ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

390 ಅಡ್ವೆಂಚರ್ ಮೂಲಕ ಆಫ್ ರೋಡ್ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕೆಟಿಎಂ ಇಂಡಿಯಾ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಹೊಚ್ಚ ಹೊಸ 250 ಅಡ್ವೆಂಚರ್ ಬೈಕ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್

ಹೊಸ 250 ಅಡ್ವೆಂಚರ್ ಬೈಕ್ ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕೆಟಿಎಂ ಕಂಪನಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಬಿಡುಗಡೆ ಮಾಡಲಿದ್ದು, 390 ಅಡ್ವೆಂಚರ್ ಬೈಕ್ ಮಾದರಿಯಲ್ಲೇ ಕೆಲವು ಬದಲಾವಣೆಗಳೊಂದಿಗೆ ಹೊಸ ಬೈಕ್ ಮಾದರಿಯು ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜುಗೊಂಡಿದೆ.

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

ಭಾರತದಲ್ಲಿ ತನ್ನ ಸರಣಿ ಬೈಕ್ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಮುಂಬರುವ ಇನ್ನಷ್ಟು ಹೊಸ ಬೈಕ್‌ಗಳ ಬಿಡುಗಡೆಗೆ ಸಿದ್ದವಾಗಿದೆ.

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

390 ಅಡ್ವೆಂಚರ್ ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿರುವ ಹೊಸ 250 ಅಡ್ವೆಂಚರ್ ಮಾದರಿಯು 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಪ್ರಮುಖ ಅಂಶಗಳಾದ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಎರವಲು ಪಡೆದುಕೊಂಡಿದೆ.

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕಿನಲ್ಲಿ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯನ್ನು ಹೊರತುಪಡಿಸಿ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್‍ ಸಮನಾಂತರವಾಗಿರಲಿವೆ. 250 ಅಡ್ವೆಂಚರ್ ಬೈಕಿನಲ್ಲಿ 390 ಅಡ್ವೆಂಚರ್ ಬೈಕಿಗಿಂತಲೂ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ಹಾಗೂ ಹಾಲೊಜೆನ್ ಹೆಡ್‍‍ಲ್ಯಾಂಪ್ ಯುನಿಟ್ ಹೊಂದಿದ್ದು, ಪ್ರೀಮಿಯಂ ಮಾದರಿಯಾದ 390 ಅಡ್ವೆಂಚರ್ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಯುನಿಟ್ ನೀಡಲಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

ವರದಿಗಳ ಪ್ರಕಾರ, ಕೆಟಿಎಂ 250 ಅಡ್ವೆಂಚರ್ ಬೈಕ್ ಮಾದರಿಯು 390 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್ ಹಾಗೂ ಟಯರ್‍ ಮಾದರಿಗಳನ್ನೇ ಹೊಂದಿರಲಿದ್ದು, ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿರುವ 17 ಇಂಚಿನ ವ್ಹೀಲ್‍ಗಳು ಸೇರಿಸಲಾಗಿದೆ.

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

ಬೆಲೆ ಕಾರಣಕ್ಕೆ 390 ಅಡ್ವೆಂಚರ್ ಬೈಕಿನಲ್ಲಿರುವ ಹಲವು ಪ್ರೀಮಿಯಂ ಫೀಚರ್ಸ್‌ಗಳು 250 ಅಡ್ವೆಂಚರ್ ಬೈಕ್‌ನಲ್ಲಿ ನೀಡುವುದಿಲ್ಲ ಎನ್ನಲಾಗಿದ್ದು, 250 ಅಡ್ವೆಂಚರ್ ಬೈಕಿನಲ್ಲಿ 249ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ ಕೆಟಿಎಂ ಹೊಸ 250 ಅಡ್ವೆಂಚರ್ ಬೈಕ್

ಹೊಸ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 30-ಬಿ‍‍ಹೆಚ್‍‍ಪಿ ಮತ್ತು 24-ಎನ್‍ಎಂ ಟಾರ್ಕ್ ಉತ್ಪಾದಿಸಲಿದ್ದು, ಆಫ್-ರೋಡ್ ಕೌಶಲ್ಯಕ್ಕೆ ಬೇಕಾದ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳಿವೆ. ಇನ್ನು ಹೊಸ ಬೈಕಿನ ಬೆಲೆಯು ಸಾಮಾನ್ಯ ಡ್ಯೂಕ್ 250 ಮಾದರಿಯ ಬೆಲೆಗಿಂತ ತುಸು ಹೆಚ್ಚಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.20 ಲಕ್ಷದಿಂದ ರೂ. 2.40 ಲಕ್ಷದ ತನಕ ಬೆಲೆ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM 250 Adventure Launch Details Revealed. Read in Kannada.
Story first published: Friday, September 18, 2020, 22:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X