿರುವುದನ್ನು ಕಾಣಬಹುದು.

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಈ ತ್ರಿಚಕ್ರ ಬೈಕ್ ನೋಡಿದ ತಕ್ಷಣ ಯಮಹಾ ನಿಕೆನ್ ತ್ರಿಚಕ್ರ ವಾಹನದಂತೆ ಕಂಡು ಬಂದರೂ ಕವಾಸಕಿಯ ಈ ತ್ರಿಚಕ್ರ ವಾಹನವು ಭಿನ್ನವಾಗಿದೆ. ಈ ತ್ರಿಚಕ್ರ ಬೈಕ್ ಕಾರಿನಂತೆ ಕಾಣುತ್ತದೆ. ಈ ತ್ರಿಚಕ್ರ ಬೈಕ್ ಮುಂಭಾಗದಲ್ಲಿ ಎರಡು ವ್ಹೀಲ್ ಹಾಗೂ ಹಿಂಭಾಗದಲ್ಲಿ ಒಂದು ವ್ಹೀಲ್ ಅನ್ನು ಹೊಂದಿದ್ದು, ಪೋಲಾರಿಸ್ ಸ್ಲಿಂಗ್ಶಾಟ್ ಹಾಗೂ ಕ್ಯಾನ್ಎಂ ಸ್ಪೀಡರ್‌ನಂತಹ ವಾಹನಗಳನ್ನು ಹೋಲುತ್ತದೆ.

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಸಾಮಾನ್ಯ ತ್ರಿಚಕ್ರ ಬೈಕುಗಳಂತೆಯೇ, ಕವಾಸಕಿಯ ಈ ತ್ರಿಚಕ್ರ ಬೈಕಿನ ಮುಂಭಾಗದ ವ್ಹೀಲ್‌ಗಳು ಓರೆಯಾಗಿಲ್ಲ. ಇದರಲ್ಲಿರುವ ಚಾಸಿಸ್ ವಾಹನವು ತಿರುಗಿದಾಗ ಬಲಕ್ಕೆ ಮತ್ತು ಎಡಕ್ಕೆ ತಿರುಗುತ್ತದೆ. ಮುಂಭಾಗದ ಎರಡು ವ್ಹೀಲ್‌ಗಳು, ಎರಡು ಸ್ಪ್ರಿಂಗ್ ಸಸ್ಪೆಂಷನ್‌ಗಳೊಂದಿಗೆ ಸ್ಟೀಯರಿಂಗ್ ವ್ಹೀಲ್‌ಗೆ ಸಂಪರ್ಕ ಹೊಂದಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಈ ಬೈಕಿನ ಎಂಜಿನ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ತ್ರಿಚಕ್ರ ವಾಹನದಲ್ಲಿ ಪೆಟ್ರೋಲ್, ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ಎಂಜಿನ್‌ಗಳನ್ನು ಬಳಸಬಹುದು. ಎಂಜಿನ್ ಅನ್ನು ಹಿಂಭಾಗದಲ್ಲಿ ಜೋಡಿಸಲಾಗುತ್ತದೆ ಎಂಬುದನ್ನು ಈ ಚಿತ್ರಗಳಲ್ಲಿ ಕಾಣಬಹುದು.

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಆದರೆ ಇವು ಪೇಟೆಂಟ್‌ನ ಆರಂಭಿಕ ಚಿತ್ರಗಳಾಗಿದ್ದು, ಇವುಗಳನ್ನು ಮುಂಬರುವ ದಿನಗಳಲ್ಲಿ ಬದಲಿಸಲು ಬಹುದು. ಕವಾಸಕಿ ಈ ಪೇಟೆಂಟ್ ಅನ್ನು ಉತ್ಪಾದಿಸುತ್ತದೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಕವಾಸಕಿ ಕಂಪನಿಯ ನಿಂಜಾ 650 ಬಿಎಸ್ 6 ಬೈಕುಗಳನ್ನು ಭಾರತದ ಮಾರಾಟಗಾರರಿಗೆ ತಲುಪಿಸಲಾಗುತ್ತಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.6.24 ಲಕ್ಷಗಳಾಗಿದೆ. ನಿಂಜಾ 650 ಬಿಎಸ್ 6 ಬೈಕಿನ ಬೆಲೆ ಬಿಎಸ್ 4 ಮಾದರಿಗಿಂತ ರೂ.35,000 ಹೆಚ್ಚಾಗಿದೆ. ಕವಾಸಕಿ ಕಂಪನಿಯು ಈ ಬೈಕಿನ ಬುಕ್ಕಿಂಗ್‌ಗಳನ್ನು ಆರಂಭಿಸಿದೆ.

ತ್ರಿಚಕ್ರ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದ ಕವಾಸಕಿ

ಮಾರಾಟಗಾರರಲ್ಲಿ ಅಥವಾ ಆನ್‌ಲೈನ್‌ನಲ್ಲಿ ರೂ.49,000 ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಕವಾಸಕಿ ನಿಂಜಾ 650 ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕ್ ಮೊದಲಿಗಿಂತ ಹೆಚ್ಚು ಆಕರ್ಷಕ ಹಾಗೂ ಐಷಾರಾಮಿಯಾಗಿ ಕಾಣುತ್ತದೆ. ಲೈಮ್ ಗ್ರೀನ್ ಹಾಗೂ ಪರ್ಲ್ ವೈಟ್ ಬಣ್ಣಗಳಲ್ಲಿ ಮಾರಾಟವಾಗುವ ಈ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು.

ಸೂಚನೆ: ಈ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

Most Read Articles

Kannada
English summary
Kawasaki three wheeler design patent filed images revealed. Read in Kannada.
Story first published: Friday, June 5, 2020, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X