ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಕೆಟಿಎಂ ಇಂಡಿಯಾ ತನ್ನ ಬಹುನಿರೀಕ್ಷಿತ 390 ಅಡ್ವೆಂಚರ್ ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಕೆಟಿ‍ಎಂ ತನ್ನ 390 ಅಡ್ವೆಂಚರ್ ಬೈಕಿನ ವಿತರಣೆಯನ್ನು ಭಾರತದಲ್ಲಿ ಆರಂಭಿಸಿದೆ. ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಅನ್ನು 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ಅನಾವರಣಗೊಳಿಸಲಾಗಿತ್ತು.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಕೆಟಿಎಂ 390 ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.99 ಲಕ್ಷಗಳಾಗಿದೆ. ಕೆಟಿಎಂ 390 ಅಡ್ವೆಂಚರ್ ಬೈಕ್ ಆಫ್ ರೋಡ್ ಟೂರರ್ ಆಗಿದ್ದು, ಈ ಬೈಕ್ 390 ಡ್ಯೂಕ್ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ. ಈ ಬೈಕ್ ಕೆಟಿಎಂ 790 ಅಡ್ವೆಂಚರ್ ಬೈಕಿನಿಂದಲೂ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದಿದೆ. ಕೆಟಿ‍ಎಂ 390 ಅಡ್ವೆಂಚರ್ ಬೈಕಿನ ವಿತರಣೆ ಮಾಡುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍‍ಲ್ಯಾಂಪ್‍, ಎಲ್‍ಇಡಿ ಟರ್ನ್‍ ಇಂಡಿಕೇಟರ್‍‍‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಬಣ್ಣದಿಂದ ಕೂಡಿದ ಆಕರ್ಷಕ ಟಿಎಫ್‍‍ಟಿ ಡಿಸ್‍‍ಪ್ಲೇ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ 19 ಇಂಚಿನ ಫ್ರಂಟ್ ಮತ್ತು 17 ಇಂಚಿನ ರೇರ್ ಅಲಾಯ್ ವ್ಹೀಲ್‍ಗಳೊಂದಿಗೆ ಮೆಟ್ಜೆಲರ್ ಟೌರೆನ್ಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಅಲ್ಯೂಮಿನಿಯಂ ಹ್ಯಾಂಡಲ್‍‍ಬಾರ್‍‍ಗಳು ಸ್ಪ್ಲಿಟ್ ಸೀಟುಗಳು ಮತ್ತು ಫ್ಯೂಯಲ್ ಟ್ಯಾಂಕ್ ಸ್ಪಾಯ್ಲರ್‍‍ಗಳನ್ನು ಕೂಡ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್‍‍ನ ಸೀಟು‍‍ಗಳು ವಿಸ್ತರಿಸಿದಾಗ ಹ್ಯಾಂ‍ಡಲ್ ಬಾರ್‍‍ಗಳನ್ನು ಹೆಚ್ಚಿಸಲಾಗುತ್ತದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಎಂಎಂ ಮತ್ತು 855 ಸೀಟ್ ಎತ್ತರವನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯೂಕ್ 390 ಬೈಕಿನಲ್ಲಿರುವಂತಹ 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಎಂಜಿನ್‍ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಎಬಿಎಸ್ ಆಫ್ ರೋಡ್ ಮೋಡ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಇದರಿಂದಾಗಿ ರೈಡರ್ ಎಬಿಎಸ್ ಅನ್ನು ಸಂಪೂರ್ಣವಾಗಿ ಆಫ್ ಮಾಡಲು ಸಾಧ್ಯವಾಗುತ್ತದೆ. 43 ಎಂಎಂ ಬ್ರೇಕಿಂಗ್ ಇನ್ವಿರ್ಡಡ್ ಫೋರ್ಕ್‍‍ಗಳನ್ನು ಹೊಂದಿದ್ದು, 170 ಎಂಎಂ ಮತ್ತು 177 ಎಂಎಂ ಮೊನೊಶಾಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಮುಂಭಾಗದಲ್ಲಿ 320 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕಿಂಗ್ ಅನ್ನು ಹೊಂದಿದೆ. ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೂಲ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ 390 ಅಡ್ವೆಂಚರ್ ಬೈಕಿನ ವಿತರಣೆ ಆರಂಭಿಸಿದ ಕೆಟಿಎಂ

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಟ್ರಾ ಕ್ಷನ್ ಕಂಟ್ರೂಲ್ ಮತ್ತು ಎಬಿಎಸ್ ನಂತಹ ಹೊಸ ಫೀಚರ್ಸ್‍‍ಗಳ ಜೊತೆಗೆ ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಹಾಗೂ ಬಿ‍ಎಂ‍‍ಡಬ್ಲ್ಯು ಮೋಟೊರಾಡ್ ಜಿ310ಜಿ‍ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM 390 Adventure delivery starts in India – First in the world. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X