Just In
- 6 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 8 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 8 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 10 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ 250 ಅಡ್ವೆಂಚರ್
ಕೆಟಿಎಂ ಇಂಡಿಯಾ ಕಂಪನಿಯು ಶೀಘ್ರದಲ್ಲೇ ತನ್ನ ಹೊಚ್ಚ ಬೈಕ್ ಮಾದರಿಯಾದ 250 ಅಡ್ವೆಂಚರ್ ಬೈಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಅಡ್ವೆಂಚರ್ ಬೈಕ್ ಮಾದರಿಯು ಮಾಹಿತಿಗಳ ಪ್ರಕಾರ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಹೊಸ 250 ಅಡ್ವೆಂಚರ್ ಬೈಕ್ ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕೆಟಿಎಂ ಕಂಪನಿಯು ಬಿಡುಗಡೆಗಾಗಿ ಪೂರ್ವಭಾವಿ ಸಿದ್ದತೆ ನಡೆಸಿದ್ದು, ಹೊಸ ಬೈಕ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ 390 ಅಡ್ವೆಂಚರ್ ಬೈಕ್ ಮಾದರಿಯಲ್ಲೇ ಕೆಲವು ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ.
ಭಾರತದಲ್ಲಿ ತನ್ನ ಸರಣಿ ಬೈಕ್ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಹೊಸ ಬೈಕ್ಗಳನ್ನು ಬಿಡುಗಡೆ ಮಾಡಿದ್ದು, ಮುಂಬರುವ ಇನ್ನಷ್ಟು ಹೊಸ ಬೈಕ್ಗಳ ಬಿಡುಗಡೆಗೆ ಸಿದ್ದವಾಗಿದೆ.
390 ಅಡ್ವೆಂಚರ್ ಮಾದರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿರುವ ಹೊಸ 250 ಅಡ್ವೆಂಚರ್ ಮಾದರಿಯು 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಪ್ರಮುಖ ಅಂಶಗಳಾದ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಎರವಲು ಪಡೆದುಕೊಂಡಿದೆ.
250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಬೈಕಿನಲ್ಲಿ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯನ್ನು ಹೊರತುಪಡಿಸಿ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್ ಸಮನಾಂತರವಾಗಿರಲಿವೆ. 250 ಅಡ್ವೆಂಚರ್ ಬೈಕಿನಲ್ಲಿ 390 ಅಡ್ವೆಂಚರ್ ಬೈಕಿಗಿಂತಲೂ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ಹಾಗೂ ಹಾಲೊಜೆನ್ ಹೆಡ್ಲ್ಯಾಂಪ್ ಯುನಿಟ್ ಹೊಂದಿದ್ದು, ಪ್ರೀಮಿಯಂ ಮಾದರಿಯಾದ 390 ಅಡ್ವೆಂಚರ್ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್ಇಡಿ ಯುನಿಟ್ ನೀಡಲಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ
ವರದಿಗಳ ಪ್ರಕಾರ, ಕೆಟಿಎಂ 250 ಅಡ್ವೆಂಚರ್ ಬೈಕ್ ಮಾದರಿಯು 390 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್ ಹಾಗೂ ಟಯರ್ ಮಾದರಿಗಳನ್ನೇ ಹೊಂದಿರಲಿದ್ದು, ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿರುವ 17 ಇಂಚಿನ ವ್ಹೀಲ್ಗಳು ಸೇರಿಸಲಾಗಿದೆ.
ಬೆಲೆ ಕಾರಣಕ್ಕೆ 390 ಅಡ್ವೆಂಚರ್ ಬೈಕಿನಲ್ಲಿರುವ ಹಲವು ಪ್ರೀಮಿಯಂ ಫೀಚರ್ಸ್ಗಳು 250 ಅಡ್ವೆಂಚರ್ ಬೈಕ್ನಲ್ಲಿ ನೀಡುವುದಿಲ್ಲ ಎನ್ನಲಾಗಿದ್ದು, 250 ಅಡ್ವೆಂಚರ್ ಬೈಕಿನಲ್ಲಿ 249ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಬಿಎಸ್ 6 ಎಂಜಿನ್ ಅಳವಡಿಸಲಾಗುತ್ತಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್
ಹೊಸ ಎಂಜಿನ್ 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 30-ಬಿಹೆಚ್ಪಿ ಮತ್ತು 24-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಆಫ್-ರೋಡ್ ಕೌಶಲ್ಯಕ್ಕೆ ಬೇಕಾದ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳಿವೆ. ಇನ್ನು ಹೊಸ ಬೈಕಿನ ಬೆಲೆಯು ಸಾಮಾನ್ಯ ಡ್ಯೂಕ್ 250 ಮಾದರಿಯ ಬೆಲೆಗಿಂತ ತುಸು ಹೆಚ್ಚಿರಲಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 2.20 ಲಕ್ಷದಿಂದ ರೂ. 2.40 ಲಕ್ಷದ ತನಕ ಬೆಲೆ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.