ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಫೋಕ್ಸ್‌ವ್ಯಾಗನ್ ಕಂಪನಿಯ ಬೀಟಲ್ ಕಾರು ಜನಪ್ರಿಯ ಕಾರುಗಳಲ್ಲಿ ಒಂದು. ಈ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಚಿಕ್ಕ ಆವೃತ್ತಿಯನ್ನು ನಿರ್ಮಿಸಿದ ರಾಕೇಶ್ ಬಾಬು ಇಂಟರ್ ನೆಟ್ ನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ರಾಕೇಶ್ ಬಾಬು ಕೇರಳದವರಾಗಿದ್ದು, ವಾಹನ ಮಾರ್ಪಾಡು ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ರಾಕೇಶ್ ಬಾಬು ಹಳೆಯ ಸುಜುಕಿ ಸಮುರಾಯ್ ಬೈಕಿನ ಎಂಜಿನ್ ಬಳಸಿ ಫೋಕ್ಸ್‌ವ್ಯಾಗನ್ ಬೀಟಲ್‌ನ ಚಿಕ್ಕ ಆವೃತ್ತಿಯನ್ನು ನಿರ್ಮಿಸಿದ್ದರು. ರಾಕೇಶ್ ಬಾಬು ಈಗ ಜನಪ್ರಿಯ ಯಮಹಾ ಆರ್‌ಎಕ್ಸ್ 100 ಬೈಕಿನ ಚಿಕ್ಕ ಆವೃತ್ತಿಯನ್ನು ನಿರ್ಮಿಸಿದ್ದಾರೆ.

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಈ ಬೈಕಿನಲ್ಲಿ ಚೈನ್ ಸಾ ಎಂಜಿನ್ ಬಳಸಲಾಗಿದೆ. ಈ ಬೈಕಿಗೆ ಸಂಬಂಧಿಸಿದ ವೀಡಿಯೊವನ್ನು ಸುಡಸ್ ಕಸ್ಟಮ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಾಕೇಶ್ ಬಾಬು ಕಲಾಯಿ ಮಾಡಿದ ಕಬ್ಬಿಣದ ಪೈಪ್ ಬಳಸಿ ಈ ಬೈಕ್‌ಗಾಗಿ ಚಾಸಿಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಟೆನ್ ಲೆಸ್ ಸ್ಟೀಲ್ ಪೈಪ್ ಬಳಸಿ ಕ್ರ್ಯಾಶ್ ಗಾರ್ಡ್ ತಯಾರಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಈ ಮಿನಿ ಯಮಹಾ ಆರ್‌ಎಕ್ಸ್ 100 ಬೈಕಿನಲ್ಲಿ ಹಳೆಯ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿರುವ ಹ್ಯಾಂಡಲ್‌ಬಾರ್‌ಗಳನ್ನು ಬಳಸಲಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಸೈಡ್ ಟರ್ನ್ ಇಂಡಿಕೇಟರ್, ಫ್ಯೂಯಲ್ ಟ್ಯಾಂಕ್ ಹಾಗೂ ಸೈಡ್ ಪ್ಯಾನಲ್ ಗಳನ್ನು ಹೊಸದಾಗಿ ತಯಾರಿಸಲಾಗಿದೆ.

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹಳೆಯ ಆರ್‌ಎಕ್ಸ್ 100 ಬೈಕಿನಿಂದ ಪಡೆಯಲಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಸೈಕಲ್ ನಲ್ಲಿರುವಂತಹ ಮಡ್‌ಗಾರ್ಡ್‌ಗಳನ್ನು ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಈ ಚಿಕ್ಕ ಆರ್‌ಎಕ್ಸ್ 100 ಬೈಕ್ ಮೆಟಾಲಿಕ್ ಬ್ಲೂ ಬಣ್ಣವನ್ನು ಹೊಂದಿದೆ. ಈ ಮಿನಿ ಆರ್‌ಎಕ್ಸ್ 100 ಬೈಕಿನ ಮುಂಭಾಗದಲ್ಲಿ ಬೈಸಿಕಲ್ ವೊಂದರ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದರೆ, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಈ ಮಿನಿ ಬೈಕ್‌ ಸ್ಟೇನ್‌ಲೆಸ್ ಸ್ಟೀಲ್ ನಿಂದ ತಯಾರಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿರುವಂತಹ ಸಸ್ಪೆಂಷನ್ ಅಳವಡಿಸಲಾಗಿದೆ. ರಾಕೇಶ್ ಬಾಬು ಆರ್‌ಎಕ್ಸ್ 100 ಬೈಕ್‌ ಅನ್ನು ನೋಡಿ ಈ ಮಿನಿ ಬೈಕ್ ಅನ್ನು ತಯಾರಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ನಿಜವಾದ ಆರ್‌ಎಕ್ಸ್ 100 ಬೈಕಿನಲ್ಲಿರುವಂತಹ ಬಹುತೇಕ ಎಲ್ಲಾ ಫೀಚರ್ ಗಳನ್ನು ಈ ಮಿನಿ ಬೈಕಿನಲ್ಲೂ ಅಳವಡಿಸಿದ್ದಾರೆ. ಈ ಬೈಕಿನಲ್ಲಿರುವ ಸೀಟುಗಳು ನಿಜವಾದ ಯಮಹಾ ಆರ್‌ಎಕ್ಸ್ 100 ಬೈಕಿನಲ್ಲಿರುವಂತೆಯೇ ಇವೆ. ಈ ಚಿತ್ರಗಳನ್ನು ಸುಡಸ್ ಕಸ್ಟಮ್ ನಿಂದ ಪಡೆಯಲಾಗಿದೆ.

ಹಲವು ವಾಹನಗಳ ಬಿಡಿಭಾಗಗಳಿಂದ ತಯಾರಾಯ್ತು ಮಿನಿ ಆರ್‌ಎಕ್ಸ್ 100

ಯಮಹಾ ಆರ್‌ಎಕ್ಸ್ 100 ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿದ್ದ ಅತ್ಯಂತ ಜನಪ್ರಿಯ ಬೈಕುಗಳಲ್ಲಿ ಒಂದಾಗಿತ್ತು. ಈ ಬೈಕ್ ಈಗಲೂ ಸಹ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿದೆ.

Most Read Articles

Kannada
English summary
Kerala youth builds mini Yamaha RX 100 bike using several vehicles spare parts. Read in Kannada.
Story first published: Wednesday, November 11, 2020, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X