ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿಯು ತನ್ನ ಹೊಚ್ಚ ಹೊಸ ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದೆ. ಕವಾಸಕಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕೆಎಲ್‌ಎಕ್ಸ್‌250 ಬೈಕನ್ನು ಬದಲಾಯಿಸಿ ಈ ಹೊಸ ಕೆಎಲ್ಎಕ್ಸ್300 ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಕವಾಸಕಿ ಕಂಪನಿಯು ಕೆಎಲ್‌ಎಕ್ಸ್‌250 ಮಾದರಿಯಲ್ಲಿದ್ದ ಅದೇ ಮಾದರಿಯ ವಿನೋದ ಮತ್ತು ಉತ್ಸಾಹ ಮಟ್ಟವನ್ನು ಕೆಎಲ್ಎಕ್ಸ್300 ಬೈಕಿನಲ್ಲಿ ಮುಂದಕ್ಕೆ ಸಾಗಿಸುವುದಾಗಿ ಹೇಳಿಕೊಂಡಿದೆ. ಕೆಎಲ್ಎಕ್ಸ್300 ಪರಿಷ್ಕೃತ ಸ್ಟೈಲಿಂಗ್ ಅನ್ನು ಪಡೆಯುತ್ತದೆ, ಹೊಸ ಚೂಪಾದ ಮುಂಭಾಗದ ಕೌಲ್ ಮತ್ತು ಹೆಡ್ ಲೈಟ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕವಾಸಕಿ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಒರಟಾದ ಸಖತ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಹೊಸ ಕೆಎಲ್ಎಕ್ಸ್300 ಬೈಕ್ ಒರಟಾದ ಆಫ್-ರೋಡ್ ಸ್ಟೈಲ್ ಫೆಂಡರ್ ಮತ್ತು ದುಂಡಗಿನ ಆಕಾರದ ಮಿರರ್ ಗಳನ್ನು ಹೊಂದಿವೆ, ಇನ್ನು ಈ ಹೊಸ ಬೈಕಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಸದಾಗಿದೆ. ಈ ಕ್ಲಸ್ಟರ್ ನಲ್ಲಿ ಕ್ಲಾಕ್, ಡ್ಯುಯಲ್-ಟ್ರಿಪ್ ಮೀಟರ್, ಟ್ಯಾಕೋಮೀಟರ್ ಮತ್ತು ಕೆಲವು ವಾರ್ನಿಂಗ್ ಲೈಟ್ ಗಳಂತಹ ಡೇಟಾವನ್ನು ಪ್ರದರ್ಶಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಈ ಡ್ಯುಯಲ್-ಸ್ಪೋರ್ಟ್ ಕೆಎಲ್ಎಕ್ಸ್300 ಬೈಕಿಗೆ ಕ್ತಿ ತುಂಬಲು 292 ಸಿಸಿ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಪವರ್ ಫುಲ್ ಎಂಜಿನ್ ಆಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಇನ್ನು ಕೆಎಲ್‌ಎಕ್ಸ್300 ಆರ್ ಆಫ್-ರೋಡ್ ಮಾದರಿಯಿಂದ ಎರವಲು ಪಡೆದ ಕ್ಯಾಮ್ ಪ್ರೊಫೈಲ್‌ಗಳು, ಎಲೆಕ್ಟ್ರೋಫ್ಯೂಷನ್ ಸಿಲಿಂಡರ್ ಮತ್ತು ಅಲ್ಯೂಮಿನಿಯಂ ಸಿಲಿಂಡರ್‌ನಲ್ಲಿ ಅಲ್ಟ್ರಾ-ಹಾರ್ಡ್ ಲೇಪನವನ್ನು ಸಹ ಎಂಜಿನ್ ಒಳಗೊಂಡಿದೆ.ಇನ್ನು ಈ ಎಂಜಿನ್ ಉತ್ತಮ ಥ್ರೊಟಲ್ ರೆಸ್ಪಾನ್ಸ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಕೆಎಲ್‌ಎಕ್ಸ್300 ಬೈಕಿನ ಮುಂಭಾಗ 21 ಇಂಚಿನ ಮತ್ತು ಹಿಂಭಾಗ 18 ಇಂಚಿನ ಸ್ಪೋಕ್ ವ್ಹೀಲ್ ಗಳನ್ನು ಅಳವಡಿಸಿದ್ದಾರೆ. ಈ ಬೈಕಿನಲ್ಲಿ ಆಫ್-ರೋಡ್ ಆಧಾರಿತ ಒರಟಾದ ಟಯರ್ ಗಳನ್ನು ಅಳವಡಿಸಿದ್ದಾರೆ.

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಇನ್ನು ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 250 ಎಂಎಂ ಡೀಸ್ಕ್ ಬ್ರೇಕ್ ನೊಂದಿಗೆ ಟ್ವಿನ್-ಪಿಸ್ಟನ್ ಕ್ಯಾಲಿಪರ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಕೆಎಲ್‌ಎಕ್ಸ್300 ಗ್ರೀನ್ ಮತ್ತು ಗ್ರೇ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕ್ ಭಾರತೀಯ ರಸ್ತೆಗೆಳಿಗೂ ಸೂಕ್ತವಾಗುವ ರೀತಿ ಬೈಕನ್ನು ಕವಾಸಕಿ ಕಂಪನಿಯು ತಯಾರಿಸಲಾಗಿದೆ.

ಹೊಸ ಕೆಎಲ್‌ಎಕ್ಸ್300 ಡ್ಯುಯಲ್-ಸ್ಪೋರ್ಟ್ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಕವಾಸಕಿ ಇಂಡಿಯಾ ಕಂಪನಿಯು ಈ ವಿಭಾಗದ ಸಣ್ಣ ಗಾತ್ರದ ಮಾದರಿಯಾಗಿರುವುದರಿಂದ ಕಾರಣ ಅದನ್ನು ಭಾರತಕ್ಕೆ ತರುವುದಿಲ್ಲ. ಆದರೆ ಕಂಪನಿಯು ಇದನ್ನು ಭಾರತಕ್ಕೆ ತರಲು ಯೋಜಿಸಿದ್ದರೂ ಸಹ ಇದರ ಬೆಲೆಯು ದುಬಾರಿಯಾಗಿರುತ್ತದೆ. ಆದರಿಂದ ಈ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ ಎಂದು ಹೇಳಬಹುದು.

Most Read Articles

Kannada
English summary
Kawasaki KLX300 Dual-sport Motorcycle Unveiled. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X